ರೇಕುಳಗಿ ಮೌಂಟ್(ಜನವಾಡ): ಬೀದರ್ ತಾಲ್ಲೂಕಿನ ರೇಕುಳಗಿ ಮೌಂಟ್ನ ಅನಾಥ ಪಿಂಡಕ ಬುದ್ಧ ವಿಹಾರದಲ್ಲಿ ಬುದ್ಧ ಪೂರ್ಣಿಮೆಯನ್ನು ಶುಕ್ರವಾರ ಶ್ರದ್ಧೆ, ಭಕ್ತಿಯಿಂದ ಆಚರಿಸಲಾಯಿತು.

ವಿಹಾರದಲ್ಲಿ ಬುದ್ಧ ವಂದನೆ, ಧಮ್ಮ ಧ್ವಜಾರೋಹಣ, ಸಾಮೂಹಿಕ ಬುದ್ಧ ಪೂಜೆ ಹಾಗೂ ಪ್ರವಚನ ಕಾರ್ಯಕ್ರಮಗಳು ನಡೆದವು.

‘ಗೌತಮ ಬುದ್ಧರ ಅಷ್ಟಾಂಗ ಮಾರ್ಗಗಳು ಎಂದಿಗೂ ಪ್ರಸ್ತುತವಾಗಿವೆ. ದುಃಖ ನಿವಾರಣೆಗೆ ಅಷ್ಟಾಂಗ ಮಾರ್ಗಗಳ ಮೊರೆ ಹೋಗಬೇಕು’ ಎಂದು ಪ್ರವಚನ ನೀಡಿದ ಭಂತೆ ರೇವತ ಹೇಳಿದರು.

‘ಬುದ್ಧ ತತ್ವಗಳ ಅನುಕರಣೆಯಿಂದ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ಕಾಣಬಹುದು. ಇಂದು ವಿಶ್ವಕ್ಕೆ ಗೌತಮ ಬುದ್ಧರ ತತ್ವಗಳ ಅವಶ್ಯಕತೆ ಇದೆಯೇ ಹೊರತು ಯುದ್ಧವಲ್ಲ’ ಎಂದು ಭಂತೆ ಧರ್ಮಪಾಲ್ ಹೇಳಿದರು.

ಭಿಕ್ಕುಣಿ ಪ್ರಜಾಪತಿ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ. ಪುಂಡಲೀಕರಾವ್, ಶಿವಮೂರ್ತಿ, ಸಚಿನ್ ಕೌಠಾ, ಪ್ರೇಮಸಾಗರ್ ದಾಂಡೇಕರ್ ಮೊದಲಾದವರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-33-1635961435

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.