ಬೀದರ್: ಕರ್ನಾಟಕ ಹಾಗೂ ತೆಲಂಗಾಣ ನಡುವೆ ಸಂಪರ್ಕ ಕಲ್ಪಿಸುವ ಬೀದರ್–ಜಹೀರಾಬಾದ್ ಅಂತರರಾಜ್ಯ ಮಾರ್ಗದಲ್ಲಿ ಈಗ ಪ್ರಯಾಣ ಬಹಳ ಕಷ್ಟಕರವಾಗಿದ್ದು, ಅಪಾಯದ ನಡುವೆ ಸಂಚರಿಸಬೇಕಾದ ಪರಿಸ್ಥಿತಿ ಇದೆ.

ಬೀದರ್ನಿಂದ ತೆಲಂಗಾಣದ ರಾಜಧಾನಿ ಹೈದರಾಬಾದ್ 150 ಕಿ.ಮೀ ದೂರದಲ್ಲಿದೆ. ಕೊಡು ಕೊಳ್ಳುವಿಕೆ, ಆಸ್ಪತ್ರೆ, ಉದ್ಯೋಗಕ್ಕಾಗಿ ವಲಸೆ ಹೆಚ್ಚಿನ ಪ್ರಮಾಣದಲ್ಲಿದೆ. ಮದುವೆ, ಕಟ್ಟಡ ನಿರ್ಮಾಣ, ಎಲೆಕ್ಟ್ರಿಕ್, ಎಲೆಕ್ಟ್ರಾನಿಕ್ ವಸ್ತುಗಳ ಖರೀದಿಗೆ ಸ್ಥಳೀಯರು ಹೈದರಾಬಾದ್ ನೆಚ್ಚಿಕೊಂಡಿದ್ದಾರೆ. ಹೀಗಿರುವಾಗ ನಿತ್ಯ ಬೀದರ್ನಿಂದ ಹೈದರಾಬಾದ್ಗೆ ಹೋಗಿ ಬರುವವರ ಸಂಖ್ಯೆ ಬಹಳಷ್ಟಿದೆ.

ನಿತ್ಯ ಎರಡೂ ರಾಜ್ಯಗಳ ಸಾರಿಗೆ ಸಂಸ್ಥೆಯ ನೂರಕ್ಕೂ ಅಧಿಕ ಬಸ್ಸುಗಳು ಸಂಚರಿಸುತ್ತವೆ. ನೆರೆಯ ಮಹಾರಾಷ್ಟ್ರದ ಸಾರಿಗೆ ಸಂಸ್ಥೆ ಬಸ್ಸುಗಳು, ಮೂರೂ ರಾಜ್ಯಗಳ ಖಾಸಗಿ ವಾಹನಗಳು, ಇನ್ನು ಜನ ವೈಯಕ್ತಿಕವಾಗಿ ಅವರ ವಾಹನಗಳಲ್ಲಿ ಹೋಗಿ ಬರುತ್ತಾರೆ. ಇದರಿಂದಾಗಿ ಬೀದರ್–ಜಹೀರಾಬಾದ್ ರಸ್ತೆಯಲ್ಲಿ ಹಗಲು–ರಾತ್ರಿ ವಾಹನ ದಟ್ಟಣೆ ಅಧಿಕವಾಗಿರುತ್ತದೆ. ಆದರೆ, ಈ ರಸ್ತೆ ಇನ್ನೂ ಕೂಡ ಮೇಲ್ದರ್ಜೆಗೆ ಏರದ ಕಾರಣ ನಿತ್ಯ ಅಪಘಾತಗಳು ಸರ್ವೇ ಸಾಮಾನ್ಯವಾಗಿದೆ.

ಅದರಲ್ಲೂ ಬೀದರ್ ನಗರದ ಶಹಾಪುರ ಗೇಟ್ನಿಂದ ಚೆಕ್ಪೋಸ್ಟ್ ವರೆಗೆ ಅರಣ್ಯ ಪ್ರದೇಶವಿದೆ. ವಡ್ಡಿ ಕ್ರಾಸ್ ಸೇರಿದಂತೆ ಹಲವೆಡೆ ತಿರುವುಗಳಿವೆ. ತೆಲಂಗಾಣದ ಗ್ರಾಮಗಳಿಗೆ ಈ ಭಾಗದ ಅರಣ್ಯ ಪ್ರದೇಶದೊಳಗಿನ ಕಚ್ಚಾ ರಸ್ತೆಗಳು ಸಂಪರ್ಕ ಕಲ್ಪಿಸುತ್ತವೆ. ಮುಖ್ಯರಸ್ತೆಯೊಂದಿಗೆ, ಕಚ್ಚಾ ರಸ್ತೆಯಿಂದಲೂ ವಾಹನಗಳು ಏಕಾಏಕಿ ಬರುತ್ತವೆ. ದಟ್ಟ ಅರಣ್ಯ ಇರುವುದರಿಂದ ವಾಹನಗಳು ಬಂದರೆ ತಕ್ಷಣವೇ ಗೊತ್ತಾಗುವುದಿಲ್ಲ. ಅದರಲ್ಲೂ ಮಳೆಗಾಲದಲ್ಲಿ ಅತಿ ಮಳೆಯಿದ್ದಾಗ, ಚಳಿಗಾಲದಲ್ಲಿ ಮಂಜಿನಿಂದ ಸಾಕಷ್ಟು ಸಮಸ್ಯೆ ಎದುರಾಗುತ್ತದೆ. ಈ ಸಂದರ್ಭದಲ್ಲಿಯೇ ಹೆಚ್ಚಿನ ಅಪಘಾತಗಳು ಸಂಭವಿಸುತ್ತವೆ. ಇನ್ನು ರಾತ್ರಿ ವೇಳೆಯಲ್ಲಿ ವಾಹನಗಳ ಹೆಚ್ಚಿನ ಬೆಳಕಿನಿಂದಲೂ ಏನೂ ಕೂಡ ಸ್ಪಷ್ಟವಾಗಿ ಗೋಚರಿಸುವುದಿಲ್ಲ. ಮೇಲಿಂದ ರಸ್ತೆ ಚಿಕ್ಕದಾಗಿದ್ದು, ಎದುರು ಬದುರು ವಾಹನಗಳು ಸಂಚರಿಸುತ್ತವೆ. ಇದರಿಂದ ಅಪಘಾತಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.

ಇದು ರಾಜ್ಯದ ಚೆಕ್ಪೋಸ್ಟ್ ವರೆಗಿನ ಪರಿಸ್ಥಿತಿಯಾದರೆ, ತೆಲಂಗಾಣ ಭಾಗದ ರಸ್ತೆಯ ಪರಿಸ್ಥಿತಿ ಹೇಳತೀರದಷ್ಟು ಕೆಟ್ಟು ಹೋಗಿದೆ. ರಸ್ತೆಯುದ್ದಕ್ಕೂ ಬಹಳಷ್ಟು ಗುಂಡಿಗಳು ಬಿದ್ದಿವೆ. ಅಲ್ಲಲ್ಲಿ ರಸ್ತೆ ತೀರ ಚಿಕ್ಕದಾಗುತ್ತ ಹೋಗುತ್ತದೆ. ಅನೇಕ ಕಡೆ ಸೂಚನಾ ಫಲಕಗಳು ಕೂಡಾ ಇಲ್ಲ. ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸಬೇಕಾದ ಪರಿಸ್ಥಿತಿ ಇದೆ.

‘ಜಹೀರಾಬಾದ್, ಹೈದರಾಬಾದ್ನಲ್ಲಿ ಹೆಚ್ಚಿನ ಕೈಗಾರಿಕೆಗಳಿವೆ. ಅನೇಕರು ನಿತ್ಯ ಬೀದರ್ನಿಂದ ಕೆಲಸಕ್ಕೆ ಹೋಗಿ ಬರುತ್ತಾರೆ. ಹೆಚ್ಚಿನವರು ದ್ವಿಚಕ್ರ ವಾಹನ, ಕಾರುಗಳು ಸಂಚರಿಸುತ್ತಾರೆ. ಕೆಲಸಕ್ಕೆ ಸರಿಯಾದ ಸಮಯಕ್ಕೆ ಹೋಗಿಬರಲು ವೇಗವಾಗಿ ಹೋಗುತ್ತಾರೆ. ಆದರೆ, ಇದಕ್ಕೆ ರಸ್ತೆ ಪೂರಕವಾಗಿಲ್ಲ. ಶಹಾಪುರ ಗೇಟ್ ಹತ್ತಿರ ಅರಣ್ಯ ಪ್ರದೇಶದಲ್ಲಂತೂ ಅಪಘಾತ ವಲಯವಾಗಿ ಮಾರ್ಪಟ್ಟಿದೆ. ಈ ಭಾಗದಲ್ಲಿ ಅನೇಕರು ರಸ್ತೆ ಅಪಘಾತಗಳಲ್ಲಿ ಮೃತಪಟ್ಟಿದ್ದಾರೆ. ಇದರಲ್ಲಿ ಉದ್ಯಮಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದ್ಯತೆ ಮೇರೆಗೆ ಈ ರಸ್ತೆ ಮೇಲ್ದರ್ಜೆಗೇರಿಸಬೇಕು. ಅಪಘಾತ ವಲಯ ಗುರುತಿಸಿ, ಅದನ್ನು ಸರಿಪಡಿಸಬೇಕು’ ಎನ್ನುತ್ತಾರೆ ಎಸ್ಸಿ/ಎಸ್ಟಿ ಕೈಗಾರಿಕೋದ್ಯಮಿಗಳ ಸಂಘದ ಜಿಲ್ಲಾಧ್ಯಕ್ಷ ಪಿ. ವಿಜಯಕುಮಾರ್.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-33-691974508

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.