ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್-ತಿರುಪತಿ ಪ್ರಾಯೋಗಿಕ ರೈಲು ಸಂಚಾರ ಇಂದಿನಿಂದ

Last Updated 1 ಅಕ್ಟೋಬರ್ 2022, 14:12 IST
ಅಕ್ಷರ ಗಾತ್ರ

ಬೀದರ್: ಭಾನುವಾರ(ಅ.2)ದಿಂದ ಪೂರ್ಣಾ ಜಂಕ್ಷನ್‍ನಿಂದ ಬೀದರ್ ಮಾರ್ಗವಾಗಿ ತಿರುಪತಿಗೆ ಪ್ರಾಯೋಗಿಕ ರೈಲು ಸಂಚಾರ ಆರಂಭವಾಗಲಿದೆ ಎಂದು ಕೇಂದ್ರದ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.

ಪ್ರಾಯೋಗಿಕ ರೈಲು ಅಕ್ಟೋಬರ್ 2, 9, 16, 23 ಹಾಗೂ 30 ರ ಭಾನುವಾರ ರಾತ್ರಿ 11.15ಕ್ಕೆ ಪೂರ್ಣಾ ಜಂಕ್ಷನ್‍ನಿಂದ ಹೊರಟು, ಪರಭಣಿ, ಪರಳಿ, ಉದಗಿರ ಮೂಲಕ ಸೋಮವಾರ ಬೆಳಿಗ್ಗೆ 5.50ಕ್ಕೆ ಭಾಲ್ಕಿ ಹಾಗೂ ಬೆಳಿಗ್ಗೆ 6.30ಕ್ಕೆ ಬೀದರ್‌ಗೆ ಬರಲಿದೆ. ಜಹೀರಾಬಾದ್, ವಿಕಾರಾಬಾದ್, ಚಿತ್ತಾಪುರ, ಯಾದಗಿರಿ, ರಾಯಚೂರು, ಮಂತ್ರಾಲಯ ರಸ್ತೆ, ರೇನಿಗುಂಟಾ ಮಾರ್ಗವಾಗಿ ರಾತ್ರಿ 10.10ಕ್ಕೆ ತಿರುಪತಿ ತಲುಪಲಿದೆ ಎಂದು ಹೇಳಿದ್ದಾರೆ.

ಅಕ್ಟೋಬರ್ 3, 10, 17, 24 ಮತ್ತು 31ರ ಸೋಮವಾರ ರಾತ್ರಿ 11.50ಕ್ಕೆ ತಿರುಪತಿಯಿಂದ ಹೊರಟು ಬಂದ ಮಾರ್ಗವಾಗಿಯೇ ಮಂಗಳವಾರ ಮಧ್ಯಾಹ್ನ 12ಕ್ಕೆ ಬೀದರ್ ಮತ್ತು ಮಧ್ಯಾಹ್ನ 12.45ಕ್ಕೆ ಭಾಲ್ಕಿಗೆ ಬರಲಿದೆ. ಸಂಜೆ 6.30ಕ್ಕೆ ಪೂರ್ಣಾ ಜಂಕ್ಷನ್ ತಲುಪಲಿದೆ ಎಂದು ತಿಳಿಸಿದ್ದಾರೆ.

ತಿರುಪತಿಯಿಂದ ಬೀದರ್‍ಗೆ ಬರಲು ವಿಕಾರಾಬಾದ್‍ವರೆಗೆ ಹಲವು ರೈಲುಗಳು ಇವೆ. ಅಲ್ಲಿಂದ ಬೀದರ್‌ಗೆ ತಲುಪಲು ಸಹ ನಾಲ್ಕೈದು ರೈಲುಗಳು ಇವೆ. ಹೀಗಾಗಿ ಬೀದರ್‌ನಿಂದ ತಿರುಪತಿಗೆ ಪ್ರಾಯೋಗಿಕ ರೈಲಿನ ಮೂಲಕ ಪ್ರಯಾಣ ಬೆಳೆಸಿ, ಬರುವಾಗ ವಿಶೇಷ ರೈಲಿನಲ್ಲಿ ಇಲ್ಲವೇ ಬೇರೆ ರೈಲುಗಳಲ್ಲಿ ಬೀದರ್‌ಗೆ ಬರಬಹುದು ಎಂದು ಹೇಳಿದ್ದಾರೆ.

ಜಿಲ್ಲೆಯ ಜನ ಪ್ರಾಯೋಗಿಕ ರೈಲಿನ ಪ್ರಯೋಜನ ಪಡೆಯಬೇಕು ಎಂದು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT