ಬೀದರ್: ಇಲ್ಲಿನ ಸಂಚಾರ ಪೊಲೀಸರು ನಗರದಲ್ಲಿ ಬುಧವಾರ ಸಂಚಾರ ನಿಯಮಗಳ ಪಾಲನೆ ಮತ್ತು ಅರಿವು ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಸಂಚಾರ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ರಮೇಶಕುಮಾರ ಮೈಲೂರಕರ್ ಚಾಲನೆ ನೀಡಿ, ದ್ವಿಚಕ್ರ ವಾಹನ ಚಾಲಕರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಕುಡಿದು ವಾಹನವನ್ನು ಚಲಾಯಿಸಬಾರದು. ವಾಹನ ಚಲಾಯಿಸುವಾಗ ಮೊಬೈಲ್ ಬಳಕೆ ಮಾಡಬಾರದು. ಸಂಚಾರಿ ನಿಯಮ ಪಾಲಿಸಬೇಕು. ದ್ವಿಚಕ್ರ ವಾಹನದ ಚಾಲಕರು ಡಿಫೆಕ್ಟಿವ್ ಸೈಲೆನ್ಸರ್ (ಕರ್ಕಶ ಶಬ್ದ), ಆಟೊ ಚಾಲಕರು ರಸ್ತೆ ಬದಿಯಲ್ಲಿ ಅಡ್ಡವಾಗಿ ವಾಹನವನ್ನು ಪಾರ್ಕ್ ಮಾಡಬಾರದು. ಮಾಡಿದರೆ ದಂಡ ವಿಧಿಸಲಾಗುವುದು. ಕಾರು ಚಾಲಕರು ಸೀಟ್ ಬೆಲ್ಟ್ ಧರಿಸಿಕೊಂಡೇ ವಾಹನ ಓಡಿಸಬೇಕು ಎಂದು ತಿಳಿಸಿದರು.

ಸಿಗ್ನಲ್ ಲೈಟ್ಗಳನ್ನು ಗಮನಿಸಿ ವಾಹನ ಓಡಿಸಬೇಕು. ಬೇಕಾಬಿಟ್ಟಿ ರಸ್ತೆಯಲ್ಲಿ ವಾಹನ ನಿಲ್ಲಿಸುವುದು, ಅತಿ ವೇಗದಲ್ಲಿ ಓಡಿಸುವುದು ಮಾಡಬಾರದು. ಎಲ್ಲರೂ ರಸ್ತೆ ನಿಯಮಗಳನ್ನು ಸರಿಯಾಗಿ ಪಾಲಿಸಿದರೆ ಅಪಘಾತಗಳು ಉಂಟಾಗುವುದಿಲ್ಲ. ಸಂಚಾರ ಪೊಲೀಸರಿಗೆ ಸಹಕರಿಸಬೇಕು ಎಂದು ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-33-529409179

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.