ಬೀದರ್: ಪೂರ್ವಾಪರ ವಿಚಾರಿಸದೇ ಸಾಮಾಜಿಕ ಜಾಲತಾಣಗಳಲ್ಲಿ ಬಂದ ವಿಷಯವನ್ನೇ ಸತ್ಯ ಎಂದು ನಂಬಿದ್ದರಿಂದ ನಗರದಲ್ಲಿ ಬುಧವಾರ ಗೊಂದಲ ಸೃಷ್ಟಿಯಾಗಿ, ಪೆಟ್ರೋಲ್ ಬಂಕ್ಗಳ ಎದುರು ಜನಜಾತ್ರೆ ಸೇರಲು ಕಾರಣವಾಯಿತು.

ಮಂಗಳವಾರ ರಾತ್ರಿ ಕೆಲವರು ಕ್ಯಾನ್ಗಳಲ್ಲಿ ಪೆಟ್ರೋಲ್, ಡೀಸೆಲ್ ಕೊಂಡೊಯ್ದರು. ಇಂಧನ ಕೊರತೆಯಾಗಲಿದ್ದು, ಕ್ಯಾನ್ಗಳಲ್ಲಿ ಕೊಂಡೊಯ್ಯುತ್ತಿದ್ದಾರೆ ಎಂಬ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತು. ಈ ವಿಷಯ ಎಲ್ಲೆಡೆ ಕಾಳ್ಗಿಚ್ಚಿನಂತೆ ಹಬ್ಬಿತು.

ಇದರಿಂದ ಆತಂಕಕ್ಕೆ ಒಳಗಾದ ವಾಹನ ಮಾಲೀಕರು, ಚಾಲಕರು ಬುಧವಾರ ಬೆಳಕು ಹರಿಯುತ್ತಿದ್ದಂತೆ ಪೆಟ್ರೋಲ್ ಬಂಕ್ಗಳತ್ತ ದೌಡಾಯಿಸಿದರು. ಎಂದಿನಂತೆ ನಿಗದಿತ ಸಿಬ್ಬಂದಿಯೊಂದಿಗೆ ಕೆಲಸ ನಿರ್ವಹಿಸುತ್ತಿದ್ದ ಬಂಕ್ಗಳು ಜನರನ್ನು ನಿಯಂತ್ರಿಸಲು ಪರದಾಡಿದವು.

ವಿಷಯ ಗೊತ್ತಾದ ನಂತರ ಹೆಚ್ಚಿನ ಸಿಬ್ಬಂದಿ ಕರೆಸಿಕೊಂಡು ಕೆಲಸ ನಿರ್ವಹಿಸಿದರು. ಪೆಟ್ರೋಲ್, ಡೀಸೆಲ್ ಕೊರತೆಯಾದರೆ ದೈನಂದಿನ ಕೆಲಸಗಳಿಗೆ ಸಮಸ್ಯೆಯಾಗುತ್ತದೆ ಎಂದು ಭಾವಿಸಿ, ತಮ್ಮ ಕೆಲಸದಿಂದ ದೂರ ಉಳಿದು ಬಂಕ್ಗಳಿಗೆ ಬಂದರು. ಈ ವಿಷಯ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತು. ಇದರಿಂದ ಹೆಚ್ಚಿನ ಜನ ಬಂಕ್ಗಳಿಗೆ ಬಂದು ಸರತಿ ಸಾಲಿನಲ್ಲಿ ನಿಂತರು. ಸಮಯ ಕಳೆಯುತ್ತಿದ್ದಂತೆ ನಗರದ ಎಲ್ಲ ಬಂಕ್ಗಳ ಎದುರು ಜನಜಾತ್ರೆ ನೆರೆಯಿತು. ಸಾಲು ಬೆಳೆಯುತ್ತ ಹೋಯಿತು.

‘ಸದ್ಯ ಇಂಧನಕ್ಕೆ ಯಾವುದೇ ಕೊರತೆಯಿಲ್ಲ’ ಎಂದು ಬಂಕ್ನವರು ಮನವರಿಕೆ ಮಾಡಿದರೂ ಜನ ನಂಬಲಿಲ್ಲ. ಗಂಟೆಗಳ ವರೆಗೆ ಸಾಲಿನಲ್ಲಿ ನಿಂತು ಇಂಧನ ತುಂಬಿಸಿಕೊಂಡರು. ಅನೇಕರು ಮುನ್ನೆಚ್ಚರಿಕೆ ಎಂಬಂತೆ ವಾಹನಗಳ ಟ್ಯಾಂಕ್ ತುಂಬಿಸಿಕೊಂಡು ನಿರ್ಗಮಿಸಿದರು. ನಿಗದಿತ ಸಮಯಕ್ಕೆ ಹಾಗೂ ತುರ್ತಾಗಿ ಕೆಲಸಕ್ಕೆ ಹೋಗಬೇಕಾದವರಿಗೆ ಸಕಾಲಕ್ಕೆ ಪೆಟ್ರೋಲ್ ಸಿಗದೇ ಸರತಿ ಸಾಲಿನಲ್ಲಿ ತಡಹೊತ್ತು ನಿಂತು ಪರದಾಡಿದರು.

‘ಬೀದರ್ನಲ್ಲಿ ಪೆಟ್ರೋಲ್ ಕೊರತೆಯಾಗಲಿದೆ ಎಂದು ಸೋಷಿಯಲ್ ಮೀಡಿಯಾದಿಂದ ಗೊತ್ತಾಯಿತು. ಅದಕ್ಕೆ ಪೆಟ್ರೋಲ್ ಹಾಕಿಸಿಕೊಳ್ಳಲು ಬಂದಿದ್ದೇನೆ. ಒಂದು ಗಂಟೆಯಿಂದ ಸಾಲಿನಲ್ಲಿ ನಿಂತಿರುವೆ. ಕೆಲಸಕ್ಕೆ ಹೋಗಲು ಸಾಕಷ್ಟು ವಿಳಂಬವಾಗಿದೆ’ ಎಂದು ಗುಂಪಾ ರಿಂಗ್ರೋಡ್ನಲ್ಲಿರುವ ರವಿ ಸ್ವಾಮಿ ಪೆಟ್ರೋಲ್ ಬಂಕ್ ಎದುರು ಸರತಿಯಲ್ಲಿ ನಿಂತಿದ್ದ ಖಾಸಗಿ ಕಂಪನಿಯ ಉದ್ಯೋಗಿ ರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

ವಿಷಯ ಗಮನಕ್ಕೆ ಬರುತ್ತಿದ್ದಂತೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ನಗರದ ಕೆಲ ಪೆಟ್ರೋಲ್ ಬಂಕ್ಗಳಿಗೆ ಭೇಟಿ ಕೊಟ್ಟು ಪರಿಶೀಲಿಸಿ, ಸ್ಟಾಕ್ ಬಗ್ಗೆ ಮಾಹಿತಿ ಪಡೆದರು.

‘ವದಂತಿಗೆ ಕಿವಿಗೊಡದಿರಿ, ತೈಲ ಕೊರತೆ ಇಲ್ಲ’

ಜಿಲ್ಲೆಯಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಎಲ್.ಪಿ.ಜಿ ಸಿಲಿಂಡರ್ಗಳ ಅಭಾವ ಉಂಟಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು. ಜಿಲ್ಲೆಯಲ್ಲಿ ಯಾವುದೇ ಕೊರತೆಯಿಲ್ಲ. ಜನ ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ತಿಳಿಸಿದ್ದಾರೆ.

ಜಿಲ್ಲೆಯಾದ್ಯಂತ ಎಲ್ಲ ತೈಲ ಕಂಪನಿ ಮತ್ತು ಪೆಟ್ರೋಲ್ ಬಂಕ್ಗಳಲ್ಲಿ ಸಾಕಷ್ಟು ಪ್ರಮಾಣದ ಇಂಧನ ದಾಸ್ತಾನು ಲಭ್ಯವಿದೆ. ಎಲ್ಲ ಬಂಕ್ಗಳಿಗೆ ನಿರಂತರವಾಗಿ ಇಂಧನ ಪೂರೈಕೆ ಮಾಡಲಾಗುತ್ತಿದೆ. ಪೂರೈಕೆಯಲ್ಲಿ ಯಾವುದೇ ರೀತಿಯ ವ್ಯತ್ಯಯ ಉಂಟಾಗಿಲ್ಲ. ಜನರು ಗಾಬರಿಯಿಂದ ಅಗತ್ಯಕ್ಕಿಂತ ಹೆಚ್ಚಿನ ಇಂಧನವನ್ನು ಸಂಗ್ರಹಿಸಿ ಇಟ್ಟುಕೊಳ್ಳಬಾರದು. ಇಂಧನ ಅಭಾವದ ಬಗ್ಗೆ ಸುಳ್ಳು ಸುದ್ಧಿ ಅಥವಾ ವದಂತಿ ಹಬ್ಬಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಜಿಲ್ಲೆಯಲ್ಲಿ ಗೃಹಬಳಕೆ ಸಿಲಿಂಡರ್ಗಳ ಸರಬರಾಜು ಸಮರ್ಪಕವಾಗಿ ನಡೆಯುತ್ತಿದೆ. ಗೃಹ ಬಳಕೆ ಸಿಲಿಂಡರ್ನ್ನು 25 ದಿನಗಳ ಬಳಿಕವೇ ಬುಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಜನರು ಆತಂಕಕ್ಕೆ ಒಳಗಾಗಿ ಗ್ಯಾಸ್ ಏಜೆನ್ಸಿಗಳ ಮುಂದೆ ಸೇರಬಾರದು ಎಂದು ತಿಳಿಸಿದ್ದಾರೆ.

‘ಸ್ವಲ್ಪ ವ್ಯತ್ಯಾಸ, ಗಾಬರಿ ಪಡಬೇಕಿಲ್ಲ’

‘ನಮ್ಮ ಬಂಕ್ನಲ್ಲಿ ಪೆಟ್ರೋಲ್, ಡೀಸೆಲ್ಗೆ ಸ್ವಲ್ಪ ಸಮಸ್ಯೆಯಾಗಿದೆ. ನಾಲ್ಕೈದು ದಿನಗಳಿಂದ ಎರಡು ಅಥವಾ ಮೂರು ದಿನಗಳಿಗೊಮ್ಮೆ ಲೋಡ್ ಬರುತ್ತಿದೆ. ಮುಂಗಡವಾಗಿ ಹಣ ಪಾವತಿಸಿದರೂ ಸಕಾಲಕ್ಕೆ ಇಂಧನ ಬರುತ್ತಿಲ್ಲ. ಹಾಗಂತ ಪೆಟ್ರೋಲ್, ಡೀಸೆಲ್ ಇಲ್ಲ ಅಂತಲ್ಲ. ಸ್ವಲ್ಪ ವ್ಯತ್ಯಾಸವಾಗುತ್ತಿದೆಯಷ್ಟೇ. ಯಾರೂ ಗಾಬರಿ ಪಡಬೇಕಿಲ್ಲ. ಇರಾನ್–ಇಸ್ರೇಲ್ ನಡುವೆ ಯುದ್ಧ ನಡೆಯುತ್ತಿರುವ ಕಾರಣ ಸ್ವಲ್ಪ ವ್ಯತ್ಯಾಸವಾಗಿದೆ. ಪಂಪ್ಗಳು ಡ್ರೈ ಆಗುತ್ತಿಲ್ಲ. ನಿತ್ಯ ಎರಡು ಲೋಡ್ ಬರುವುದು. ಒಂದು ಬರುತ್ತಿದೆ. ಸದ್ಯ ನಮ್ಮಲ್ಲಿ ಪೆಟ್ರೋಲ್, ಡೀಸೆಲ್ ಎರಡೂ ಸ್ಟಾಕ್ ಇದೆ. ಬಹುತೇಕ ಇತರೆ ಬಂಕ್ಗಳಲ್ಲೂ ಇದೇ ಪರಿಸ್ಥಿತಿ ಇದೆ. ಯಾರೂ ಹೆದರಬೇಕಿಲ್ಲ’ ಎಂದು ಬೀದರ್ನ ಖಂಡ್ರೆ ಪೆಟ್ರೋಲ್ ಬಂಕ್ ವ್ಯವಸ್ಥಾಪಕ ಶರಣು ವರಶೆಟ್ಟಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.