ಬೀದರ್: ಜಿಲ್ಲೆಯ ಶಿವ ದೇಗುಲಗಳಲ್ಲಿ ಶನಿವಾರ ಮಹಾ ಶಿವರಾತ್ರಿಯ ಪ್ರಯುಕ್ತ ವಿಶೇಷ ಪೂಜೆ, ಕೀರ್ತನೆ ಹಾಗೂ ಭಜನಾ ಕಾರ್ಯಕ್ರಮಗಳು ನಡೆದವು.

ಪಾಪನಾಶ ಮಂದಿರದಲ್ಲಿ ಬೆಳಗಿನ ಜಾವ ಶಿವಲಿಂಗಕ್ಕೆ ಕ್ಷೀರಾಭಿಷೇಕ, ಜಲಾಭಿಷೇಕ, ಹಣ್ಣಿನ ಅಭಿಷೇಕ, ಗಂಧ, ರುದ್ರಾಭಿಷೇಕ ನೆರವೇರಿಸಲಾಯಿತು. ನಂತರ ಬಿಲ್ವಾರ್ಚನೆ ಮಾಡಲಾಯಿತು. ಶಿವಲಿಂಗವನ್ನು ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಭಕ್ತರು ಸರತಿ ಸಾಲಿನಲ್ಲಿ ನಿಂತು ಕರ್ಪೂರ ದೀಪ ಬೆಳಗಿಸಿ ಕೃತಾರ್ಥರಾದರು.

ನಗರದ ಪಾಪನಾಶ ಮಂದಿರದಲ್ಲಿ ಬೆಳಿಗ್ಗೆಯಿಂದಲೇ ಭಕ್ತರ ದಟ್ಟಣೆ ಇತ್ತು. ಹೀಗಾಗಿ ಆವರಣದಲ್ಲಿ ಪೆಂಡಾಲ್ ಹಾಕಲಾಗಿತ್ತು. ಧರ್ಮದತ್ತಿ ಇಲಾಖೆಯಿಂದ ಜನಜಂಗುಳಿ ನಿಯಂತ್ರಿಸಲು ಬ್ಯಾರಿಕೇಡ್ ಅಳವಡಿಸಲಾಗಿತ್ತು. ಪೊಲೀಸರನ್ನು ನಿಯೋಜಿಸಲಾಗಿತ್ತು ಭಕ್ತರು ಸರತಿ ಸಾಲಿನಲ್ಲಿ ನಿಂತು ಶಿವಲಿಂಗ ದರ್ಶನ ಪಡೆದರು. ವಯಸ್ಕರು ದೇವಸ್ಥಾನದ ಹಿಂಬದಿಯ ಕಿಟಕಿಯಿಂದ ಶಿವಲಿಂಗ ದರ್ಶನ ಪಡೆದರು.

ರೋಟರಿ ಕ್ಲಬ್, ಬಿಜೆಪಿ ಕಾರ್ಯಕರ್ತರು ಹಾಗೂ ಕೆಲ ಧಾರ್ಮಿಕ ಸಂಘ ಸಂಸ್ಥೆಗಳು ಭಕ್ತರಿಗೆ ಬಾಳೆ ಹಣ್ಣು, ಶಿರಾ ವಿತರಿಸಿದರು.

ದೇವಸ್ಥಾನದ ಆವರಣದಲ್ಲಿರುವ ರಾಮತೀರ್ಥ ಹೊಂಡದಲ್ಲಿ ಇಳಿದು ಕೈಕಾಲುಗಳ ಮೇಲೆ ನೀರು ಸಿಂಪಡಿಸಿಕೊಂಡು ದೇವರ ದರ್ಶನಕ್ಕೆ ತೆರಳಿದರು. ಮಕ್ಕಳು ಈಜಾಡಿ ಸಂಭ್ರಮಿಸಿದರು.

ದೇವಸ್ಥಾನದ ಪರಿಸರದಲ್ಲಿ ವಿಭೂತಿ, ಕುಂಕುಮ, ಅಷ್ಟಗಂಧ, ಕರ್ಪೂರ, ಅಗರಬತ್ತಿ, ತೆಂಗಿನಕಾಯಿ, ಬತಾಸು, ದೇವರ ಫೊಟೊಗಳು ಹಾಗೂ ಮಕ್ಕಳ ಆಟಿಕೆ ಸಾಮಗ್ರಿಗಳನ್ನು ಮಾರಾಟಕ್ಕೆ ಇಡಲಾಗಿತ್ತು. ಎರಡು ವರ್ಷ ಕೋವಿಡ್ ಕಾರಣ ಹೆಚ್ಚಿನ ಜನ ಬಂದಿರಲಿಲ್ಲ. ಆದರೆ, ಈ ಬಾರಿ ಭಾರಿ ಸಂಖ್ಯೆಯಲ್ಲಿ ಕುಟುಂಬದ ಸದಸ್ಯರೊಂದಿಗೆ ಬಂದಿದ್ದರು.

ಸಾಮೂಹಿಕ ಇಷ್ಟಲಿಂಗ ಪೂಜೆ

ರಾಷ್ಟ್ರೀಯ ಬಸವ ದಳ, ಲಿಂಗಾಯತ ಧರ್ಮ ಮಹಾಸಭಾ, ಅಕ್ಕನಾಗಲಾಂಬಿಕಾ ಮಹಿಳಾ ಗಣ ಹಾಗೂ ಲಿಂಗಾಯತ ಸಮಾಜದ ವತಿಯಿಂದ ಓಲ್ಡ್ಸಿಟಿಯ ಬಸವ ಮಂಟಪದಲ್ಲಿ ಮಾತೆ ಸತ್ಯದೇವಿ ನೇತೃತ್ವದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ಕಾರ್ಯಕ್ರಮ ನಡೆಯಿತು.

ಮಹಿಳೆಯರು ಮಕ್ಕಳು ಶ್ವೇತ ವರ್ಣದ ಬಟ್ಟೆಗಳನ್ನು ತೊಟ್ಟು ಇಷ್ಟಲಿಂಗ ಪೂಜೆ ಮಾಡಿದರು.

ಬಸವ ಮಂಟಪದ ಮಾತೆ ಸತ್ಯಾದೇವಿ, ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ಮಹೇಶ ಬಿರಾದಾರ, ಲಿಂಗಾಯತ ಸಮನ್ವಯ ಸಮಿತಿಯ ರಾಜ್ಯ ಸಂಚಾಲಕ ಶ್ರೀಕಾಂತ ಸ್ವಾಮಿ ಮಾತನಾಡಿದರು.

ಲಿಂಗಾಯತ ಧರ್ಮ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಶಿವರಾಜ ಪಾಟೀಲ ಅತಿವಾಳ, ಶಿವಶರಣಪ್ಪ ಪಾಟೀಲ ಹಾರೂರಗೇರಿ, ಗಣಪತಿ ಹಡಪದ, ಕಂಟೆಪ್ಪ ಎಣಕೆಮುರೆ, ಕಾಶೀನಾಥ ಪಾಟೀಲ, ಬಸವಂತರಾವ್ ಬಿರಾದಾರ, ವೀರಶೆಟ್ಟಿ ಮೈಲೂರಕರ್, ಅಕ್ಕಮಹಾದೇವಿ ಸ್ವಾಮಿ, ಬಸವಕುಮಾರ ಚಟನಳ್ಳಿ, ಕಾಶಿನಾಥ ಪಾಟೀಲ, ಗಣಪತಿ ಬಿರಾದಾರ, ಸತೀಶ ಪಾಟೀಲ ಹಾರೂರಗೇರಿ, ನಿರ್ಮಲಾ ನಿಲಂಗೆ, ಶೀತಲ ಸೂರ್ಯವಂಶಿ, ಮನ್ಮಥಯ್ಯ ಸ್ವಾಮಿ ಇದ್ದರು.

ಲಿಂಗಾಯತ ಸೇವಾದಳ

ಬಸವಗಿರಿಯಲ್ಲಿ ಲಿಂಗಾಯತ ಸೇವಾದಳದಿಂದ ಮಹಾಶಿವರಾತ್ರಿಯ ನಿಮಿತ್ತ ‘ಸಾಮೂಹಿಕ ಇಷ್ಟಲಿಂಗ ಪೂಜೆ’ ಭಕ್ತಿ ಮತ್ತು ಶೃದ್ಧೆಯಿಂದ ಜರುಗಿತು.

ಸಾನಿಧ್ಯ ವಹಿಸಿದ್ದ ಲಿಂಗಾಯತ ಮಹಾಮಠದ ಅಕ್ಕ ಅನ್ನಪೂರ್ಣ ಅವರು ಇಷ್ಟಲಿಂಗ ಪೂಜೆಯ ಪ್ರಾತ್ಯಕ್ಷಿಯನ್ನು ತೋರಿಸಿಕೊಟ್ಟರು. ಅಷ್ಟವಿಧಾರ್ಚನೆ ಹಾಗೂ ಪ್ರಾಣಲಿಂಗಾರ್ಚನೆಯ ಮಹತ್ವ ವಿವರಿಸುತ್ತಲೆ, ವಿಧಿ-ವಿಧಾನಗಳನ್ನು ಹೇಳಿಕೊಟ್ಟರು. ನಂತರ ಆಶೀರ್ವಚನ ನೀಡಿದರು.

ಅಶ್ವಿನಿ ರಾಜಕುಮಾರ ಮತ್ತು ವೈಜಿನಾಥ ಸಜ್ಜನಶೆಟ್ಟಿ ವಚನ ಹಾಡಿದರು.. ನೃತ್ಯಾಂಗನಾ ನೃತ್ಯಾಲಯದ ವಿದ್ಯಾರ್ಥಿಗಳು ಪೂರ್ಣಚಂದ್ರ ಅವರ ನಿರ್ದೇಶನದಲ್ಲಿ ವಚನ ನೃತ್ಯ ಪ್ರಸ್ತುತ ಪಡಿಸಿದರು. ಲಿಂಗಾಯತ ಸೇವಾದಳದ ಅಧ್ಯಕ್ಷ ಅಭಿಷೇಕ ಮಠಪತಿ ಸ್ವಾಗತಿಸಿದರು.

ಪ್ರಸಾದ ನಿಲಯದಲ್ಲಿ ಶಿವಶರಣರ ಸ್ಮರಣೋತ್ಸವ

ಬೀದರ್ ನಗರದ ಪ್ರಸಾದ ನಿಲಯದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ಸಾಮೂಹಿಕ ಇಷ್ಟಲಿಂಗ ಪೂಜೆ ನಡೆಯಿತು.

ಶ್ರೀ ಬಸವಲಿಂಗ ಪಟ್ಟದ್ದೇವರ ಮಾರ್ಗದರ್ಶನದಲ್ಲಿ ಮಹಾಲಿಂಗ ಸ್ವಾಮೀಜಿ ಸನ್ನಿಧಾನದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ಕಾರ್ಯಕ್ರಮ ಜರುಗಿತು.

ಅನುಭವ ಮಂಟಪ ಸಾಂಸ್ಕೃತಿಕ ವಿದ್ಯಾಲಯದ ಪ್ರಮುಖರಾದ ಶರಣೆ ಸುವರ್ಣಾ ಚಿಮಕೋಡೆಯವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಸಾದ ನಿಲಯದ ಕಾರ್ಯದರ್ಶಿ ಪ್ರೊ. ಎಸ್.ಬಿ. ಬಿರಾದಾರ, ಭಾರತೀಯ ಬಸವ ಬಳಗದ ಮಹಿಳಾ ಘಟಕದ ಅಧ್ಯಕ್ಷೆ ಶಕುಂತಲಾ ಬೆಲ್ದಾಳೆ, ಮಲ್ಲಮ್ಮ ಪಾಟೀಲ, ಶಕುಂತಲಾ ಖಂಡ್ರೆ, ಶ್ರೀಕಾಂತ ಬಿರಾದಾರ, ಉಮಾಕಾಂತ ಮೀಸೆ, ಸಂಗ್ರಾಮಪ್ಪ ಬಿರಾದಾರ ಇದ್ದರು.

ಪ್ರೊ. ಉಮಾಕಾಂತ ಮೀಸೆ ಸ್ವಾಗತಿಸಿದರು. ಪ್ರಸಾದ ನಿಲಯದ ವ್ಯವಸ್ಥಾಪಕ ಶ್ರೀಕಾಂತ ಸ್ವಾಮಿ ಕಾರ್ಯಕ್ರಮ ಸಂಘಟಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.