ಭಾನುವಾರ, ಫೆಬ್ರವರಿ 28, 2021
31 °C

ಬೀದರ್‌ನಲ್ಲಿ ಅತಿ ಕಡಿಮೆ ತಾಪಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬೀದರ್‌ನಲ್ಲಿ 5.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ಮಂಗಳವಾರ ದಾಖಲಾಗಿದೆ. ಇದು, ಈ ಋತುಮಾನದ ಅತಿ ಕಡಿಮೆ ತಾಪಮಾನ ಎನ್ನಲಾಗಿದ್ದು,  ಈ ಹಿಂದೆ 2019ರ ಜ.1ರಂದು ದಾಖಲಾಗಿದ್ದ 6.0 ಡಿಗ್ರಿ ಸೆಲ್ಸಿಯಸ್‌ ಅತಿ ಕಡಿಮೆ ತಾಪಮಾನದ ದಾಖಲೆಯನ್ನು ಹಿಂದಿಕ್ಕಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. 

ಬೀದರ್‌ನಲ್ಲಿ ಕಳೆದ ನವೆಂಬರ್‌ನಲ್ಲೂ ಕನಿಷ್ಠ 7 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ವಿಜಯಪುರದಲ್ಲಿ 9.5 ಡಿಗ್ರಿ ಸೆಲ್ಸಿಯಸ್‌, ಧಾರವಾಡ (10.2), ದಾವಣಗೆರೆ, ಹಾವೇರಿ, ಗದಗ, ಬೆಳಗಾವಿ ವಿಮಾನ ನಿಲ್ದಾಣಗಳಲ್ಲಿ ತಲಾ 11 ಡಿಗ್ರಿ ಸೆಲ್ಸಿಯಸ್ ಕಡಿಮೆ ತಾಪಮಾನ ಮಂಗಳವಾರ ದಾಖಲಾಗಿದೆ.

‘ಚಳಿಯ ತೀವ್ರತೆಯಿಂದ ತಾಪಮಾನದಲ್ಲಿ ಕುಸಿತ ಕಂಡು ಬರುತ್ತಿದೆ. 2019ರ ಬಳಿಕ ಈವರೆಗಿನ ಅವಧಿಯಲ್ಲಿ ಇದೇ ಅತಿ ಕಡಿಮೆ ತಾಪಮಾನ ದಾಖಲಾಗಿರುವುದು. ಜನವರಿ 15ರವರೆಗೆ ತಾಪಮಾನ ಇನ್ನೂ ಕಡಿಮೆಯಾಗುವ ಸಾಧ್ಯತೆಗಳಿವೆ’ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

‘ಉತ್ತರದಿಂದ ಬೀಸುತ್ತಿರುವ ಒಣಹವೆ, ಶೀತಗಾಳಿ, ಶುಭ್ರ ಆಕಾಶ ಹಾಗೂ ಲ್ಯಾನಿನೊ ಪ್ರಭಾವಗಳಿಂದ ತಾಪಮಾನ ಇಳಿಮುಖವಾಗುತ್ತಿದೆ. ಸರಾಸರಿಗಿಂತ ಈ ಬಾರಿ ಚಳಿ ಹೆಚ್ಚುತ್ತಲೇ ಇದೆ. ಮುಂಜಾನೆಯಿಂದಲೇ ದಟ್ಟವಾದ ಮಂಜು ಆವರಿಸುತ್ತಿದ್ದು, ಸಂಚಾರಕ್ಕೆ ತೊಡಕು ಮಾಡುತ್ತಿದೆ. ಕೆಲ ಬೆಳೆಗಳಿಗೆ ಈ ಹವಾಮಾನ ಸ್ಥಿತಿ ಪೂರಕವೂ ಆಗಿದೆ’ ಎಂದವರು ಮಾಹಿತಿ ನೀಡಿದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು