ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂವರು ವಿದ್ಯಾರ್ಥಿಗಳಿಗೆ ಬಿಕೆಡಿ ಫೌಂಡೇಶನ್ ನೆರವು

Last Updated 3 ಡಿಸೆಂಬರ್ 2020, 12:50 IST
ಅಕ್ಷರ ಗಾತ್ರ

ಬೀದರ್: ಇಲ್ಲಿಯ ಬಸವ ಕಾಯಕ-ದಾಸೋಹ(ಬಿಕೆಡಿ) ಫೌಂಡೇಶನ್ ವೃತ್ತಿ ಪರ ಕೋರ್ಸ್‍ಗೆ ಆಯ್ಕೆಯಾಗಿರುವ ಮೂವರು ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗಿದೆ.

ಫೌಂಡೇಶನ್ ಅಧ್ಯಕ್ಷ ಬಸವರಾಜ ಧನ್ನೂರ ಅವರು ನಗರದಲ್ಲಿ ಗುರುವಾರ ಸರ್ಕಾರಿ ಕೋಟಾದಡಿ ವೈದ್ಯಕೀಯ ಕೋರ್ಸ್‍ಗೆ ಆಯ್ಕೆಯಾದ ಗಾಂಧಿಗಂಜ್‍ನಲ್ಲಿ ಹಮಾಲರಾಗಿರುವ ಈಶ್ವರಯ್ಯ ಸ್ವಾಮಿ(ಮಠಪತಿ) ಅವರ ಪುತ್ರ ಅರುಣಕುಮಾರ, ಹುಮನಾಬಾದ್‍ನ ಲಾರಿ ಚಾಲಕ ವಿಠ್ಠಲರಾವ್ ಬೆಲ್ಲಾಳೆ ಅವರ ಪುತ್ರ ಸಾಯಿನಾಥ ಹಾಗೂ ಪಶು ವೈದ್ಯಕೀಯ ಕೋರ್ಸ್‍ನಲ್ಲಿ ವ್ಯಾಸಂಗ ಮಾಡುತ್ತಿರುವ ಆಮೇರ್ ಸೋಹೆಲ್ ಅವರಿಗೆ ತಲಾ ₹ 10 ಸಾವಿರ ಸಹಾಯ ಧನದ ಚೆಕ್ ನೀಡಿದರು.

ಫೌಂಡೇಶನ್‍ನಿಂದ ಪ್ರತಿ ವರ್ಷ ವೃತ್ತಿಪರ ಕೋರ್ಸ್‍ಗೆ ಆಯ್ಕೆಯಾಗುವ ಕಡು ಬಡತನ ಹಿನ್ನೆಲೆಯ ಜಿಲ್ಲೆಯ ಒಬ್ಬ ಪ್ರತಿಭಾವಂತ ವಿದ್ಯಾರ್ಥಿಗೆ ₹ 25 ಸಾವಿರ ಸಹಾಯ ಧನ ಒದಗಿಸುತ್ತ ಬರಲಾಗಿದೆ. ಈ ಬಾರಿ ಮೂವರಿಗೆ ತಲಾ ₹ 10 ಸಾವಿರ ನೆರವು ಕಲ್ಪಿಸಲಾಗಿದೆ ಎಂದು ಧನ್ನೂರ ಹೇಳಿದರು.

ಜಿಲ್ಲೆಯ ಅನೇಕ ಬಡ ವಿದ್ಯಾರ್ಥಿಗಳು ವಿವಿಧ ವೃತ್ತಿಪರ ಕೋರ್ಸ್‍ಗಳಿಗೆ ಆಯ್ಕೆಯಾಗುತ್ತಿರುವುದು ಸಂತಸ ಉಂಟು ಮಾಡಿದೆ. ಉತ್ತಮ ಅಂಕ ಗಳಿಸಿ ವೃತ್ತಿ ಪರ ಕೋರ್ಸ್‍ಗೆ ಆಯ್ಕೆಯಾದರೂ, ಕಾಲೇಜು ಶುಲ್ಕ ಹಾಗೂ ಹಾಸ್ಟೆಲ್ ಶುಲ್ಕ ಭರಿಸಲು ಕಷ್ಟಪಡುತ್ತಿರುವ ಬಡ ವಿದ್ಯಾರ್ಥಿಗಳಿಗೆ ಜಾತಿ, ಮತ, ಪಂಥದ ಭೇದವಿಲ್ಲದೆ ಸಹಾಯ ಧನ ಕಲ್ಪಿಸಿ, ಅವರ ಭವಿಷ್ಯ ಉಜ್ವಲಗೊಳಿಸಲು ನೆರವಾಗುವುದೇ ಫೌಂಡೇಶನ್ ಉದ್ದೇಶವಾಗಿದೆ ಎಂದು ತಿಳಿಸಿದರು.

ಈಶ್ವರಯ್ಯ ಸ್ವಾಮಿ (ಮಠಪತಿ), ವಿಠ್ಠಲರಾವ್ ಬೆಲ್ಲಾಳೆ, ನರಸಾರೆಡ್ಡಿ, ಬಸವರಾಜ, ರಾಜಕುಮಾರ ಶಹಾಪುರ, ಜಗನ್ನಾಥ, ಅಮೀತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT