ಬೀದರ್: ನಗರದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ಮೋಟಾರು ವಾಹನ ಇನ್ಸ್ಪೆಕ್ಟರ್ ಅನಂತರಾಮು ಎಂಬುವರು ವಾಹನ ಚಾಲಕರಿಂದ ಹಣ ವಸೂಲಿ ಮಾಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಆರ್ಟಿಒ ಜಿ.ಕೆ. ಬಿರಾದಾರ ಅವರು ನೋಟಿಸ್ ನೀಡಿದ್ದಾರೆ.

ಬೀದರ್–ಭಾಲ್ಕಿ ರಸ್ತೆಯಲ್ಲಿ ರಾತ್ರಿ ವೇಳೆ ವಾಹನಗಳ ತಪಾಸಣೆ ವೇಳೆ ಚಾಲಕರಿಂದ ಹಣ ಪಡೆದಿದ್ದಾರೆ ಎನ್ನಲಾಗಿದೆ. ಅನಂತರಾಮು ಅವರು ಜೀಪಿನಲ್ಲಿ ಕುಳಿತುಕೊಂಡು ವಾಹನಗಳ ದಾಖಲೆಗಳನ್ನು ಪರಿಶೀಲಿಸುತ್ತಿರುತ್ತಾರೆ. ಅವರ ಸಮ್ಮುಖದಲ್ಲೇ ಗುರು ಎಂಬ ವ್ಯಕ್ತಿ ವಾಹನ ಚಾಲಕರಿಂದ ಹಣ ಪಡೆದು, ವಾಹನದಲ್ಲಿ ತಂದಿರಿಸುವ ದೃಶ್ಯ ವಿಡಿಯೊದಲ್ಲಿದೆ. ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಗುರು ಇತ್ತೀಚೆಗೆ ಅಮಾನತುಗೊಂಡಿದ್ದಾರೆ. ಈ ಘಟನೆ ಯಾವಾಗ ನಡೆದಿದೆ ಎಂದು ಗೊತ್ತಾಗಿಲ್ಲ.

‘ವಿಡಿಯೊದಲ್ಲಿ ಇನ್ಸ್ಪೆಕ್ಟರ್ ಅನಂತರಾಮು ಅವರೇ ಇದ್ದಾರೆ. ಘಟನೆ ಸಂಬಂಧ ಅವರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದ್ದು, ಏಳು ದಿನಗಳಲ್ಲಿ ಉತ್ತರಿಸಲು ತಿಳಿಸಲಾಗಿದೆ. ಅವರ ಉತ್ತರ ನೋಡಿಕೊಂಡು ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಜಿ.ಕೆ. ಬಿರಾದಾರ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.