ಬೀದರ್: ಕರ್ನಾಟಕ ಆರ್.ಟಿ.ಐ. ಕಾರ್ಯಕರ್ತರ ಸಂಘದ ಬೀದರ್ ಜಿಲ್ಲಾ ಸಮಿತಿಯ ಪ್ರಥಮ ಜಿಲ್ಲಾ ಸಮ್ಮೇಳನ ನಗರದಲ್ಲಿ ನಡೆಯಿತು.

ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಸಮಿತಿ ರಾಜ್ಯಾಧ್ಯಕ್ಷ ಬಾಬುರಾವ್ ಹೊನ್ನಾ, ‘2005ರಲ್ಲಿ ಜಾರಿಯಾದ ಮಾಹಿತಿ ಹಕ್ಕು ಕಾಯ್ದೆಯಿಂದ ಸಾಮಾನ್ಯ ನಾಗರಿಕರಿಗೆ ಅಧಿಕಾರಿಗಳನ್ನು ಪ್ರಶ್ನಿಸುವ ಹಕ್ಕು ದೊರೆತಿದೆ. ಆದರೆ, ಮಾಹಿತಿ ಕೇಳುವ ನಾಗರಿಕರಿಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಅಪರೋಕ್ಷವಾಗಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ, ನಿರುದ್ಯೋಗಿ ಯುವಕರನ್ನು ‘ಜೀರಳೆ’ ಹಾಗೂ ‘ಪರಾವಲಂಬಿ ಜೀವಿಗಳು’ ಎಂದು ಉಲ್ಲೇಖಿಸಿರುವುದು ಖಂಡನಾರ್ಹ’ ಎಂದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಘಾಳೆಪ್ಪ ಸೋರಳ್ಳಿ, ಉಪಾಧ್ಯಕ್ಷ ಮಲ್ಲಿಕಾರ್ಜುನ ಪನಸಾಲೆ ಜನವಾಡ, ಪ್ರಭು ಹೊಚ್ಚಕನಳ್ಳಿ, ನಜೀರ್ ಅಹ್ಮದ್ ಚೊಂಡಿ ಉಪಸ್ಥಿತರಿದ್ದರು.

ಜೈಶೀಲಕುಮಾರ ಅವರನ್ನು ಜಿಲ್ಲಾಧ್ಯಕ್ಷರಾಗಿ, ಪಪ್ಪುರಾಜ ಮೇತ್ರೆ, ಸಲ್ಮಾನ್ ಇಜಾಜ್ ಖಾನ್ ಹಾಗೂ ಶಾಹ್ ಮುಬಾಶೀರ್ ಇಸ್ಲಾಂ ಉಪಾಧ್ಯಕ್ಷರಾಗಿ, ಅನ್ವರ್ ಶಾಹ್ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ, ಅಬ್ದುಲ್ ಖಾಲೀದ್ ಹಾಗೂ ಶೇಖ್ ಅಮ್ಜದ್ ಪಾಶಾ ಅವರನ್ನು ಜಂಟಿ ಕಾರ್ಯದರ್ಶಿಗಳಾಗಿ, ಶಫಾಯತ್ ಅಲಿ ಅವರನ್ನು ಖಜಾಂಚಿಯಾಗಿ ಆಯ್ಕೆ ಮಾಡಲಾಯಿತು.

ಕಾರ್ಯಕಾರಿಣಿ ಸದಸ್ಯರಾಗಿ ಅಬ್ದುಲ್ ಶಮಿ ಅಲಿಮೊದ್ದೀನ್, ಗುಂಡಪ್ಪ ಜ್ಯೋತಿ, ಅರುಣಕುಮಾರ, ರವಿ ಬನಸೋಡೆ ಚಿದ್ರಿ, ಸೂರ್ಯಕಾಂತ, ಚಂದ್ರಕಾಂತ, ಚಾಂದೋಬಾ ಹಾಗೂ ಸೋನಿ ಅವರನ್ನು ಆಯ್ಕೆ ಮಾಡಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-33-1887535517

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.