ಬೀದರ್: ಗುದಗೆ ಮಲ್ಟಿ ಅಂಡ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರೋಟರಿ ನ್ಯೂ ಸೆಂಚುರಿ ಕ್ಲಬ್ ಹಾಗೂ ಹೈದರಾಬಾದ್ನ ಮಲ್ಲಾರೆಡ್ಡಿ ನಾರಾಯಣ ಆಸ್ಪತ್ರೆ ಸಹಯೋಗದಲ್ಲಿ ನಗರದ ಗುದಗೆ ಆಸ್ಪತ್ರೆಯಲ್ಲಿ ಮಂಗಳವಾರ ಮಹಿಳೆಯರಿಗೆ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಮಹಿಳಾ ಪೊಲೀಸರು, ವಿವಿಧ ಭಾಗದ ಮಹಿಳೆಯರು ಶಿಬಿರದಲ್ಲಿ ಭಾಗವಹಿಸಿ ತಪಾಸಣೆ ಮಾಡಿಸಿಕೊಂಡರು. ಇದಕ್ಕೂ ಮುನ್ನ ಕಾರ್ಯಕ್ರಮ ಉದ್ಘಾಟಿಸಿದ ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಗಂಗಾಂಬಿಕಾ ಅಕ್ಕ ಮಾತನಾಡಿ, ‘ಒಳ್ಳೆಯ ಜೀವನ ಸಾಗಿಸಬೇಕಾದರೆ ಆರೋಗ್ಯ ಬಹಳ ಮುಖ್ಯ. ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕಾದರೆ ಆರೋಗ್ಯವೇ ಬಹಳ ಮುಖ್ಯ’ ಎಂದು ಹೇಳಿದರು.

ಪ್ರಸಾದ ಕಾಯ ಹಾಳು ಮಾಡಬಾರದು ಎಂದು ಬಸವಾದಿ ಶರಣರು ಹೇಳಿದ್ದಾರೆ. ಕಾಯ ಅಂದರೆ ಶರೀರ ಎಂದರ್ಥ. ಅದರಲ್ಲೂ ಹೆಣ್ಣು ಮಕ್ಕಳ ಆರೋಗ್ಯ ಬಹಳ ಮುಖ್ಯವಾದುದು. ಇಡೀ ಕುಟುಂಬದ ಜವಾಬ್ದಾರಿ ಹೆಣ್ಣು ಮಕ್ಕಳ ಮೇಲಿರುತ್ತದೆ. ತಾಯಿ ಆರೋಗ್ಯ ಉತ್ತವಾಗಿದ್ದರೆ ಒಂದು ಜನಾಂಗದ ಆರೋಗ್ಯ ಸರಿಯಾಗಿರುತ್ತದೆ. ಸ್ತನ ಕ್ಯಾನ್ಸರ್, ಗರ್ಭ ಕಂಠ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿವೆ. ಆದರೆ, ಈಗಲೂ ಮಹಿಳೆಯರು ಆರೋಗ್ಯ ತಪಾಸಣೆಗೆ ಹಿಂಜರಿಯುತ್ತಾರೆ. ಅದು ದೂರವಾಗಬೇಕು ಎಂದರು.

ಶೈನಿ ಪ್ರದೀಪ್ ಗುಂಟಿ, ‘ಮಹಿಳೆಯರು ಕುಟುಂಬದ ಮುಖ್ಯ ಆಧಾರಸ್ತಂಭ. ಆರೋಗ್ಯವಾಗಿರುವುದು ಬಹಳ ಮುಖ್ಯ. ಆದಕಾರಣ ಮಹಿಳೆಯರು ಪ್ರತಿವರ್ಷ ಆರೋಗ್ಯ ತಪಾಸಣೆಗೆ ಒಳಪಡಬೇಕು. ಯಾವುದೇ ರೋಗ ಆರಂಭದಲ್ಲೇ ಪತ್ತೆಯಾದರೆ ಅದಕ್ಕೆ ಚಿಕಿತ್ಸೆ ಪಡೆದು ಗುಣಮುಖರಾಗಬಹುದು. ವೈದ್ಯಕೀಯ ಕ್ಷೇತ್ರ ಬಹಳ ಪ್ರಗತಿ ಹೊಂದಿದೆ. ಯಾವುದೇ ತೊಂದರೆಯಿದ್ದರೂ ಮುಕ್ತವಾಗಿ ವೈದ್ಯರೊಂದಿಗೆ ಹಂಚಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಅಂಕಾಲಜಿಸ್ಟ್ ಡಾ.ಶ್ರೀನಿವಾಸ ತೇಜಸ್ವಿನಿ ಅಡಾದ, ಕ್ಯಾನ್ಸರ್ ಬರುವುದಕ್ಕೂ ಮುನ್ನ ಅದರ ಬಗ್ಗೆ ಎಚ್ಚರ ವಹಿಸುವುದು ಬಹಳ ಮುಖ್ಯ. ಕಾಲಕಾಲಕ್ಕೆ ಮಹಿಳೆಯರು ತಪಾಸಣೆ ಮಾಡಿಸಿಕೊಳ್ಳಬೇಕು. ಸ್ತನ ಕ್ಯಾನ್ಸರ್, ಗರ್ಭಕಂಠ ಕರುಳಿನ ಕ್ಯಾನ್ಸರ್ ಮಾರಣಾಂತಿಕವಾಗಿದೆ. ಆದರೆ, ಅದಕ್ಕೆ ಚಿಕಿತ್ಸೆ ಲಭ್ಯವಿದೆ ಎಂದರು.

ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಲಯದ ಬಿ.ಕೆ ಸವಿತಾ ಬಹೆನಜಿ, ಡಾ. ಸುಲೋಚನಾ ಪಾಟೀಲ್, ದಂತ ವೈದ್ಯ ಡಾ. ನಾಗೇಶ ಪಾಟೀಲ, ಶಾಂತಾ ಖಂಡ್ರೆ, ರೋಟರಿ ಕ್ಲಬ್ನ ಸುನೈನಾ ಗುತ್ತಿ, , ಆದೀಶ್ ವಾಲಿ, ಸ್ಫೂರ್ತಿ ಧನ್ನೂರ, ಫಿಜಿಶಿಯನ್ ಡಾ. ಸಚಿನ್ ಗುದಗೆ, ಡಾ. ಶಾರದಾ ಗುದಗೆ. ಡಾ. ಮಹೇಶ್ ತೊಂಡಾರೆ ಮತ್ತಿತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260408-33-837476098

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.