ಬೀದರ್: ವಚನಾಮೃತ ಕನ್ನಡ ಸಂಘದಿಂದ ನಗರದ ಕಿತ್ತೂರು ರಾಣಿ ಚನ್ನಮ್ಮ ವೃತ್ತದ ಖಾಸಗಿ ಹೋಟೆಲ್ನಲ್ಲಿ ಶಿವಶರಣ ನಗೆಮಾರಿ ತಂದೆ ಹಾಗೂ ಕುಂಬಾರ ಗುಂಡಯ್ಯ ಕುರಿತು ವಿಚಾರ ಸಂಕಿರಣ ಆಯೋಜಿಸಲಾಗಿತ್ತು.

ಡಾ. ವಿಜಯಶ್ರೀ ಬಶೆಟ್ಟಿ ಉದ್ಘಾಟಿಸಿ, ವಿಶ್ವವೇ ಒಂದು ಕುಟುಂಬವೆಂಬ ಬಸವಾದಿ ಶರಣರ ತತ್ವ ಪಾಲಿಸಿದರೆ ದ್ವೇಷ, ಹಿಂಸೆ ಹಾಗೂ ಕ್ರೌರ್ಯ ಕೊನೆಗೊಳ್ಳುತ್ತದೆ. ಶರಣರ ತತ್ವಗಳಲ್ಲಿ ಮನುಕುಲ ಉದ್ಧಾರದ ಸೂತ್ರ ಅಡಗಿದೆ ಎಂದು ತಿಳಿಸಿದರು.

ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ಹಾಗೂ ಇತರ ಶರಣರು ಸರ್ವ ಸಮುದಾಯಕ್ಕೆ ಮಾನವೀಯ ಮೌಲ್ಯಗಳ ಅರಿವು ನೀಡಿದ್ದರು ಎಂದು ಹೇಳಿದರು.

ನಗೆಮಾರಿ ತಂದೆ ಕುರಿತು ಉಪನ್ಯಾಸ ನೀಡಿದ ಹಾಸ್ಯ ಕಲಾವಿದ ವೈಜಿನಾಥ ಸಜ್ಜನಶೆಟ್ಟಿ , ನಗೆಮಾರಿ ತಂದೆ ಅವರು ಶರಣರನ್ನು ನಗಿಸುವ ಕಾಯಕ ಮಾಡುತ್ತಿದ್ದರು. ಅವರ ಮಾತಿಗೆ ಅಲ್ಲಮ ಪ್ರಭುದೇವರು, ಬಸವಣ್ಣನವರು ಆದಿಯಾಗಿ ಎಲ್ಲ ಶರಣರು ನಕ್ಕು ನಲಿಯುತ್ತಿದ್ದರು ಎಂದು ತಿಳಿಸಿದರು.

ನಗೆಮಾರಿ ತಂದೆ ಅವರು 111 ವಚನಗಳನ್ನು ರಚಿಸಿದ್ದಾರೆ ಎಂದು ಹೇಳಿದರು. ಕುಂಬಾರ ಗುಂಡಯ್ಯ ಅವರ ಕುರಿತು ಉಪನ್ಯಾಸ ನೀಡಿದ ಶಿಕ್ಷಕಿ ಸ್ವರೂಪರಾಣಿ ನಾಗೂರೆ, ಕುಂಬಾರ ಗುಂಡಯ್ಯ ಭಲ್ಲುಂಕೆ ಗ್ರಾಮದಲ್ಲಿ ಜನಿಸಿದ್ದರು. ಶರಣರ ವಿಚಾರದಂತೆ ಕುಂಬಾರಿಕೆ ಪವಿತ್ರ ಕಾಯಕವೆಂದು ಭಾವಿಸಿದ್ದರು. ದೇವರ ಧ್ಯಾನ ಮಾಡುತ್ತ ಮಣ್ಣು ಹದ ಮಾಡುತ್ತಿದ್ದರು. ಗಡಿಗೆ ತಯಾರಿಸುತ್ತಿದ್ದರು ಎಂದು ತಿಳಿಸಿದರು.

ಅವರು ಯಾವುದೇ ವಚನ ರಚಿಸಿರಲಿಲ್ಲ. ಆದರೆ, ಶರಣರ ವಚನಗಳನ್ನು ಹಾಡುತ್ತ ಕಾಯಕದಲ್ಲಿ ನಿರತರಾಗುತ್ತಿದ್ದರು. ಗುಂಡಯ್ಯ ಅವರ ಪತ್ನಿ ಕೇತಲಾದೇವಿ ಬರೆದ ಎರಡು ವಚನಗಳು ದೊರೆತಿವೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ವಚನಾಮೃತ ಕನ್ನಡ ಸಂಘದ ಅಧ್ಯಕ್ಷ ಸಿದ್ರಾಮಪ್ಪ ಮಾಸಿಮಾಡೆ, ಸಂಘವು ಬದುಕಿಗೆ ಮಾರ್ಗದರ್ಶಿಯಾದ ಬಸವಾದಿ ಶರಣರ ವಚನ ಹಾಗೂ ಅವರ ಜೀವನದ ಮೇಲೆ ಬೆಳಕು ಚೆಲ್ಲುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ವಿದ್ಯಾಶ್ರೀ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಗಣಪತಿ ಸೋಲಪುರೆ, ಶಿಕ್ಷಕ ಪರಮೇಶ್ವರ ಭೂಶೆಟ್ಟಿ ಮುಖ್ಯ ಅತಿಥಿಯಾಗಿದ್ದರು. ಪ್ರವೀಣ್ ನಾಡಗೀತೆ ಹಾಡಿದರು. ರೇಣುಕಾ ಎನ್.ಬಿ. ಹಾಗೂ ಶ್ರೀಕಾಂತ ಬಿರಾದಾರ ವಚನ ಗಾಯನ ಮಾಡಿದರು. ಬಸವರಾಜ ಬಿರಾದಾರ ನಿರೂಪಿಸಿದರು. ಶಿಲ್ಪಾ ಮಜಗೆ ಸ್ವಾಗತಿಸಿದರು. ಶ್ರೀಕಾಂತ ಬಿರಾದಾರ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-33-91383655

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.