ಶನಿವಾರ, ಜನವರಿ 25, 2020
22 °C

ನಾರಾಯಣಸ್ವಾಮಿ ಮೈಸೂರೆ ಉತ್ತಮ ಕೀರ್ತನಕಾರ: ಸಾಹಿತಿ ದೇಶಾಂಶ ಹುಡುಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ‘ಸಾತ್ವಿಕ ಜೀವನ ನಡೆಸಿದ್ದ ನಾರಾಯಣಸ್ವಾಮಿ ಮೈಸೂರೆ ಉತ್ತಮ ಕೀರ್ತನಕಾರ ಹಾಗೂ ಪ್ರವಚನಕಾರರಾಗಿದ್ದರು’ ಎಂದು ಸಾಹಿತಿ ದೇಶಾಂಶ ಹುಡುಗಿ ಅಭಿಪ್ರಾಯಪಟ್ಟರು.

ನಗರದ ಸಪ್ನಾ ಮಲ್ಟಿಫ್ಲೆಕ್ಸ್‌ನಲ್ಲಿ ನಡೆದ ಅಂಬಾದಾಸ ಹಾಗೂ ಮಮತಾ ಅವರ ಮದುವೆ ಸಮಾರಂಭದಲ್ಲಿ ದಿ.ನಾರಾಯಣಸ್ವಾಮಿ ಅವರು ರಚಿಸಿದ ಭಕ್ತಿರಸ ಸಾಗರ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ನಾರಾಯಣಸ್ವಾಮಿ ಆಧ್ಯಾತ್ಮಿಕ ಜೀವಿಯಾಗಿದ್ದರು. ಅವರ ಮಕ್ಕಳು ಅವರು ರಚಿಸಿದ ಎಲ್ಲ ಕವನಗಳನ್ನು ಸಂಗ್ರಹಿಸಿ ಪುಸ್ತಕ ಪ್ರಕಟಿಸಿರುವುದು ಶ್ಲಾಘನೀಯ’ ಎಂದು ಸಂತಸ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಮೃತರಾವ್‌ ಚಿಮಕೋಡೆ ಮಾತನಾಡಿ,‘ಭಕ್ತಿರಸ ಸಾಗರ ಪುಸ್ತಕದಲ್ಲಿ ಆಧ್ಯಾತ್ಮಕ್ಕೆ ಹೆಚ್ಚು ಒತ್ತು ಕೊಡಲಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಪುಸ್ತಕ ಓದಬೇಕು’ ಎಂದು ತಿಳಿಸಿದರು.

ಜಾನಪದ ಕಲಾವಿದ ಶಂಭುಲಿಂಗ ವಾಲ್ದೊಡ್ಡಿ, ಎಸ್.ಬಿ.ಕುಚಬಾಳ, ಪಂಢರಿನಾಥ, ನಿರ್ಮಲಾದೇವಿ ಮೈಸೂರೆ, ಮುಖಂಡ ಅರುಣಕುಮಾರ, ರಾಜಾರಾಮ್‌ ಅಂಬಾಟೆ, ಪತ್ರಕರ್ತ ಮಾಳಪ್ಪ, ಮೊಹನ್‌ ಭಾಷಾ, ಸುರೇಶ, ಕೃಷ್ಣ ಹಾಗೂ ಮಾರ್ಕಂಡೇಶ್ವರ ಮೈಸೂರೆ ಇದ್ದರು.

ನರಸಿಂಹ ಮೈಸೂರೆ ಸ್ವಾಗತಿಸಿದರು. ಯಶವಂತ ಕುಚಬಾಳ ನಿರೂಪಿಸಿದರು. ನರೇಶ ಮೈಸೂರೆ ವಂದಿಸಿದರು. 

ಪ್ರತಿಕ್ರಿಯಿಸಿ (+)