ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವನ ನೆಲದ ಅಭಿವೃದ್ಧಿಗೆ ಬಿಜೆಪಿ ಗೆಲ್ಲಿಸಿ: ಲಕ್ಷ್ಮಣ ಸವದಿ ಮನವಿ

ಉಪಚುನಾವಣೆ ಪ್ರಚಾರದಲ್ಲಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಮನವಿ
Last Updated 11 ಏಪ್ರಿಲ್ 2021, 3:45 IST
ಅಕ್ಷರ ಗಾತ್ರ

ಬಸವಕಲ್ಯಾಣ: ‘ಬಸವನೆಲದ ಸಮಗ್ರ ಅಭಿವೃದ್ಧಿಗಾಗಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕು’ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಮನವಿ ಮಾಡಿದರು.

ತಾಲ್ಲೂಕಿನ ವಡ್ಡರ್ಗಾ ಗ್ರಾಮದಲ್ಲಿ ಶನಿವಾರ ಉಪ ಚುನಾವಣೆ ಅಂಗವಾಗಿ ಪಾದಯಾತ್ರೆ ನಡೆಸಿ ಮತಯಾಚಿಸಿದ ನಂತರ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು.

‘ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಪಕ್ಷದ ಅಭ್ಯರ್ಥಿ ಶರಣು ಸಲಗರ ಉತ್ತಮ ಅನುಭವಿ ವ್ಯಕ್ತಿ ಆಗಿದ್ದಾರೆ. ಅವರಿಗೆ ಮತ ಹಾಕಬೇಕು. ಒಂದು ವೇಳೆ ಅನ್ಯ ಪಕ್ಷದವರನ್ನು ಗೆಲ್ಲಿಸಿದರೆ ಎತ್ತು ಏರಿಗೆ ಕೋಣ ಕೆರೆಗೆ ಎಂಬ ಪರಿಸ್ಥಿತಿ ಆಗುತ್ತದೆ’ ಎಂದರು.

ಜವಳಿ ಸಚಿವ ಶ್ರೀಮಂತ ಪಾಟೀಲ ಮಾತನಾಡಿ, ‘ಈಚೆಗೆ ಮಂಡಿಸಿದ ಬಜೆಟ್‌ನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಕ್ಕಾಗಿ ₹1500 ಕೋಟಿ ಅನುದಾನ ನೀಡಿದೆ. ಬಿಜೆಪಿ ಎಲ್ಲ ಧರ್ಮ ಹಾಗೂ ಸಮುದಾಯಗಳ ಕಲ್ಯಾಣ ಬಯಸುವ ಪಕ್ಷವಾಗಿದೆ’ ಎಂದರು.

ಮಾಜಿ ಶಾಸಕ ಅರವಿಂದ ಪಾಟೀಲ, ಎಂ.ಜಿ. ಮುಳೆ, ವಿಠಲ್ ಬಿರಾದಾರ, ರತಿಕಾಂತ ಕೊಹಿನೂರ ಮಾತನಾಡಿದರು.

ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ರಾಜಕುಮಾರ ಶಿರಗಾಪೂರ, ವಿಶ್ವನಾಥ ಜಾಧವ, ರಾಜು ಜಾಧವ, ರವಿ ಚಂದನಕೆರೆ, ಕಮಲಾಕರ ಪಾಟೀಲ, ರಾಜಕುಮಾರ ಪೂಜಾರಿ, ವಿಜಯಕುಮಾರ ಖೂಬಾ ಉಪಸ್ಥಿತರಿದ್ದರು.

ಮಿರ್ಜಾಪುರ: ತಾಲ್ಲೂಕಿನ ಮಿರ್ಜಾಪುರದಲ್ಲಿ ಶನಿವಾರ ನಡೆದ ಉಪ ಚುನಾವಣೆಯ ಬಿಜೆಪಿ ಪ್ರಚಾರ ಸಭೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಎಸ್.ವೀರಯ್ಯ, ಅಭ್ಯರ್ಥಿ ಶರಣು ಸಲಗರ ಮತಯಾಚಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜಗನ್ನಾಥ ಪಾಟೀಲ ಮಂಠಾಳ, ಶಾಂತವಿಜಯ ಪಾಟೀಲ, ವಿಶ್ವನಾಥ ಹುಗ್ಗೆ ಪಾಟೀಲ, ಸುರೇಶ ಕಾನೇಕರ, ಶಿವಕುಮಾರ ಶೇಟಗಾರ, ಬಾಲಾಜಿ ರೆಡ್ಡಿ, ಬ್ರಹ್ಮಾರೆಡ್ಡಿ, ಸುಭಾಷ ಮಾಳಿ, ಅರುಣಕುಮಾರ, ಶಿವಕುಮಾರ ಪಾಟೀಲ, ಭೀಮಾಶಂಕರ ಮಾಳಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT