ಬೀದರ್: ಒಳಮೀಸಲಾತಿ ಪ್ರಕಾರವೇ ಹೊಸ ಹುದ್ದೆಗಳನ್ನು ತುಂಬಬೇಕೆಂದು ಆಗ್ರಹಿಸಿ ಬೀದರ್ ಜಿಲ್ಲಾ ಮಾದಿಗ ಸಂಘಟನೆಗಳ ಒಕ್ಕೂಟದಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದ ಒಕ್ಕೂಟದ ಕಾರ್ಯಕರ್ತರು, ಬಳಿಕ ಜಿಲ್ಲಾಧಿಕಾರಿ ಕಚೇರಿ ತನಕ ರ್ಯಾಲಿ ನಡೆಸಿದರು. ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು.

ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಆಯೋಗ ಮಾಡಿದ ಶಿಫಾರಸ್ಸಿನಂತೆ ಪ್ರತಿಯೊಂದು ನೇಮಕಾತಿಯಲ್ಲಿ 6:6:5ರ ಅನುಪಾತದಂತೆ ನೇಮಕಾತಿ ಮಾಡಬೇಕು. 56,432 ಹುದ್ದೆಗಳನ್ನು ತುಂಬುವ ಪ್ರಕ್ರಿಯೆಯನ್ನು 30 ದಿನಗಳ ಒಳಗಾಗಿ ಪ್ರಾರಂಭಿಸಬೇಕೆಂದು ಆಗ್ರಹಿಸಿದರು.

ಒಂದುವೇಳೆ ರಾಜ್ಯ ಸರ್ಕಾರವು ಶೈಕ್ಷಣಿಕ ಸಂಸ್ಥೆಗಳು ಮತ್ತು ರಾಜ್ಯಾಧೀನ ಸೇವೆಗಳಲ್ಲಿನ ಸ್ಥಾನಗಳನ್ನು ಶೇ 50ರ ಮೀಸಲಿನಡಿ ಭರ್ತಿ ಮಾಡಲು ಮುಂದಾದರೆ, ಮಾದಿಗರ ಶೇ 6ರಷ್ಟು ಅನುಪಾತದಡಿ ಹುದ್ದೆ ತುಂಬಬೇಕು. ವಿವಿಧ ಇಲಾಖೆಗಳ ಹೊಸ ಹುದ್ದೆಗಳಿಗೆ ಅನುಗುಣವಾಗಿ ಕಡ್ಡಾಯವಾಗಿ ಶೈಕ್ಷಣಿಕ, ಔದ್ಯೋಗಿಕ ಕ್ಷೇತ್ರಗಳಲ್ಲಿ ಮಾದಿಗ ಸಮುದಾಯಕ್ಕೆ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸರ್ಕಾರವು 56,432 ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದ್ದು, ಸದರಿ ಪ್ರಕ್ರಿಯೆಯನ್ನು ತಕ್ಷಣವೇ ರದ್ದುಗೊಳಿಸಬೇಕು. ಸಂಪೂರ್ಣ ಒಳಮೀಸಲಾತಿ ಜಾರಿಯಾಗುವವರಗೆ ಯಾವುದೇ ರೀತಿಯ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಕೈಗೊಳ್ಳಬಾರದು. ಒಂದು ವೇಳೆ ಸರ್ಕಾರವು ನೇಮಕಾತಿ ಪ್ರಕ್ರಿಯೆಗಳನ್ನು ಮುಂದುವರಿಸಿದರೆ ಅದರ ವಿರುದ್ಧ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಒಕ್ಕೂಟದ ಅಧ್ಯಕ್ಷ ಕಲ್ಲಪ್ಪ ವೈದ್ಯ, ಒಕ್ಕೂಟದ ಪ್ರಮುಖರಾದ ರಾಜು ಕಡ್ಯಾಳ, ಫರ್ನಾಂಡಿಸ್ ಹಿಪ್ಪಳಗಾಂವ್, ದೇವಿದಾಸ ತುಮಕುಂಟೆ, ಕಮಲಾಕರ ಹೆಗಡೆ, ಪ್ರಭುರಾವ್ ತಾಳಮಡಗಿ, ಅಶೋಕ್ ಕಟ್ಟಿ, ವಿಜಯಕುಮಾರ್ ಹಿಪ್ಪಳಗಾಂವ್, ಪರಮೇಶ್ವರ ಕಾಳಮದರಗಿ, ಸ್ವಾಮಿದಾಸ್ ಮೇಘಾ, ಯುವರಾಜ ಭೇಡೆ, ರವಿ ನಿಜಾಂಪುರೆ, ಸುಧಾಕರ್ ಕೊಳ್ಳೂರ್, ಲಕ್ಷ್ಮಣರಾವ್ ಮುರಾಳ, ವೀರಶೆಟ್ಟಿ ಬಂಬುಳಗಿ, ಸ್ವಾಮಿದಾಸ ಕೆಂಪೇನೊರ್, ಪ್ರದೀಪ್ ಹೆಗಡೆ, ತುಕಾರಾಮ ಲಾಡೆ, ಲಾಲಪ್ಪ ನಿರ್ಣಾ, ರಾಜು ಸೋನೆ, ಶಿವಕುಮಾರ್ ಮೇತ್ರೆ, ಪಪ್ಪುರಾಜ ಚತುರೆ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.