ಬೀದರ್: ನಗರದ ಕೆಲ ಪ್ರಮುಖ ರಸ್ತೆಗಳ ವಿಭಜಕದ ನಡುವೆ ಬೃಹತ್ತಾಗಿ ಬೆಳೆದಿರುವ ಮರಗಳು ಅಪಾಯಕ್ಕೆ ಆಹ್ವಾನಿಸುತ್ತಿವೆ.

ಹೇಳಿ ಕೇಳಿ ಈಗ ಮಳೆಗಾಲದ ಹೊಸ್ತಿಲಲ್ಲಿ ಇದ್ದೇವೆ. ಅದರಲ್ಲೂ ಮೇ ತಿಂಗಳ ಕೊನೆ ಬಂತೆಂದರೆ ಗಾಡ್, ಗೂಡ್, ಗುಡುಗು, ಸಿಡಿಲು ಮಳೆಯಬ್ಬರ. ಅಲ್ಲಿ ಮರಗಳು ಬಿದ್ದವು, ಇಲ್ಲಿ ಕಂಬಗಳು ಬಿದ್ದವು. ವಿದ್ಯುತ್ ತಂತಿ ಕಡಿದು ಬಿತ್ತು. ಶೀಟುಗಳು ಹಾರಿ ಹೋದವು. ಸಿಡಿಲಿಗೆ ಇಂತಿಂತವರು ಸತ್ತರು. ಅಷ್ಟು ಜಾನುವಾರು ಸತ್ತವು. ಇಂಥದ್ದೇ ಸುದ್ದಿಗಳು ಸಾಮಾನ್ಯವಾಗಿರುತ್ತವೆ.

ಹೀಗಾಗಿಯೇ ಆಯಾ ಸ್ಥಳೀಯ ಸಂಸ್ಥೆಗಳು ಮಳೆಗಾಲ ಮುನ್ನವೇ ಇದಕ್ಕಾಗಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತವೆ. ಆದಷ್ಟು ಹೆಚ್ಚಿನ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತವೆ. ಜೆಸ್ಕಾಂ ಕೂಡ ಇದಕ್ಕೆ ಹೊರತಲ್ಲ. ಆದರೆ, ಈ ಸಲ ಆ ಸಿದ್ಧತೆ ಇನ್ನೂ ಆರಂಭಗೊಂಡಿಲ್ಲ.

ನಗರದ ಮನ್ನಳ್ಳಿ ರಸ್ತೆ, ಉದಗೀರ್ ರಸ್ತೆ, ಹೈದರಾಬಾದ್ ರಸ್ತೆ, ಕರ್ನಾಟಕ ಕಾಲೇಜು ರಸ್ತೆ ಸೇರಿದಂತೆ ಇನ್ನಿತರೆ ಪ್ರಮುಖ ರಸ್ತೆಗಳ ವಿಭಜಕಗಳಲ್ಲಿ ಮರಗಳು ಬೃಹತ್ ಆಗಿ ಬೆಳೆದಿವೆ. ಸುಮಾರು 20 ವರ್ಷಗಳ ಹಿಂದೆ ಅಂದಿನ ಜಿಲ್ಲಾಧಿಕಾರಿ ಹರ್ಷ ಗುಪ್ತಾ ಅವರು ರಸ್ತೆಗಳನ್ನು ವಿಸ್ತರಿಸಿ, ಎಲ್ಲ ಕಡೆಗಳಲ್ಲಿ ವಿಭಜಕಗಳ ನಡುವೆ ಗಿಡಗಳನ್ನು ಹಚ್ಚಿಸಿದ್ದರು. ಈಗ ಅವುಗಳು ಬೆಳೆದು ದೊಡ್ಡದಾಗಿವೆ. ಕೆಲವು ಕಡೆಗಳಲ್ಲಂತೂ ನೆರಳಿನ ಹೊದಿಕೆ ಹಾಸಿವೆ.

ಆದರೆ, ವಿಭಜಕಗಳ ಬದಿಯಲ್ಲೇ ಟಾರು, ಸಿಸಿ ರಸ್ತೆಗಳು ಇರುವುದರಿಂದ ಬೇರುಗಳು ಆಳಕ್ಕೆ ಇಳಿದಿಲ್ಲ. ಬಿರುಗಾಳಿ, ಮಳೆ ಬಂದರೆ ಅವುಗಳು ರಸ್ತೆ ಮೇಲೆ ಬೀಳುವ ಸಾಧ್ಯತೆ ಹೆಚ್ಚಿದೆ. ಹೋದ ವರ್ಷ ಮನ್ನಳ್ಳಿ ರಸ್ತೆಯಲ್ಲಿ ಮರಗಳು ಬಿದ್ದಿರುವುದು ಎಲ್ಲರ ಕಣ್ಣ ಮುಂದಿದೆ. ಇಂಥ ಘಟನೆಗಳು ಮರುಕಳಿಸದ ರೀತಿಯಲ್ಲಿ ಸ್ಥಳೀಯ ಆಡಳಿತಗಳು ಕ್ರಮ ಕೈಗೊಳ್ಳಬೇಕು. ಆದರೆ, ಅದ್ಯಾವುದೂ ಆಗಿಲ್ಲ ಎಂದು ಆರೋಪಿಸುತ್ತಾರೆ ಸಾರ್ವಜನಿಕರು.

‘ರಸ್ತೆ ವಿಭಜಕಗಳ ನಡುವೆ ದೊಡ್ಡದಾಗಿ ಬೆಳೆದು ನಿಂತಿರುವ ಕೆಲವು ಮರಗಳಿಗೆ ಬಹಳ ವಯಸ್ಸಾಗಿದೆ. ಬೇಕಾಬಿಟ್ಟಿ ಕೊಂಬೆಗಳು ಬೆಳೆದಿವೆ. ರಸ್ತೆಯಲ್ಲಿ ಜನ ಹಗಲು–ರಾತ್ರಿ ಓಡಾಡುತ್ತಾರೆ. ಹೋದ ವರ್ಷ ಮರ ಬಿದ್ದು ಸಾಕಷ್ಟು ಸಮಸ್ಯೆ ಉಂಟಾಗಿದೆ. ಅದೃಷ್ಟವಶಾತ್ ಯಾರಿಗೂ ಏನೂ ಆಗಿಲ್ಲ. ಆದರೆ, ಪ್ರತಿ ಸಲ ಹೀಗೆಯೇ ಆಗುತ್ತದೆ ಎಂದು ಭಾವಿಸಿಕೊಂಡರೆ ತಪ್ಪು. ಆದಕಾರಣ ಮನ್ನಳ್ಳಿ ರಸ್ತೆಯ ವಿಭಜಕಗಳಲ್ಲಿ ದೊಡ್ಡದಾಗಿ ಬೆಳೆದಿರುವ ಮರಗಳ ಕಾಂಡ ಕತ್ತರಿಸಿ, ಆಗಬಹುದಾದ ಅಪಾಯವನ್ನು ಮಹಾನಗರ ಪಾಲಿಕೆ ತಪ್ಪಿಸಬೇಕು’ ಎನ್ನುತ್ತಾರೆ ವಿದ್ಯಾನಗರ ಕಾಲೊನಿಯ ನಿವಾಸಿ ಸಿದ್ದರಾಮೇಶ್ವರ.ಎಸ್.

ಪಾದಚಾರಿ ಮಾರ್ಗಗಳಲ್ಲಿ ಹಚ್ಚಿದ ಗಿಡಗಳು ಈಗ ದೊಡ್ಡದಾಗಿ ಬೆಳೆದಿವೆ. ಒಂದು ಕಡೆ ಕಟ್ಟಡಗಳು, ಇನ್ನೊಂದೆಡೆ ಪಾದಚಾರಿ ಮಾರ್ಗ, ಮತ್ತೊಂದೆಡೆ ಕಾಂಕ್ರೀಟ್ ರಸ್ತೆ. ಇದರಿಂದ ಬೇರುಗಳು ಆಳಕ್ಕೆ ಬೆಳೆದಿಲ್ಲ. ಅನೇಕ ಮರಗಳು ಪೂರ್ಣ ಪ್ರಮಾಣದಲ್ಲಿ ವಾಲಿವೆ. ಜೋರು ಗಾಳಿ ಬಂದರೆ ರಸ್ತೆಗೆ ಬೀಳುವುದು ಖಚಿತ. ಆದಕಾರಣ ಇಂಥ ಮರಗಳ ಕಾಂಡಗಳನ್ನು ಆದಷ್ಟು ಶೀಘ್ರ ಕತ್ತರಿಸಬೇಕು. ಏಕೆಂದರೆ ಮಕ್ಕಳು, ಹಿರಿಯ ನಾಗರಿಕರು ಸೇರಿದಂತೆ ಎಲ್ಲರೂ ಓಡಾಡುತ್ತಿರುತ್ತಾರೆ. ಯಾರ ಪ್ರಾಣಕ್ಕೂ ಅಪಾಯ ಎದುರಾಗಬಾರದು ಎಂದು ಹೇಳುತ್ತಾರೆ ರಾಂಪೂರೆ ಕಾಲೊನಿಯ ನಿವಾಸಿ ಅಶೋಕ್.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-33-399095458

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.