ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ: ಪ್ರಭು ಚವಾಣ್‌ ವಿಶ್ವಾಸ

ಔರಾದ್‌ನಲ್ಲಿ ಪಕ್ಷದ ಪ್ರಮುಖರ, ಪದಾಧಿಕಾರಿಗಳ ಸಭೆ
Last Updated 22 ಅಕ್ಟೋಬರ್ 2022, 16:20 IST
ಅಕ್ಷರ ಗಾತ್ರ

ಔರಾದ್: ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಉತ್ತಮ ಆಡಳಿತ ನಡೆಸುತ್ತಿದೆ. ಹೀಗಾಗಿ ಜನ ಬಿಜೆಪಿಯತ್ತ ಹೆಚ್ಚಿನ ಒಲವು ತೋರಿಸುತ್ತಿದ್ದಾರೆ. 2023ರ ಚುನಾವಣೆಯಲ್ಲೂ ರಾಜ್ಯದಲ್ಲಿ ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ’ ಎಂದು ಪಶು ಸಂಗೋಪನೆ ಸಚಿವ ಪ್ರಭು ಚವಾಣ್ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಶನಿವಾರ ನಡೆದ ಬಿಜೆಪಿ ಪದಾಧಿಕಾರಿಗಳು ಮತ್ತು ಪಕ್ಷದ ಪ್ರಮುಖರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

‘ಬಿಜೆಪಿ ತತ್ವ ಸಿದ್ಧಾಂತಗಳ ಆಧಾರದ ಮೇಲೆ ಬೆಳೆದು ಬಂದ ಪಕ್ಷ. ಪಕ್ಷ ನನಗೆ ತಾಯಿಯಿದ್ದಂತೆ, ಕಾರ್ಯಕರ್ತರು ಕುಟುಂಬದ ಸದಸ್ಯರಿದ್ದಂತೆ. ಪಕ್ಷದ ಏಳಿಗೆಗೆ ದುಡಿಯುವ ಕಾರ್ಯಕರ್ತರೇ ಪಕ್ಷದ ಜೀವಾಳವಾಗಿದ್ದಾರೆ’ ಎಂದು ಹೇಳಿದರು.

ಒಬಿಸಿ ಸಮಾವೇಶ: 30ರಂದು ಕಲಬುರಗಿಯಲ್ಲಿ ನಡೆಯಲಿರುವ ಬಿಜೆಪಿ ಒಬಿಸಿ ಮೋರ್ಚಾದ ಸಮಾವೇಶಕ್ಕೆ ತಾಲ್ಲೂಕಿನಿಂದ 20 ಸಾವಿರ ಜನ ಹೊರಡಲಿದ್ದಾರೆ ಎಂದು ಅವರು ತಿಳಿಸಿದರು.

ಬಿಜೆಪಿ ವಿಭಾಗೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ ಬಿನ್ನಾಡಿ, ಸಹ ಸಂಘಟನಾ ಸಂಚಾಲಕ ಸೂರ್ಯಕಾಂತ ಧೋನಿ ಮಾತನಾಡಿ ದರು.

ಪಕ್ಷದ ಜಿಲ್ಲಾ ಸಹ ಪ್ರಭಾರಿ ವಿದ್ಯಾಸಾಗಾರ ಶಹಾಬಾದಿ, ಮುಖಂಡ ಸುರೇಶ ಭೋಸ್ಲೆ, ಶಿವಾಜಿರಾವ ಕಾಳೆ, ರಮೇಶ ಬಿರಾದಾರ, ಧೊಂಡಿಬಾ ನರೋಟೆ, ರಂಗರಾವ ಜಾಧವ್, ಚನ್ನಬಸವ ಬಿರಾದಾರ, ರಾಜೇಂದ್ರ ಮಾಳಿ, ಶೇಷರಾವ ಕೋಳಿ, ಬಾಬುರಾವ ವಾಡಿ, ಪ್ರಕಾಶ ಅಲ್ಮಾಜೆ, ಪ್ರಕಾಶ ಮೇತ್ರೆ, ಶ್ರೀಮಂತ ಪಾಟೀಲ, ಸಂತೋಷ ಪೋಕಲವಾರ, ಬಸವರಾಜ ಹಳ್ಳೆ, ಯಾದು ಮೇತ್ರೆ, ಶಿವಾನಂದ ವಡ್ಡೆ ಹಾಗೂ ಮಲ್ಲಿಕಾರ್ಜುನ ದಾನಾ ಅವರು ಇದ್ದರು.

ರಾಮಶೆಟ್ಟಿ ಪನ್ನಾಳೆ ಸ್ವಾಗತಿಸಿದರು. ಖಂಡೋಬಾ ಕಂಗಟೆ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT