ಬೀದರ್: ಮತದಾರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯನ್ನು (ಎಸ್ಐಆರ್) ವಿರೋಧಿಸಿ ವಿವಿಧ ಸಂಘಟನೆಗಳು ನಗರದಲ್ಲಿ ಪ್ರತಿಭಟನೆ ನಡೆಸಿದವು.

‘ಎದ್ದೇಳು ಕರ್ನಾಟಕ’ ಸಂಘಟನೆ, ಎಸ್ಐಆರ್ ವಿರೋಧಿ ಕರ್ನಾಟಕ, ಪ್ರಗತಿಪರ ಹಾಗೂ ಜಾತ್ಯತೀತ ಪಕ್ಷಗಳ ಒಕ್ಕೂಟ ಹಾಗೂ ದಲಿತ ಸಂಘರ್ಷ ಸಮಿತಿ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದವು.

‘ಎದ್ದೇಳು ಕರ್ನಾಟಕ’ ಸಂಘಟನೆ, ಎಸ್ಐಆರ್ ವಿರೋಧಿ ಕರ್ನಾಟಕ, ಪ್ರಗತಿಪರ ಹಾಗೂ ಜಾತ್ಯತೀತ ಪಕ್ಷಗಳ ಒಕ್ಕೂಟದ ಪದಾಧಿಕಾರಿಗಳು ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಧರಣಿ ನಡೆಸಿ, ಬಳಿಕ ರ್ಯಾಲಿಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮುಖ್ಯಮಂತ್ರಿ, ರಾಜ್ಯ ಚುನಾವಣಾಧಿಕಾರಿಗಳ ಹೆಸರಿಗೆ ಬರೆದ ಮನವಿ ಪತ್ರವನ್ನು ಸಲ್ಲಿಸಿದರು. ಇನ್ನು, ದಸಂಸ ಪದಾಧಿಕಾರಿಗಳು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರಿಗೆ ಮನವಿ ಪತ್ರ ಸಲ್ಲಿಕೆ ಮಾಡಿದರು.

ಎಸ್ಐಆರ್ ಎಂಬುದು ಅಸಾಂವಿಧಾನಿಕ, ಅವೈಜ್ಞಾನಿಕ, ದೋಷಪೂರಿತ ಹಾಗೂ ದುರುದ್ದೇಶಪೂರಿತ ಮತದಾರರ ಪಟ್ಟಿಯ ಪರಿಷ್ಕರಣಾ ಪ್ರಕ್ರಿಯೆಯಾಗಿದೆ. ಸಾಮಾನ್ಯ ಮತದಾರರ ಹಕ್ಕುಗಳನ್ನು ಕಸಿಯುವ ಪ್ರಯತ್ನ ನಡೆಯುತ್ತಿದೆ. ಮತದಾರರ ಪಟ್ಟಿಯ ಪರಿಷ್ಕರಣೆ ಹೆಸರಿನಲ್ಲಿ ಬಡವರು, ಕಾರ್ಮಿಕರು, ಗ್ರಾಮೀಣ ಪ್ರದೇಶದ ಜನರು, ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗಗಳ ಜನರ ಮತದಾನದ ಹಕ್ಕುಗಳನ್ನು ದುರ್ಬಲಗೊಳಿಸುವ ಸಂಚು ನಡೆಯುತ್ತಿದೆ. ಸರ್ಕಾರ ಹಾಗೂ ಚುನಾವಣಾ ಆಯೋಗವು ಜನರಲ್ಲಿ ಗೊಂದಲ ಸೃಷ್ಟಿಸುವ ಬದಲು ಪಾರದರ್ಶಕ ಮತ್ತು ಸಂವಿಧಾನಬದ್ಧ ವಿಧಾನಗಳನ್ನು ಅನುಸರಿಸಬೇಕು ಎಂದು ಆಗ್ರಹಿಸಿದರು..

ಸಂವಿಧಾನ, ಪ್ರಜಾತಂತ್ರ ವಿರೋಧಿಯಾದ, ಜನ ವಿರೋಧಿಯಾದ ಎಸ್ಐಆರ್ ರದ್ದಾಗಬೇಕು. ಸಂವಿಧಾನಬದ್ಧವಾದ ಹಾಗೂ ಜನಸ್ನೇಹಿಯಾದ ಐಆರ್ ಜಾರಿಗೆ ತರಬೇಕು. ‘ಲಾಜಿಕಲ್ ಡಿಸ್ಕ್ರಿಪೆನ್ಸಿ’ ಎನ್ನುವ ಅವೈಜ್ಞಾನಿಕ, ಅಪಾರದರ್ಶಕ ವಿಧಾನವನ್ನು ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೂ ಅಳವಡಿಸಬಾರದು. ಜನವಿರೋಧಿ ಎಸ್ಐಆರ್ ವಿರುದ್ಧ ಸರ್ಕಾರವು ದಿಟ್ಟ ನಿಲುವು ತಾಳಬೇಕು ಎಂದು ಒತ್ತಾಯಿಸಿದರು.

ಹಾಲಿ ಎಸ್ಐಆರ್ ಸ್ವರೂಪವನ್ನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎಂದು ಕರ್ನಾಟಕ ಸರ್ಕಾರ ಘೋಷಿಸಬೇಕು. ಸ್ಪೆಲ್ಲಿಂಗ್, ದಿನಾಂಕದಂಥ ಕ್ಷುಲ್ಲಕ ವಿಚಾರಗಳನ್ನು ಇಟ್ಟುಕೊಂಡು ಮತದಾನದ ಹಕ್ಕಿನಿಂದ ಯಾರನ್ನೂ ಹೊರಗಿಡುವುದು ಅಕ್ಷಮ್ಯ ಅಪರಾಧ. ಕರಡು ಪಟ್ಟಿ ತಯಾರಾದ ನಂತರ ಯಾರ ಮತವನ್ನಾದರೂ ಸುಲಭವಾಗಿ ಹುಡುಕಬಹುದಾದ ರೀತಿಯಲ್ಲಿ, ಪಾರದರ್ಶಕತೆ ಇರುವ ರೀತಿ ಯಲ್ಲಿ ಅದನ್ನು ‘ಕಂಪ್ಯೂಟರ್ ರೀಡಬಲ್ ಫಾರ್ಮ್ಯಾಟಿ’ನಲ್ಲಿ ನೀಡಬೇಕು ಎಂದರು.

ಚೆಕ್ ಮೇಟ್ ಪಟ್ಟಿ ತಯಾರಿಸಬೇಕು. ವೈಜ್ಞಾನಿಕ ಹಾಗೂ ಜನಸ್ನೇಹಿ ವಿಧಾನವನ್ನು ಬಳಸಿ ರಾಜ್ಯ ಚುನಾವಣಾ ಆಯೋಗದ ಮೂಲಕ ಸ್ಥಳೀಯ ಸಂಸ್ಥೆಗಳಿಗಾಗಿ ತಯಾರಿಸಲಾಗುವ ರಾಜ್ಯ ಮತದಾರರ ಪಟ್ಟಿಯನ್ನು ಪರಿಷ್ಕರಿಸಬೇಕು. ವಿಶೇಷ ಗ್ರಾಮ ಸಭೆಗಳಲ್ಲಿ ಪರಿಶೀಲನೆಗೊಂಡು ದೃಢಗೊಂಡ ಮತದಾರರಿಗೆ ಅವರ ದಾಖಲೆಗಳ ಸಮೇತ ಸ್ಮಾರ್ಟ್ ಕಾರ್ಡ್ ನೀಡಬೇಕು. ದಾಖಲೆ ಇಲ್ಲದವರಿಗೆ 'ವಾಸ ಧೃಡೀಕರಣ ಪತ್ರ' ವನ್ನು ತಕ್ಷಣವೇ ವಿತರಿಸಬೇಕು. ಪ್ರತಿಯೊಂದು ಗ್ರಾಮ ಪಂಚಾಯಿತಿ ಮತ್ತು ವಾರ್ಡ್ ಪ್ರದೇಶಗಳಲ್ಲಿ 'ಮತದಾರರ ನೆರವು ಕೇಂದ್ರ'ಗಳನ್ನು ತೆರೆಯಬೇಕು ಎಂದು ಆಗ್ರಹಿಸಿದರು.

ಎಸ್ಐಆರ್ ವಿರುದ್ದದ ಹೋರಾಟ ಆರಂಭವಾಗಿದೆ. ನಮ್ಮ ಈ ಮೇಲಿನ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆಯನ್ನು ರಾಜ್ಯದಾದ್ಯಂತ ತೀವ್ರಗೊಳಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಎಸ್ಐಆರ್ ವಿರೋಧಿ ಹೋರಾಟ ಸಮಿತಿಯ ಪ್ರಮುಖರಾದ ಬಸವರಾಜ ಜಾಬಶೆಟ್ಟಿ, ಮಾರುತಿ ಬೌದ್ಧೆ, ಓಂಪ್ರಕಾಶ್ ರೊಟ್ಟೆ, ಮಹೇಶ್ ಗೋರನಾಳಕರ್, ಬಾಬುರಾವ್ ಹೊನ್ನಾ, ವಿಠ್ಠಲದಾಸ ಪ್ಯಾಗೆ, ನಿಜಾಮುದ್ದೀನ್, ಅಮೃತರಾವ್ ಚಿಮಕೋಡೆ, ಜಗದೀಶ್ವರ ಬಿರಾದಾರ, ಗೋಪಾಲ್ ಸಿಂಗ್ ಠಾಕೂರ್, ವಿನಯಕುಮಾರ್ ಮಾಳಗೆ, ಸಿದ್ದಪ್ಪ ಫುಲಾರಿ, ಹಣಮಂತ ಮಟ್ಟೆ, ಮಹಮ್ಮದ್ ಆಸಿಫುದ್ದೀನ್, ರಜಿಯಾ ಬಳಬಟ್ಟಿ, ಮುಬಸೀರ್ ಸಿಂಧೆ, ಅಸ್ಮಾ ಸುಲ್ತಾನಾ, ಭೀಮ್ ಸಂಗಮ, ವಿಜಯಕುಮಾರ, ಫಿರಾಸತ್ ಅಲಿ, ಮೌಲಾನಾ ಅಬ್ದುಲ್ ಗಫಾರ್, ದುರ್ಗಪ್ಪ, ರಾಮಪ್ಪ, ದಸಂಸ ಮುಖಂಡರಾದ ಬಾಬುರಾವ್ ಪಾಸ್ವಾನ್, ಅನಿಲಕುಮಾರ್ ಬೆಲ್ದಾರ್, ಸಂದೀಪ್ ಕಾಂಟೆ, ಪ್ರದೀಪ್ ನಾಟೇಕರ್, ಶ್ರೀಪತಿರಾವ್ ದೀನೆ, ಶಿವಕುಮಾರ ನೀಲಿಕಟ್ಟಿ, ತುಕಾರಾಮ ಲಾಡಕರ, ಶಿವರಾಜ ಲಾಡಕರ, ಸಾಯಿ ಶಿಂಧೆ, ಅವಿನಾಶ ದೀನೆ, ರಾಜಕುಮಾರ ಶೇರಿಕರ, ವಿಠಲ ಲಾಡಕರ, ಪುಟರಾಜ ದೀನೆ, ಮೊಗಲಪ್ಪ ಮಾಳಗೆ, ಸತೀಶ ಲಕ್ಕಿ, ಸುನೀಲ ಸಂಗಮ, ರಮೇಶ ಮಂದಕನಳ್ಳಿ, ರಮೇಶ ಪಾಸ್ವಾನ್, ಪ್ರಸನ್ನ ಡಾಂಗೆ ಮತ್ತಿತರರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-33-195690121

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.