ಬೀದರ್: ಆಳಂದ ಪಟ್ಟಣದ ರಾಘವ ಚೈತನ್ಯ ಶಿವಲಿಂಗಕ್ಕೆ (ಲಾಡ್ಲೆ ಮಶಾಕ್ ದರ್ಗಾ) ಅಪಚಾರ ಮಾಡಿದವರನ್ನು ಯಾವುದೇ ಕಾರಣಕ್ಕೂ ಸರ್ಕಾರ ರಕ್ಷಿಸಬಾರದು’ ಎಂದು ಕೇಂದ್ರದ ಮಾಜಿ ಸಚಿವರೂ ಆದ ಬಿಜೆಪಿ ಮುಖಂಡ ಭಗವಂತ ಖೂಬಾ ಆಗ್ರಹಿಸಿದ್ದಾರೆ.

ರಾಜ್ಯದಲ್ಲಿರುವ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ, ಮುಸ್ಲಿಮರ ಓಲೈಕೆಗೆ ಮುಂದಾದೆ. ಬಹುಸಂಖ್ಯಾತ ಹಿಂದೂಗಳಿಗೆ ಅನ್ಯಾಯ ಮಾಡುತ್ತಿದೆ. ಯಾವುದೇ ಕಾರಣಕ್ಕೂ ರಾಘವಚೈತನ್ಯ ಶಿವಲಿಂಗ ಘಟನೆಯಲ್ಲಿ ದಾಖಲಾಗಿದ್ದ ಪ್ರಕರಣಗಳನ್ನು ಸರ್ಕಾರ ವಾಪಸ್ ಪಡೆದುಕೊಳ್ಳಬಾರದು. ಒಂದಿಂಚೂ ಬಹುಸಂಖ್ಯಾತರ ಭಾವನೆಗಳಿಗೆ ಸ್ಪಂದಿಸಬೇಕೆನ್ನುವ ಮನೋಭಾವನೆಯು ಈ ಸರ್ಕಾರದಲ್ಲಿ ಸಂಪೂರ್ಣವಾಗಿ ಸತ್ತು ಹೋಗಿದೆ. ಕೇವಲ ಮುಸ್ಲಿಮರಿಗೆ ಓಲೈಕೆ ಮಾಡುವಂಥ ಆಡಳಿತ ನೀಡುತ್ತಿದೆ ಎಂದು ಟೀಕಿಸಿ ಶುಕ್ರವಾರ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.

ಆಳಂದ ಪಟ್ಟಣದಲ್ಲಿರುವ ರಾಘವ ಚೈತನ್ಯ ಶಿವಲಿಂಗ ಮಠವನ್ನು ಈ ಹಿಂದೆ ಮುಸ್ಲಿಮರು ಅತಿಕ್ರಮಿಸಿ, ಲಾಡ್ಲೆ ಮಶಾಕ್ ದರ್ಗಾ ಮಾಡಿಕೊಂಡಿದ್ದಾರೆ. ಅಲ್ಲಿರುವ ಶಿವಲಿಂಗಕ್ಕೆ ಅಲ್ಲಿನ ಮುಸ್ಲಿಮರು ಅಪಚಾರ ಎಸಗಿದ್ದರು. ಆಗ ನಾನು ಕೇಂದ್ರ ಸಚಿವನಾಗಿದ್ದೆ. ಲೋಕಸಭಾ ಇದನ್ನು ಖಂಡಿಸಿ ಆ ವರ್ಷದ ಶಿವರಾತ್ರಿ ಹಬ್ಬದಂದು ನಾನು ಸೇರಿದಂತೆ ಸ್ವಾಮೀಜಿಗಳು, ಹಿಂದೂ ಧರ್ಮೀಯರೊಂದಿಗೆ ಸರ್ಕಾರದಿಂದ ಅನುಮತಿ ಪಡೆದು, ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ತೆರಳಿದಾಗ, ಅಲ್ಲಿಮ ಮುಸ್ಲಿಮರು ಅವರ ಮನೆಗಳಲ್ಲಿ ತಲ್ವಾರ, ಕೊಡಲಿ, ಕಲ್ಲು ಖಾರದ ಪುಡಿ ಸಂಗ್ರಹಿಸಿ, ನಮ್ಮ ಹಾಗೂ ಪೊಲೀಸರ ಮೇಲೆ ದಾಳಿ ನಡೆಸಿದ್ದರು. ಅಧಿಕಾರಿಗಳ ಕಾರುಗಳನ್ನು ಜಖಂಗೊಳಿಸಿದ್ದರು. ಆದಕಾರಣ ಅಂದಿನ ಸರ್ಕಾರ 13ಕ್ಕೂ ಹೆಚ್ಚು ಮುಸ್ಲಿಮರ ವಿರುದ್ಧ ಪ್ರಕರಣ ದಾಖಲಿಸಿತ್ತು. ವಾಸ್ತವ ಹೀಗಿರುವಾಗ ಆ ಪ್ರಕರಣ ಹಿಂಪಡೆಯುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.

ಸಿದ್ದರಾಮಯ್ಯನವರ ಸರ್ಕಾರ ಈ 13 ಪ್ರಕರಣ ವಾಪಸ್ ತೆಗೆದುಕೊಂಡು ಅರಾಜಕತೆ ಸೃಷ್ಟಿಸುವ ದುಸ್ಸಾಹಸ ಮಾಡುತ್ತಿದೆ. ಇದನ್ನು ನಾನು ಖಂಡಿಸುತ್ತೇನೆ. ಇದನ್ನು ಹಿಂದೂಗಳು ಸಹಿಸುವುದಿಲ್ಲ. ಮುಂದಿನ ದಿನಗಳಲ್ಲಿ ಹಿಂದೂಗಳು ಇದಕ್ಕೆ ತಕ್ಕ ಉತ್ತರ ಕೊಡಲಿದ್ದಾರೆ. ಹಿಂದೂಗಳು ಪೂಜಿಸುವ ಶಿವಲಿಂಗಕ್ಕೆ ಅಪಚಾರ ಮಾಡಿರುವ ಮುಸ್ಲಿಮರ ವಿರುದ್ದ ಕಾಂಗ್ರೆಸ್ ಪಕ್ಷದಲ್ಲಿರುವ ಹಿಂದೂ ಶಾಸಕರು, ಸಂಸದರು ಖಂಡಿಸಬೇಕು. ಪ್ರಕರಣ ವಾಪಸ್ ಪಡೆದುಕೊಳ್ಳುವ ಸರ್ಕಾರದ ಈ ನಿರ್ಧಾರವನ್ನು ವಿರೋಧಿಸಬೇಕೆಂದು ಆಗ್ರಹಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-33-284735667

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.