ರಂಜೋಳಖೇಣಿ(ಜನವಾಡ): ಕಾಯಂ ಶಿಕ್ಷಕರಿಬ್ಬರು ತಮ್ಮ ಸ್ವಂತ ಹಣ ಹಾಗೂ ದಾನಿಗಳ ನೆರವಿನಿಂದ ಬೀದರ್ ತಾಲ್ಲೂಕಿನ ರಂಜೋಳಖೇಣಿ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಹೊಸ ಕಳೆ ನೀಡಿದ್ದಾರೆ.

ಮುಖ್ಯಶಿಕ್ಷಕ ಮಂಜುನಾಥ ಎನ್.ಆರ್ ಹಾಗೂ ಚಿತ್ರಕಲಾ ಶಿಕ್ಷಕ ವಿಷ್ಣುಕಾಂತ್ ಠಾಕೂರ್ ಅವರ ವಿಶೇಷ ಪ್ರಯತ್ನದಿಂದಾಗಿ ಈಗ ಶಾಲೆಯ ಚಿತ್ರಣವೇ ಬದಲಾಗಿದೆ. ಶಾಲೆಯ ಆವರಣದಲ್ಲಿ ಅಂದದ ಉದ್ಯಾನ ಅರಳಿದೆ. ಗೋಡೆಗಳ ಮೇಲೆ ಕಣ್ಮನ ಸೆಳೆಯುವ ಆಕರ್ಷಕ ಚಿತ್ರಗಳು ರಚನೆಯಾಗಿವೆ.

₹2 ಲಕ್ಷ ವೆಚ್ಚದಲ್ಲಿ ಶಾಲೆಯಲ್ಲಿ ಉದ್ಯಾನ ನಿರ್ಮಾಣ ಹಾಗೂ ಗೋಡೆಗಳ ಮೇಲೆ ಚಿತ್ರ ರಚನೆ ಕಾರ್ಯ ಕೈಗೊಳ್ಳಲಾಗಿದೆ ಎಂದು ತಿಳಿಸುತ್ತಾರೆ ಮಂಜುನಾಥ ಎನ್.ಆರ್.

ಉದ್ಯಾನದಲ್ಲಿ ನೀರು ಚಿಮ್ಮಿಸುವ ಕಾರಂಜಿ ಕಟ್ಟಿಸಲಾಗಿದೆ. ಹೂವು, ಕರಿಬೇವು, ಅಲಂಕಾರಿಕ, ಔಷಧ ಸಸಿಗಳನ್ನು ನೆಡಲಾಗಿದೆ. ಪಾರ್ಕಿಂಗ್ ಟೈಲ್ಸ್ ಹಾಕಲಾಗಿದೆ. ಗ್ರಾಮದಲ್ಲಿ ಅಲ್ಲಲ್ಲಿ ಅನಾಥವಾಗಿ ಬಿದ್ದಿದ್ದ ಹಳೆಯ ಶಾಸನಗಳನ್ನು ತಂದು ಸಂರಕ್ಷಿಸಿ ಉದ್ಯಾನದ ಒಳಗೆ ಇಡಲಾಗಿದೆ ಎಂದು ಹೇಳುತ್ತಾರೆ.

ವಿದ್ಯಾರ್ಥಿಗಳು ಬಿಡುವಿನ ಅವಧಿಯಲ್ಲಿ ಉದ್ಯಾನದಲ್ಲಿ ಖುಷಿಯಿಂದ ಓದಬಹುದಾಗಿದೆ ಎಂದು ತಿಳಿಸುತ್ತಾರೆ.

‘ಚಿತ್ರಕಲಾ ಶಿಕ್ಷಕ ವಿಷ್ಣುಕಾಂತ್ ಠಾಕೂರ್ ಅವರು ಚಿತ್ರ ರಚನೆ ಮೂಲಕ ಶಾಲೆಯ ಗೋಡೆಗಳ ಸೌಂದರ್ಯ ಹೆಚ್ಚಿಸಿದ್ದಾರೆ’ ಎಂದು ಹೇಳುತ್ತಾರೆ.

‘ಗೋಡೆಗಳ ಮೇಲೆ ಸಮಾಜ ಸುಧಾರಕರು, ಸ್ವಾತಂತ್ರ್ಯ ಹೋರಾಟಗಾರರು, ಬಿದ್ರಿ ಕಲೆ ಚಿತ್ರ ಬಿಡಿಸಲಾಗಿದೆ. ಸರ್ಕಾರದ ಸೌಲಭ್ಯಗಳು, ವಿಷಯವಾರು ಮಾಹಿತಿ ಹಾಗೂ ಪ್ರೇರಣಾತ್ಮಕ ನುಡಿಗಳನ್ನು ಬರೆಯಲಾಗಿದೆ’ ಎಂದು ತಿಳಿಸುತ್ತಾರೆ.

‘ಶಾಲೆಗೆ ಮಕ್ಕಳನ್ನು ಆಕರ್ಷಿಸಲು, ಉತ್ತಮ ಕಲಿಕಾ ವಾತಾವರಣ ನಿರ್ಮಿಸಲು ಹಾಗೂ ಪರಿಸರ ಜಾಗೃತಿ ಮೂಡಿಸಲು ಉದ್ಯಾನ ಹಾಗೂ ಗೋಡೆ ಚಿತ್ರಗಳು ನೆರವಾಗಲಿವೆ’ ಎಂದು ಹೇಳುತ್ತಾರೆ.

ಉದ್ಯಾನ ಹಾಗೂ ಗೋಡೆ ಚಿತ್ರ ರಚನೆಗೆ ಹಳೆಯ ವಿದ್ಯಾರ್ಥಿಗಳು ಹಾಗೂ ದಾನಿಗಳು ₹60 ಸಾವಿರ, ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯವರು ₹20 ಸಾವಿರ ದೇಣಿಗೆ ನೀಡಿದ್ದಾರೆ. ಉಳಿದ ₹1.20 ಲಕ್ಷವನ್ನು ತಾನು ಹಾಗೂ ವಿಷ್ಣುಕಾಂತ್ ಠಾಕೂರ್ ಭರಿಸಿದ್ದಾಗಿ ತಿಳಿಸುತ್ತಾರೆ.

ಶಾಲೆಯಲ್ಲಿ ಇಬ್ಬರು ಕಾಯಂ ಶಿಕ್ಷಕರು ಇದ್ದೇವೆ. ಕಳೆದ ವರ್ಷ ನಾಲ್ವರು ಅತಿಥಿ ಉಪನ್ಯಾಸಕರು ಇದ್ದರು. ಈ ವರ್ಷ ಐವರು ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. 2025-26ನೇ ಶೈಕ್ಷಣಿಕ ವರ್ಷದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶಾಲೆ ಶೇ 100ಕ್ಕೆ 100 ರಷ್ಟು ಫಲಿತಾಂಶ ಪಡೆದು ಸಾಧನೆಗೈದಿದೆ ಎಂದು ಹೇಳುತ್ತಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-33-2097887299

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.