ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ರೋಡ್‌ ಶೋ

ಭಾನುವಾರ, ಮೇ 26, 2019
33 °C

ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ರೋಡ್‌ ಶೋ

Published:
Updated:
Prajavani

ಬೀದರ್‌: ನಾಮಪತ್ರ ಸಲ್ಲಿಸುವ ದಿನ ನೂರಾರು ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ತೆರಳಿದ್ದ ಬೀದರ್‌ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರು ಪ್ರಚಾರ ಅಂತ್ಯಗೊಳಿಸುವ ದಿನವಾದ ಭಾನುವಾರ ನಗರದಲ್ಲಿ ರೋಡ್‌ ಶೋ ನಡೆಸಿ ಮತದಾರರ ಗಮನ ಸೆಳೆದರು.

ಸಿದ್ಧಾರೂಢ ಮಠದ ಆವರಣದಿಂದ ರೋಡ್‌ ಶೋ ನಡೆಸಲು ತೀರ್ಮಾನಿಸಿದರೂ ಚುನಾವಣಾ ಅಧಿಕಾರಿಗಳು ಅನುಮತಿ ನಿರಾಕರಿಸಿದ ಕಾರಣ ಗಣೇಶ ಮೈದಾನದಿಂದ ಮೆರವಣಿಗೆ ಆರಂಭಿಸಲಾಯಿತು.

ಭಗವಂತ ಖೂಬಾ, ಮಾಜಿ ಉಪ ಮುಖ್ಯಮಂತ್ರಿ ಆರ್‌. ಅಶೋಕ, ಬೀದರ್ ಲೋಕಸಭಾ ಕ್ಷೇತ್ರದ ಪಕ್ಷದ ಸಂಚಾಲಕ ಅಮರನಾಥ ಪಾಟೀಲ, ವಿಧಾನ ಪರಿಷತ ಸದಸ್ಯ ರಘುನಾಥರಾವ್ ಮಲ್ಕಾಪುರೆ, ಮುಖಂಡರಾದ ಸೂರ್ಯಕಾಂತ ನಾಗಮಾರಪಳ್ಳಿ, ಈಶ್ವರ ಸಿಂಗ್ ಠಾಕೂರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈಶ್ವರಸಿಂಗ್ ಠಾಕೂರ್, ಗುರುನಾಥ ಕೊಳ್ಳೂರ ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಸಾಗಿದರು.

ಹರಳಯ್ಯ ವೃತ್ತದಲ್ಲಿ ಕ್ರೇನ್‌ ಮೂಲಕ ಬೃಹತ್‌ ಮಾಲೆಯನ್ನು ಎತ್ತಿ ಬಿಜೆಪಿ ನಾಯಕರಿಗೆ ಮಾಲಾರ್ಪಣೆ ಮಾಡಲಾಯಿತು.
ಮೆರವಣಿಗೆಯು ರೋಟರಿ ವೃತ್ತ, ಮಡಿವಾಳ ವೃತ್ತ, ಉದಗಿರ ರಸ್ತೆಯ ಮಾರ್ಗವಾಗಿ ಪಾಪನಾಶ ಗೇಟ್‌ಗೆ ಬಂದು ಮುಕ್ತಾಯಗೊಂಡಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !