ಬೀದರ್: ಇಲ್ಲಿನ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ಮತ್ತೆ ಸುದ್ದಿಯಲ್ಲಿದೆ.

ವಿಶ್ವವಿದ್ಯಾಲಯದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂಬ ದೂರು, ಆರೋಪಗಳ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು 2025ರಲ್ಲಿ ರಾಜ್ಯದಾದ್ಯಂತ ನೂರಕ್ಕೂ ಹೆಚ್ಚು ಕಡೆಗಳಲ್ಲಿ ಶೋಧ ಹಾಗೂ ದಾಳಿ ನಡೆಸಿ, ಅಪಾರ ಪ್ರಮಾಣದ ಸ್ವತ್ತು, ನಗದು ಜಪ್ತಿ ಮಾಡಿದ್ದರು. ಅನೇಕರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಇದಾದ ನಂತರ ನಿವೃತ್ತ ಅಧಿಕಾರಿ ಸುರೇಶ್ ಬಳಿಯಿಂದ ₹4 ಕೋಟಿಗೂ ಅಧಿಕ ಸಂಪತ್ತು ಪತ್ತೆ ಹಚ್ಚಿದ್ದರು. ಬಳಿಕ ಪಶು ವಿವಿ ವ್ಯಾಪ್ತಿಯ ಹೆಬ್ಬಾಳ ಕಾಲೇಜಿನ ಪ್ರಾಧ್ಯಾಪಕ ಇಂದ್ರೇಶ್ ಎಂಬುವರು ಅಮಾನತುಗೊಂಡರು. ಈಗ ವಿಶ್ರಾಂತ ಕುಲಪತಿ, ಪ್ರಭಾರ ನಿವೃತ್ತ ಹಣಕಾಸು ಅಧಿಕಾರಿ, ಸಹಾಯಕ ಹಣಕಾಸು ಅಧಿಕಾರಿ, ನಕಲಿ ಖಾಸಗಿ ಸಂಸ್ಥೆಗಳ ಮೂರು ಜನರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದು, ಜೂನ್ 2ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದಾರೆ.

ವಿಶ್ರಾಂತ ಕುಲಪತಿ ಎಚ್.ಡಿ. ನಾರಾಯಣಸ್ವಾಮಿ, ನಿವೃತ್ತ ಪ್ರಭಾರ ಹಣಕಾಸು ಅಧಿಕಾರಿ ಕೆ.ಎಲ್. ಸುರೇಶ್, ಸಹಾಯಕ ಹಣಕಾಸು ಅಧಿಕಾರಿ ಮೃತ್ಯುಂಜಯ ಹಿರೇಮಠ, ಬೆಂಗಳೂರಿನ ಖಾಸಗಿ ಎಂಟರ್ ಪ್ರೈಸೆಸ್ ಮಾಲೀಕರಾದ ಬೋಪ್ಪಣ್ಣ, ಮಂಜುನಾಥ ಹಾಗೂ ರಾಮಗೊಂಡ ಬಂಧಿತರು. ವಿವಿ ಇತಿಹಾಸದಲ್ಲಿ ಮೊದಲ ಬಾರಿಗೆ ವಿಶ್ರಾಂತ ಕುಲಪತಿಯೊಬ್ಬರು ಜೈಲು ಸೇರಿದ್ದಾರೆ.

ಅರ್ಹತೆ ಇಲ್ಲದಿದ್ದರೂ ತನಗೆ ಬೇಕಾದ ಇಬ್ಬರಿಗೆ ಹಣಕಾಸು ಅಧಿಕಾರಿ ಮಾಡಿ, ಬೆಂಗಳೂರಿನ ಖಾಸಗಿ ಎಂಟರ್ಪ್ರೈಸೆಸ್ ಹೆಸರಿನಲ್ಲಿ ವಿಶ್ವವಿದ್ಯಾಲಯಕ್ಕೆ ಬೇಕಿರುವ ವಸ್ತುಗಳನ್ನು ಖರೀದಿಸಿ, ನಕಲಿ ಬಿಲ್ ಸೃಷ್ಟಿಸಿ, ಜಿಎಸ್ಟಿ ವಂಚಿಸಿರುವ ಆರೋಪದ ಮೇರೆಗೆ ಆರೂ ಜನರನ್ನು ಬಂಧಿಸಲಾಗಿದೆ. ತನ್ನ ಖಾತೆಗೆ ಹಣ ಹಾಕಿಕೊಂಡು ಅದನ್ನು ಹಂಚಿಕೆ ಮಾಡುತ್ತಿದ್ದ ಆರೋಪ ರಾಮಗೊಂಡ ಎದುರಿಸುತ್ತಿದ್ದಾನೆ.

2017–18ರಲ್ಲಿ ವಿಶ್ವ ವಿದ್ಯಾಲಯದಲ್ಲಿ ವಿವಿಧ ರೀತಿಯ ವಸ್ತುಗಳ ಖರೀದಿ, ನಿರ್ಮಾಣ ಸೇರಿದಂತೆ ಇನ್ನಿತರೆ ಕೆಲಸಗಳಿಗೆ ₹45 ಕೋಟಿ ವೆಚ್ಚ ಮಾಡಲಾಗಿದ್ದು, ಅವುಗಳಿಗೆ ನಕಲಿ ಬಿಲ್ ಸೃಷ್ಟಿಸಿ ಹಣಕಾಸಿನ ಅವ್ಯವಹಾರ ನಡೆಸಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಲೋಕಾಯುಕ್ತ ಪೊಲೀಸ್ ಮೂಲಗಳು ‘ಪ್ರಜಾವಾಣಿ’ಗೆ ಖಚಿತಪಡಿಸಿವೆ. ಬೀದರ್ ಜಿಲ್ಲಾ ನ್ಯಾಯಾಲಯವು ಈ ಬಗ್ಗೆ ಇತ್ತೀಚೆಗೆ ವಾರೆಂಟ್ ಹೊರಡಿಸಿತ್ತು. ಇದನ್ನು ಆಧರಿಸಿ ಲೋಕಾಯುಕ್ತ ಪೊಲೀಸರು, ಐವರನ್ನು ಬೆಂಗಳೂರಿನಲ್ಲಿ, ಮೃತ್ಯುಂಜಯ ಹಿರೇಮಠ ಎಂಬುವರನ್ನು ಬೀದರ್ನಲ್ಲಿ ಮಂಗಳವಾರ ವಶಕ್ಕೆ ಪಡೆದು, ನ್ಯಾಯಾಲಯದ ಎದುರು ಹಾಜರುಪಡಿಸಿತು.

ಲೋಕಾಯುಕ್ತ ಎಡಿಜಿಪಿ ಮನೀಷ್ ಕರ್ಬಿಕರ್, ಐಜಿಪಿ ಎ.ಎಸ್. ಸುಬ್ರಹ್ಮಣೇಶ್ವರರಾವ್, ಎಸ್ಪಿ ಗಳಾದ ಬದ್ರಿನಾಥ, ಸಿದ್ದರಾಜು ಅವರ ಮಾರ್ಗದರ್ಶನದಲ್ಲಿ ಬೀದರ್ ಲೋಕಾಯುಕ್ತ ಡಿವೈಎಸ್ಪಿ ಹಣಮಂತರಾಯ ನೇತೃತ್ವದಲ್ಲಿ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ವಿಶ್ವವಿದ್ಯಾಲಯದ ಪ್ರಾಧ್ಯಾಪಕರೂ ಆದ ವಿವಿ ಮಾಜಿ ಆಡಳಿತ ಮಂಡಳಿ ಸದಸ್ಯರಾದ ವೆಂಕಟ್ ರೆಡ್ಡಿ ಹಾಗೂ ಕೆ.ಸಿ. ಶಂಕರೇಗೌಡ ಅವರು ದೊಡ್ಡಮಟ್ಟದ ಹಣಕಾಸಿನ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.

‘ಭ್ರಷ್ಟಾಚಾರ ವಿರುದ್ಧದ ಮೊದಲ ಜಯ’

ಪಶು ವೈದ್ಯಕೀಯ ವಿವಿ ಉಳಿಸಲು ನಡೆಸುತ್ತಿರುವ ಹೋರಾಟಕ್ಕೆ ಒಂದು ಹಂತದ ಜಯ ಸಿಕ್ಕಿದೆ. ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಸ್ಪಂದಿಸಿ, ಕ್ರಮ ಕೈಗೊಂಡಿದ್ದಾರೆ. ಲೋಕಾಯುಕ್ತದ ಮೇಲಿನಿಂದ ಕೆಳ ಹಂತದ ಎಲ್ಲ ಅಧಿಕಾರಿಗಳು ಪ್ರಶಂಸಾರ್ಹ ಕೆಲಸ ಮಾಡಿದ್ದಾರೆ. ವಿಶ್ವವಿದ್ಯಾಲಯ ಉಳಿಸುವ ಭರವಸೆ ನೀಡಿದ್ದಾರೆ. ಎನ್ಪಿಎ ಸೇರಿದಂತೆ ಇನ್ನಿತರೆ ಹಗರಣಗಳಲ್ಲಿ ಶಾಮಿಲಾದವರ ವಿರುದ್ಧವೂ ಕಾನೂನು ಕ್ರಮವಾಗಬೇಕು.

-ವೆಂಕಟ್ ರೆಡ್ಡಿ, ದೂರುದಾರ, ಮಾಜಿ ಆಡಳಿತ ಮಂಡಳಿ ಸದಸ್ಯ

2017–18ರಿಂದ ಭ್ರಷ್ಟಾಚಾರದ ವಾಸನೆ

2017–18ನೇ ಸಾಲಿನಿಂದ ವಿಶ್ವವಿದ್ಯಾಲಯದಲ್ಲಿ ನಿರಂತರವಾಗಿ ಹಗರಣ, ಭ್ರಷ್ಟಾಚಾರದ ಆರೋಪಗಳು ಕೇಳಿ ಬರುತ್ತಿವೆ. ನೇಮಕಾತಿ, ಖರೀದಿ, ಕಟ್ಟಡ ನಿರ್ಮಾಣ, ಎನ್ಪಿಎ ಹೀಗೆ ಪ್ರತಿಯೊಂದರಲ್ಲೂ
ಆರೋಪಗಳು ಕೇಳಿ ಬಂದಿದ್ದು, ಈ ಸಂಬಂಧ ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಕೆಯಾಗಿದ್ದು, ಎಲ್ಲದರ ಬಗ್ಗೆ ತನಿಖೆ ಮುಂದುವರೆದಿದೆ. ಹಾಲಿ ಕುಲಪತಿ, ರಜಿಸ್ಟ್ರಾರ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು, ಪ್ರಾಧ್ಯಾಪಕರ ವಿರುದ್ಧ ಗಂಭೀರ ಸ್ವರೂಪದ ಆರೋಪಗಳು ಕೇಳಿ ಬಂದಿದೆ. ಅದರ ವಿರುದ್ಧವೂ ತನಿಖೆ ಪ್ರಗತಿಯಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.