ಜನವಾಡ: ಮನೆಯ ಮ್ಯುಟೆಷನ್ ನೀಡಲು ₹2.5 ಲಕ್ಷ ಲಂಚ ಪಡೆಯುತ್ತಿದ್ದ ಬೀದರ್ ತಾಲ್ಲೂಕಿನ ಮರಕುಂದಾ ಗ್ರಾಮ ಆಡಳಿತಾಧಿಕಾರಿ ಶಿವಕುಮಾರ, ಅವರ ಸಹಚರ ಶರಣಯ್ಯ ಸ್ವಾಮಿ ಮಂಗಳವಾರ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

ಮರಕುಂದಾ ಗ್ರಾಮದ ಮಹಾದೇವ ಶಾಂತಪ್ಪ ಅವರು ಮನೆಯ ಮ್ಯುಟೆಷನ್ಗಾಗಿ ಗ್ರಾಮ ಆಡಳಿತಾಧಿಕಾರಿ ಸಂಪರ್ಕಿಸಿದ್ದರು. ಇದಕ್ಕಾಗಿ ಶಿವಕುಮಾರ ಹಾಗೂ ಶರಣಯ್ಯ ಸ್ವಾಮಿ ₹5 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಮಹಾದೇವ ಅವರು ಈ ಬಗ್ಗೆ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು, ಮರಕುಂದಾ ಗ್ರಾಮದ ಹೊರವಲಯದ ಧಾಬಾದಲ್ಲಿ ಮಹಾದೇವ ಅವರಿಂದ ಮುಂಗಡವಾಗಿ ₹2.5 ಲಕ್ಷ ಲಂಚ ಪಡೆಯುತ್ತಿದ್ದಾಗ ಆರೋಪಿಗಳನ್ನು ವಶಕ್ಕೆ ಪಡೆದರು.

ಲೋಕಾಯುಕ್ತ ಡಿವೈಎಸ್ಪಿ ಹನುಮಂತರಾಯ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಪಿ.ಐ ಅರ್ಜುನಪ್ಪ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.