ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್ | ಸತ್ಯ ದರ್ಪಣ ಕ್ಯೂ.ಆರ್. ಕೋಡ್‍ಗೆ ಚಾಲನೆ

Published : 30 ಜುಲೈ 2023, 6:40 IST
Last Updated : 30 ಜುಲೈ 2023, 6:40 IST
ಫಾಲೋ ಮಾಡಿ
Comments

ಬೀದರ್: ಸತ್ಯ ದರ್ಪಣ ಕ್ಯೂ.ಆರ್. ಕೋಡ್‍ಗೆ ಚಾಲನೆ ಹಾಗೂ ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಡಿ.ವಿ. ಗುರುಪ್ರಸಾದ್ ರಚಿಸಿದ ‘ಕೈಗೆ ಬಂದ ತುತ್ತು’ ಆತ್ಮಕತೆಯ ಮೂರನೇ ಆವೃತ್ತಿ ಬಿಡುಗಡೆ ಕಾರ್ಯಕ್ರಮ ಇಲ್ಲಿಯ ಜಿಲ್ಲಾ ಪೊಲೀಸ್ ಹೆಡ್ ಕ್ವಾಟರ್ಸ್‍ನಲ್ಲಿ ನಡೆಯಿತು.

ಡಿ.ವಿ. ಗುರುಪ್ರಸಾದ್ ಅವರು ಕಾರ್ಯಕ್ರಮ ಉದ್ಘಾಟಿಸಿದರು. ‘ಜನಸ್ನೇಹಿ ಹಾಗೂ ಪಾರದರ್ಶಕ ಆಡಳಿತ ನೀಡುವುದು ಜಿಲ್ಲಾ ಪೊಲೀಸ್ ಗುರಿಯಾಗಿದೆ ಎಂದು’ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್ ತಿಳಿಸಿದರು.

ಪ್ರೊ. ಶಿವಕುಮಾರ ಕಟ್ಟೆ ಪುಸ್ತಕ ಪರಿಚಯ ನೀಡಿದರು. ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ರಾಘವೇಂದ್ರ ಔರಾದಕರ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಡಿಐಜಿ ಡಿ.ಸಿ.ರಾಜಣ್ಣ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹೇಶ ಮೇಘಣ್ಣನವರ್, ನಿವೃತ್ತ ಪೊಲೀಸ್ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಿ.ನಾರಾಯಣ, ಚನ್ನಬಸವ ಹೇಡೆ, ಶಂಭುಲಿಂಗ ವಾಲ್ದೊಡ್ಡಿ, ಹಂಶಕವಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT