ಬೀದರ್: ‘ಪೋಲಿಯೊ ನಿರ್ಮೂಲನೆ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಗಳ ಮೂಲಕ ಸೇವೆ ಸಲ್ಲಿಸುತ್ತಿರುವ ರೋಟರಿ ಸಂಸ್ಥೆ ಇದೀಗ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುತ್ತಿರುವುದು ಶ್ಲಾಘನೀಯ’ ಭಾಲ್ಕಿ ಹಿರೇಮಠದ ಗುರುಬಸವ ಪಟ್ಟದೇವರು ಹೇಳಿದರು.

ನಗರದ ಬಿ.ವಿ. ಭೂಮರೆಡ್ಡಿ ಕಾಲೇಜು ಆವರಣದಲ್ಲಿ ನಡೆದ ‘ರೈಸ್ ಕಲ್ಯಾಣ ಕರ್ನಾಟಕ ಯುವ ಸಮ್ಮೇಳನ’ದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಸಿಲ್ವರ್ ಸ್ಟಾರ್ ಅಧ್ಯಕ್ಷ ಆದಿಶ್ ವಾಲಿ ಮಾತನಾಡಿ, ‘ಕ್ರಿಕೆಟ್ ಪಂದ್ಯಾವಳಿ (ಆರ್ಸಿಪಿಎಲ್) ಆಯೋಜಿಸಿ ಸಂಗ್ರಹಿಸಿದ ನಿಧಿಯೊಂದಿಗೆ ಗುರುಕುಲ, ಶಾಹೀನ್, ಡೈಮಂಡ್ ಹಾಗೂ ಶಾರದಾ ಕಾಲೇಜುಗಳ ಸಹಯೋಗದಲ್ಲಿ ಸುಮಾರು ₹1 ಕೋಟಿ ಮೌಲ್ಯದ ಶಿಕ್ಷಣ ಸಹಾಯಧನವನ್ನು 50 ವಿದ್ಯಾರ್ಥಿಗಳಿಗೆ ಒದಗಿಸಲಾಗಿದೆ’ ಎಂದು ತಿಳಿಸಿದರು.

ರೋಟರಿ ಡಿಸ್ಟ್ರಿಕ್ಟ್ ಗವರ್ನರ್ ಎಂ.ಕೆ. ರವೀಂದ್ರ, ರೋಟರಿ 3160ರ ಭಾವಿ ಗವರ್ನರ್ ತ್ರಿವಿಕ್ರಮ್ ಜೋಶಿ ಮಾತನಾಡಿದರು.

ಈ ಸಂದರ್ಭದಲ್ಲಿ ರೋಟರಿ ಐಎಫ್ಆರ್ಸಿ ನೂತನ ಘಟಕದ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಬಿ.ವಿ. ಭೂಮರೆಡ್ಡಿ ಕಾಲೇಜು ಹಾಗೂ ಕರ್ನಾಟಕ ಕಾಲೇಜಿನಲ್ಲಿ ಹೊಸ ರೊಟ್ರಾಕ್ಟ್ ಕ್ಲಬ್ಗಳ ಸ್ಥಾಪನೆಗೆ ಚಾಲನೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಕೆ.ಆರ್.ಪಿ. ಸಾರಥಿ, ಕೇಶವ್ ಶ್ರೀನಿವಾಸ್ ಗೌಡ, ಡಾ. ರಜನೀಶ್ ವಾಲಿ, ಹಾವಶೆಟ್ಟಿ ಪಾಟೀಲ, ರಘು ಕೃಷ್ಣಮೂರ್ತಿ, ಆನಂದ ಕೋಟಾರ್ಕಿ, ಸಹನಾ ಪಾಟೀಲ, ನಿಹಾಲ್ ಸಿಂಗ್, ಭಾವೇಶ ಪಟೇಲ್, ಮನೀಶ್ ಸಿಂಧೋಲ, ನವೀನ್ ಗೋಯಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-33-1535177348

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.