ಜನವಾಡ: ನಾಥ ಷಷ್ಟಿ ಉತ್ಸವದ ಅಂಗವಾಗಿ ಬೀದರ್ ತಾಲ್ಲೂಕಿನ ರಾಜನಾಳ ಗ್ರಾಮದ ನೂತನ ಆದಿನಾಥ ಮಂದಿರದಲ್ಲಿ ಈಚೆಗೆ ಶ್ರದ್ಧಾ, ಭಕ್ತಿಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಸದ್ಗುರು ಗುರುಬಾಬಾ ಮಹಾರಾಜ, ಗೋರಕನಾಥ ಮಹಾರಾಜ, ಶ್ರೀರಂಗ ಮಹಾರಾಜ ಹಾಗೂ ಜ್ಞಾನರಾಜ ಮಹಾರಾಜ ಔಸೆಕರ್ ಅವರ ಸಾನ್ನಿಧ್ಯದಲ್ಲಿ ಔಸಾದ ಬ್ರಹ್ಮವೃಂದದವರು ಪೂಜಾ ವಿಧಾನಗಳನ್ನು ನಡೆಸಿಕೊಟ್ಟರು.

‘ಔಸಾದನಾಥ ಸಂಸ್ಥಾನವು 229 ವರ್ಷಗಳಿಂದ ನಾಥ ಸೃಷ್ಟಿ ಉತ್ಸವ ನಡೆಸಿಕೊಂಡು ಬರುತ್ತಿದೆ. ಪ್ರತಿ ವರ್ಷ ಒಂದು ಗ್ರಾಮದಲ್ಲಿ ಉತ್ಸವ ಆಚರಿಸಲಾಗುತ್ತಿದೆ. ಉತ್ಸವ ನಡೆಯುವ ಗ್ರಾಮದಲ್ಲಿ ನಾಥ ಮಂದಿರ ಸ್ಥಾಪಿಸುವ ಸಂಪ್ರದಾಯ ಇದ್ದು, ಅದರಂತೆ ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣದಲ್ಲಿ ನೂರಾರು ನಾಥ ಮಂದಿರಗಳು ನಿರ್ಮಾಣಗೊಂಡಿವೆ’ ಎಂದು ನಾಥ ಸಂಸ್ಥಾನದ ಪ್ರಮುಖರು ಹೇಳಿದರು.

‘2027ರಲ್ಲಿ ರಾಜನಾಳದಲ್ಲಿ 230ನೇ ನಾಥ ಷಷ್ಟಿ ಉತ್ಸವ ನಡೆಸಲು ನಿರ್ಧರಿಸಲಾಗಿದೆ. ಈ ನಿಮಿತ್ತ ಔಸೆಕರ್ ಮಹಾರಾಜರ ಸಹಕಾರದಿಂದ ಗ್ರಾಮದಲ್ಲಿ ಹೊಸ ಆದಿನಾಥ ದೇವಸ್ಥಾನ ನಿರ್ಮಿಸಲಾಗಿದೆ. ಆದಿನಾಥರ ಆಸನ, ವಿಠ್ಠಲ-ರುಕ್ಮಿಣಿ, ರಾಧಾ-ಕೃಷ್ಣ ಮೂರ್ತಿ, ಶಿವಲಿಂಗದ ಪ್ರಾಣ ಪ್ರತಿಷ್ಠಾಪಿಸಲಾಗಿದೆ’ ಎಂದು ಅವರು ತಿಳಿಸಿದರು.

ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಮುಖ್ಯ ಅತಿಥಿಯಾಗಿದ್ದರು. ವಿವಿಧೆಡೆಯ ಭಕ್ತರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-33-1463652282

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.