ಮಂಗಳವಾರ, ಸೆಪ್ಟೆಂಬರ್ 28, 2021
21 °C

ಗುರುಬಸವ ಪಟ್ಟದ್ದೇವರ ಜನ್ಮದಿನ: ವಿದ್ಯಾರ್ಥಿಗಳಿಂದ ರಕ್ತದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

 

ಬೀದರ್: ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರ 40ನೇ ಜನ್ಮದಿನದ ಪ್ರಯುಕ್ತ ಇಲ್ಲಿಯ ಚನ್ನಬಸವ ಪಟ್ಟದ್ದೇವರ ಪ್ರಸಾದ ನಿಲಯದಲ್ಲಿ ವಿದ್ಯಾರ್ಥಿಗಳು ರಕ್ತದಾನ ಮಾಡಿದರು.

ರಕ್ತದಾನ ಎಲ್ಲ ದಾನಗಳಲ್ಲೇ ಶ್ರೇಷ್ಠವಾಗಿದೆ. ರಕ್ತದಾನ ಜೀವ ಉಳಿಸುತ್ತದೆ. ರಕ್ತ ಕೊಟ್ಟವರ ಆರೋಗ್ಯವೂ ಚೆನ್ನಾಗಿರುತ್ತದೆ ಎಂದು ಪ್ರೊ. ಉಮಾಕಾಂತ ಮೀಸೆ ತಿಳಿಸಿದರು.

ರಕ್ತದಾನ ಮಾಡಿದ ವ್ಯಕ್ತಿಯ ಶರೀರದಲ್ಲಿ ಮೂರು ತಿಂಗಳಲ್ಲಿ ಹೊಸ ರಕ್ತ ಬರುತ್ತದೆ. ರಕ್ತದಾನಿಗೆ ಪುಣ್ಯ ದೊರಕುತ್ತದೆ ಎಂದು ಅಧ್ಯಕ್ಷತೆ ವಹಿಸಿದ್ದ ಪ್ರೊ. ಎಸ್.ಬಿ. ಬಿರಾದಾರ ಹೇಳಿದರು.

ಗುರುಬಸವ ಪಟ್ಟದ್ದೇವರು ನೇರ ನಡೆ-ನುಡಿ ಉಳ್ಳವರಾಗಿದ್ದಾರೆ. ಚನ್ನಬಸವ ಪಟ್ಟದ್ದೇವರ ಮಾರ್ಗದಲ್ಲಿ ಸಾಗಿದ್ದಾರೆ ಎಂದು ಪ್ರಸಾದ ನಿಲಯದ ವ್ಯವಸ್ಥಾಪಕ ಶ್ರೀಕಾಂತ ಸ್ವಾಮಿ ನುಡಿದರು.

ರಕ್ತದಾನ ಮಾಡಿದ ಸಿದ್ಧಲಿಂಗ ಚಂದ್ರಕಾಂತ, ವಿಜಯಕುಮಾರ, ಉಮೇಶ ಶಾಮರಾವ್, ಸೂರ್ಯಕಾಂತ ಮಾರ್ಜೋಡೆ ಅವರನ್ನು ಸನ್ಮಾನಿಸಲಾಯಿತು.

ಅಪೆಕ್ಸ್ ಆಸ್ಪತ್ರೆಯ ಸೂರ್ಯಕಾಂತ ಕಾರಾಮುಂಗಿ, ಸಂತೋಷ, ಸುರೇಶ, ಬಸವರಾಜ, ಅಶೋಕ ಪಾಟೀಲ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು