ಬೀದರ್: ರಸ್ತೆ ಬದಿಯಲ್ಲಿ ನಿಲ್ಲಿಸಿದ ₹40 ಲಕ್ಷ ಮೌಲ್ಯದ ಟಿಪ್ಪರ್ ಕಳುವಾದ ಘಟನೆ ನಗರದ ನ್ಯೂ ಆದರ್ಶ ಕಾಲೊನಿಯ ಮುಖ್ಯರಸ್ತೆಯಲ್ಲಿ ನಡೆದಿದೆ.

ಕಾಲೊನಿಯ ಮುಖ್ಯರಸ್ತೆಯಲ್ಲಿರುವ ಪಾಟೀಲ್ ಡೈರಿ ಫಾರಂ ಎದುರಿನ ರಸ್ತೆಯಲ್ಲಿ ನಿಲ್ಲಿಸಿದ್ದ ಟಿಪ್ಪರ್ ಕಳುವಾಗಿದ್ದು, ಗಾಂಧಿ ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರದ ವಾಯುಪಡೆ ತರಬೇತಿ ಕೇಂದ್ರಕ್ಕೆ ಸೇರಿದ ಜಾಗದಲ್ಲಿ ಸಿವಿಲ್ ಕೆಲಸ ನಡೆಯುತ್ತಿದ್ದು, ಕೊಲ್ಲಾಪುರದ ಡಿ.ಆರ್. ಕನ್ಸ್ಟ್ರಕ್ಷನ್ಸ್ನವರಿಗೆ ಸೇರಿದ ಟಿಪ್ಪರ್ ಅನ್ನು ಚಾಲಕ ವಿಜಯಪುರದ ಕೇರೋಟಗಿ ತಾಂಡಾದ ನಿವಾಸಿ ಅಪ್ಪಾ ಶಾ ಬದ್ದು ರಾಠೋಡ್ ಓಡಿಸುತ್ತಿದ್ದರು. ಮಾ. 31ರಂದು ಕೆಲಸ ಮುಗಿಸಿ, ರಸ್ತೆಯ ಪಕ್ಕದಲ್ಲಿ ನಿಲ್ಲಿಸಿ, ಲಾಕ್ ಮಾಡಿ ತೆರಳಿದ್ದರು. ಆದರೆ, ಮರುದಿನ ಟಿಪ್ಪರ್ ಕಳುವಾಗಿರುವುದು ಗೊತ್ತಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260405-33-8519602

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.