ಬೀದರ್: ಸ್ವಾಮಿ ವಿವೇಕಾನಂದ ಚೆಸ್ ಅಕಾಡೆಮಿ ವತಿಯಿಂದ ಇಲ್ಲಿಯ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ 7 ರಿಂದ 17 ವರ್ಷದ ಒಳಗಿನ ಮಕ್ಕಳಿಗೆ ಹಮ್ಮಿಕೊಂಡಿದ್ದ ಹತ್ತು ದಿನಗಳ ಬೇಸಿಗೆ ಚೆಸ್ ತರಬೇತಿ ಶಿಬಿರ ಭಾನುವಾರ ಸಮಾರೋಪಗೊಂಡಿತು.

ಜಿಲ್ಲೆಯ 60 ಮಕ್ಕಳು ತರಬೇತಿಯಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಶಿವಮೊಗ್ಗದ ಅಂತರರಾಷ್ಟ್ರೀಯ ಚೆಸ್ ತೀರ್ಪುಗಾರ ಪ್ರಾಣೇಶ್ ಯಾದವ್ ತರಬೇತಿ ನೀಡಿದರು. ಶರಣಪ್ಪ ಚಿಟಗುಪ್ಪ ಸಹಾಯಕ ತರಬೇತುದಾರರಾಗಿ ಕಾರ್ಯ ನಿರ್ವಹಿಸಿದರು. ತರಬೇತಿ ಬಳಿಕ ಮಕ್ಕಳಿಗೆ ಮೂರು ವಿಭಾಗದಲ್ಲಿ ಸ್ಪರ್ಧೆ ಏರ್ಪಡಿಸಿ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

8 ವರ್ಷದ ಒಳಗಿನ ಬಾಲಕರ ವಿಭಾಗದಲ್ಲಿ ಸತ್ಯಜೀತ್ ಶಾಹು (ಪ್ರಥಮ), ಶ್ರೀಹಾನ್ (ದ್ವಿತೀಯ), ಶರಣ್ ಇಟಗಿ (ತೃತೀಯ) ಬಹುಮಾನ ಪಡೆದರು.

ಬಾಲಕಿಯರ ವಿಭಾಗದಲ್ಲಿ ಶಿವಾಂಗಿ ಪ್ರಥಮ, ಆರಾಧನಾ ಆರ್. ಪಾಟೀಲ ದ್ವಿತೀಯ ಬಹುಮಾನ ಗಿಟ್ಟಿಸಿಕೊಂಡರು.

10 ವರ್ಷದ ಒಳಗಿನ ಬಾಲಕರ ವಿಭಾಗದ ಶ್ರೀಯಾನ್ ಬಿರಾದಾರ (ಪ್ರಥಮ), ಪರ್ಥ್ (ದ್ವಿತೀಯ), ವೇದಾಂಶ್ (ತೃತೀಯ), ಬಾಲಕಿಯರ ವಿಭಾಗದಲ್ಲಿ ಶಾನ್ವಿ (ಪ್ರಥಮ), ಶಿವಾನಿ ಗುಪ್ತಾ (ದ್ವಿತೀಯ) ಬಹುಮಾನ ನೀಡಲಾಯಿತು.

11 ರಿಂದ 17 ವರ್ಷದ ಒಳಗಿನ ಬಾಲಕರ ವಿಭಾಗದಲ್ಲಿ ವಿಹಾನ್ (ಪ್ರಥಮ), ಸನ್ನಿಹಿತ್ (ದ್ವಿತೀಯ), ಕೃಷ್ಣ (ತೃತೀಯ), ಬಾಲಕಿಯರ ವಿಭಾಗದ ಆರುಷಿ (ಪ್ರಥಮ) ಹಾಗೂ ಸಂಕಲ್ಪ (ದ್ವಿತೀಯ) ಸ್ಥಾನ ಗಳಿಸಿದರು.

ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಜ್ಯೋತಿರ್ಮಯಾನಂದ ಸ್ವಾಮೀಜಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ವಿಜೇತರಿಗೆ ಬಹುಮಾನ ವಿತರಿಸಿದರು.

ಸ್ವಾಮಿ ವಿವೇಕಾನಂದ ಚೆಸ್ ಅಕಾಡೆಮಿಯ ಉಸ್ತುವಾರಿಯೂ ಆದ ಬೀದರ್ ಚೆಸ್ ಅಕಾಡೆಮಿ ಅಧ್ಯಕ್ಷ ನಿತಿನ್ ಕರ್ಪೂರ ತರಬೇತಿ ಹಾಗೂ ಸ್ಪರ್ಧೆಗಳನ್ನು ಅಚ್ಚುಕಟ್ಟಾಗಿ ಸಂಘಟಿಸಿದ್ದರು. ನರ್ಚರ್ ಶಾಲೆಯ ಅಧ್ಯಕ್ಷ ದತ್ತಾ ಮುಳೆ, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಪ್ರಭು ತಟ್ಟಪಟಿ, ಬೀದರ್ ಚೆಸ್ ಅಕಾಡೆಮಿಯ ಕಾರ್ಯದರ್ಶಿ ಸತೀಶ್ ಸ್ವಾಮಿ, ಜಂಟಿ ಕಾರ್ಯದರ್ಶಿ ವಿಕ್ರಮ ತಗಾರೆ, ಸದಸ್ಯ ಸುರೇಶ ಸ್ವಾಮಿ, ಡಾ. ನಿತೇಶಕುಮಾರ ಬಿರಾದಾರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-33-452746606

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.