ಬೀದರ್: ನಗರದ ಮೈಲೂರಿನ ವಿದ್ಯಾಶ್ರೀ ಆಂಗ್ಲ ಪ್ರೌಢಶಾಲೆಯ ವಿದ್ಯಾರ್ಥಿನಿ ಅಕ್ಷಾ ಜೈನಬ್ ಅವರು ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಇಂಗ್ಲಿಷ್ ವಿಷಯದಲ್ಲಿ 85 ಅಂಕಗಳನ್ನು ಗಳಿಸಿದ್ದಾರೆ. ಆದರೆ, ಫಲಿತಾಂಶದಲ್ಲಿ ಕೇವಲ 17 ಅಂಕಗಳನ್ನು ನೀಡಲಾಗಿದೆ!

ಇದು ಇತ್ತೀಚೆಗೆ ಎಸ್ಎಸ್ಎಲ್ಸಿ ಪರೀಕ್ಷಾ ಮಂಡಳಿ ಘೋಷಿಸಿದ ಫಲಿತಾಂಶದಲ್ಲಾದ ಎಡವಟ್ಟು.

ಫಲಿತಾಂಶ ಘೋಷಿಸಿದ ದಿನ ಅಕ್ಷಾ ಅವರು ತಮ್ಮ ಫಲಿತಾಂಶದ ಮಾಹಿತಿ ತಿಳಿದುಕೊಂಡಾಗ ಇಂಗ್ಲಿಷ್ ವಿಷಯದಲ್ಲಿ 17 ಅಂಕಗಳು ಬಂದಿರುವುದು ತಿಳಿದು ಅಚ್ಚರಿ ಪಟ್ಟು, ತೀವ್ರ ಬೇಸರಗೊಂಡಿದ್ದರು. ಬಳಿಕ ಅವರು ಪರೀಕ್ಷಾ ಮಂಡಳಿಯಿಂದ ಆ ವಿಷಯದ ಉತ್ತರ ಪತ್ರಿಕೆಯ ನಕಲು ಪ್ರತಿಗಳನ್ನು ತರಿಸಿಕೊಂಡು ಪರಿಶೀಲಿಸಿದಾಗ, ಮೌಲ್ಯಮಾಪನ ಮಾಡಿದವರೇ ಉತ್ತರ ಪತ್ರಿಕೆಯಲ್ಲಿ 85 ಅಂಕಗಳನ್ನು ನಮೂದಿಸಿದ್ದಾರೆ. ಆದರೆ, ಫಲಿತಾಂಶದಲ್ಲಿ 85 ಅಂಕಗಳನ್ನು ಸೇರಿಸುವುದರ ಬದಲು 17 ಅಂಕಗಳನ್ನು ನೀಡಿದ್ದಾರೆ ಎಂಬುದು ಗೊತ್ತಾಗಿದೆ.

ಅಕ್ಷಾ ಜೈನಬ್ ಅವರ ತಂದೆ ಮೊಹಮ್ಮದ್ ಖಾಜಾ ಅವರು ಪೊಲೀಸ್ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಈ ವಿಷಯ ಗಮನಕ್ಕೆ ಬಂದ ನಂತರ ಮಗಳೊಂದಿಗೆ ಶಾಲೆಗೆ ತೆರಳಿ, ವಿರೋಧ ದಾಖಲಿಸಿದ್ದಾರೆ. ಮಗಳಿಗಾದ ಅನ್ಯಾಯ ಸರಿಪಡಿಸಲು ಆಗ್ರಹಿಸಿದ್ದಾರೆ. ಶಾಲೆಯ ಮುಖ್ಯಶಿಕ್ಷಕರು, ‘ಎಸ್ಎಸ್ಎಲ್ಸಿ ಪರೀಕ್ಷಾ ಮಂಡಳಿಯ ಗಮನಕ್ಕೆ ವಿಷಯ ತಂದು, ನ್ಯಾಯ ಒದಗಿಸಿಕೊಡುವ ಆಶ್ವಾಸನೆ’ ನೀಡಿದ್ದಾರೆ. ಇದರಿಂದ ಅಕ್ಷಾ ಹಾಗೂ ಅವರ ತಂದೆ ಮೊಹಮ್ಮದ್ ಖಾಜಾ ಅವರು ನಿಟ್ಟುಸಿರು ಬಿಟ್ಟಿದ್ದಾರೆ.

ಅಂದಹಾಗೆ, ಒಟ್ಟು 625 ಅಂಕಗಳಿಗೆ ಅಕ್ಷಾ 483 ಅಂಕಗಳನ್ನು ಗಳಿಸಿದ್ದಾರೆ. ಇಂಗ್ಲಿಷ್ನಲ್ಲಿ 17 ಅಂಕಗಳ ಬದಲು ಅವರಿಗೆ ವಾಸ್ತವದಲ್ಲಿ ಕೊಡಬೇಕಾದ 85 ಅಂಕಗಳು, 25 ಆಂತರಿಕ ಅಂಕಗಳನ್ನು ಸೇರಿಸಿದರೆ ಅವರು ಒಟ್ಟು 551 ಅಂಕಗಳನ್ನು ಗಳಿಸಿದಂತಾಗುತ್ತದೆ.

‘ಫಲಿತಾಂಶ ಕೊಡುವುದರಲ್ಲಿ ಆದ ತಪ್ಪು ಗಮನಕ್ಕೆ ತಂದ ನಂತರ ಸರಿಪಡಿಸುವುದಾಗಿ ತಿಳಿಸಿದ್ದಾರೆ. ಆದರೆ, ನನ್ನ ಮಗಳು ಉತ್ತಮವಾಗಿ ಓದಿ ಪರೀಕ್ಷೆ ಬರೆದಿದ್ದಳು. ಫಲಿತಾಂಶ ನೋಡಿದ ನಂತರ ಆಕೆಗೆ ನಂಬಿಕೆ ಬರಲಿಲ್ಲ. ಆದಕಾರಣ ಉತ್ತರ ಪತ್ರಿಕೆ ತರಿಸಿಕೊಂಡು ನೋಡಿದ್ದೆವು. ಈ ಘಟನೆಯಿಂದ ನನ್ನ ಮಗಳಿಗೆ ಬಹಳ ನೋವಾಗಿದೆ. ಸರಿಪಡಿಸುವ ಆಶ್ವಾಸನೆ ಕೊಟ್ಟ ನಂತರ ಆಕೆ ಸಮಾಧಾನಗೊಂಡಿದ್ದಾಳೆ. ಮೌಲ್ಯಮಾಪನ ಸರಿಯಾಗಿ ಮಾಡಿದರೂ ಅಂಕ ಪಟ್ಟಿಯಲ್ಲಿ ಅದನ್ನು ಸರಿಯಾಗಿ ನಮೂದಿಸಲು ಎಡವಿರುವುದು ಸರಿಯಲ್ಲ. ಯಾವ ವಿದ್ಯಾರ್ಥಿಗೂ ಈ ರೀತಿ ಆಗಬಾರದು’ ಎಂದು ಮೊಹಮ್ಮದ್ ಖಾಜಾ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ಹಿಂದೂ ಬಾಲಕಿಗೆ ಉರ್ದುವಿನಲ್ಲಿ 125 ಅಂಕ

ಭಾಲ್ಕಿ ತಾಲ್ಲೂಕಿನ ಭಾತಂಬ್ರಾ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ, ಹಿಂದೂ ಧರ್ಮೀಯರಾದ ಲಾವಣ್ಯ ಗುಂಡಪ್ಪ ಅವರು ಎಸ್ಎಸ್ಎಲ್ಸಿ ಪರೀಕ್ಷೆಯ ಉರ್ದು ಭಾಷೆಯಲ್ಲಿ 125ಕ್ಕೆ 125 ಅಂಕ ಗಳಿಸಿದ್ದಾರೆ.

ಒಟ್ಟು 625ಕ್ಕೆ 561 ಅಂಕಗಳನ್ನು ಗಳಿಸಿದ್ದಾರೆ. ಇವರ ಮನೆಯ ಭಾಷೆ ಕನ್ನಡ. ಆದರೆ, ಊರಲ್ಲಿ ಕೆಲವರು ಉರ್ದುವಿನಲ್ಲಿ ಮಾತನಾಡುತ್ತಿದ್ದರು. 1ರಿಂದ 8ನೇ ತರಗತಿ ವರೆಗೆ ಕಲಬುರಗಿ ಜಿಲ್ಲೆ ಆಳಂದ ತಾಲ್ಲೂಕಿನ ಗುಲ್ಲಹಳ್ಳಿಯಲ್ಲಿ ಉರ್ದು ಮಾತೃಭಾಷೆಯಾಗಿ ಅಧ್ಯಯನ ಮಾಡಿದ ಇವರು, ಆನಂತರ ಭಾತಂಬ್ರಾ ಶಾಲೆಗೆ ಪ್ರವೇಶ ಪಡೆದು, ಓದು ಮುಂದುವರಿಸಿದರು. ಕನ್ನಡ ಭಾಷೆಯಲ್ಲಿ 74 ಅಂಕಗಳನ್ನು ಗಳಿಸಿದ್ದಾರೆ. ‘ಉರ್ದು ನನಗೆ ಇಷ್ಟವಾದ ವಿಷಯ. ಇಷ್ಟಪಟ್ಟು ಓದಿದ ಕಾರಣ 125 ಅಂಕಗಳು ಬಂದಿವೆ. ಪಿಯುಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ ಓದುವ ಆಸೆಯಿದೆ’ ಎಂದು ಲಾವಣ್ಯ ಹೇಳಿದ್ದಾರೆ.

‘ಲಾವಣ್ಯ ಅವರ ಮನೆಯಲ್ಲಿ ಎಲ್ಲರೂ ಕನ್ನಡದಲ್ಲಿ ಮಾತನಾಡುತ್ತಾರೆ. ಆದರೂ ಅವರು ಉರ್ದು ಭಾಷೆಯಲ್ಲಿ 125ಕ್ಕೆ 125 ಅಂಕಗಳನ್ನು ಗಳಿಸಿದ್ದಾರೆ. ಎಷ್ಟೋ ಜನರಿಗೆ ಉರ್ದು ಮಾತೃಭಾಷೆಯಾಗಿದ್ದರೂ ಈ ಸಾಧನೆ ಮಾಡಿಲ್ಲ. ಅಂಥದ್ದರಲ್ಲಿ ಲಾವಣ್ಯ ಸಾಧನೆ ದೊಡ್ಡದು. ಇದು ಹೆಮ್ಮೆಯ ಸಂಗತಿ’ ಎಂದು ಕರ್ನಾಟಕ ಉರ್ದು ಅಕಾಡೆಮಿ ಸದಸ್ಯ ಮೊಹಮ್ಮದ್ ಅಮೀನ್ ನವಾಜ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.