ಬುಧವಾರ, ಸೆಪ್ಟೆಂಬರ್ 29, 2021
20 °C

ಸ್ತನ ಶಸ್ತ್ರಚಿಕಿತ್ಸೆ ಯಶಸ್ವಿ: 5 ಕೆ.ಜಿ. ಮಲೆಗಡ್ಡೆ ಹೊರತೆಗೆದ ವೈದ್ಯರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭಾಲ್ಕಿ: ಇಲ್ಲಿಯ ತಳವಾಡೆ ಆಸ್ಪತ್ರೆಯಲ್ಲಿ ವೈದ್ಯರು ಮಲೆಗಡ್ಡೆ ನೋವಿನಿಂದ ಬಳಲುತ್ತಿದ್ದ ಹುಮನಾಬಾದ್ ತಾಲ್ಲೂಕಿನ ಗ್ರಾಮವೊಂದರ ಮಹಿಳೆಯೊಬ್ಬರ ಸ್ತನ ಶಸ್ತ್ರ ಚಿಕಿತ್ಸೆ ನಡೆಸಿ ಸುಮಾರು 5 ಕೆ.ಜಿ. ತೂಕದ ಮಲೆಗಡ್ಡೆಯನ್ನು ಯಶಸ್ವಿಯಾಗಿ ಹೊರ ತೆಗೆದಿದ್ದಾರೆ.

ಶಸ್ತ್ರಚಿಕಿತ್ಸಕ ಅನಿಲ್‌ಕುಮಾರ ತಳವಾಡೆ ಅವರ ಮಾರ್ಗದರ್ಶನದಲ್ಲಿ ಕಲಬುರ್ಗಿಯ ಪರಿಣತ ಶಸ್ತ್ರಚಿಕಿತ್ಸಕ ಗುರುರಾಜ ದೇಶಪಾಂಡೆ, ಸ್ತ್ರೀರೋಗ ತಜ್ಞೆ ಶೈಲಜಾ ತಳವಾಡೆ, ಅರವಳಿಕೆ ತಜ್ಞ ವಿಜಯಕುಮಾರ ರಾಠೋಡ ಹಾಗೂ ವೈದ್ಯಕೀಯ ತಂಡದವರು ಅಂದಾಜು 3 ಗಂಟೆ ಸ್ತನ ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ.

20 ವರ್ಷದ ನನ್ನ ವೈದ್ಯಕೀಯ ಸೇವಾವಧಿಯಲ್ಲಿ ಇದೇ ಮೊದಲು ಬಾರಿಗೆ ಇಷ್ಟು ದೊಡ್ಡ ಗಾತ್ರದ ಮಲೆಗಡ್ಡೆ ನೋಡಿದ್ದೇನೆ ಎಂದು ಪರಿಣತ ಶಸ್ತ್ರಚಿಕಿತ್ಸಕ ಗುರುರಾಜ ದೇಶಪಾಂಡೆ ತಿಳಿಸಿದರು.

ಮಲೆಗಡ್ಡೆ ಭವಿಷ್ಯದಲ್ಲಿ ಇನ್ನೂ ದೊಡ್ಡದಾದ ಗಾತ್ರದಲ್ಲಿ ಬೆಳೆದು ಮಹಿಳೆಯ ಜೀವಕ್ಕೆ ಅಪಾಯ ತರುತ್ತಿತ್ತು. ಕುಟುಂಬದವರು ಬೇಗನೆ ಚಿಕಿತ್ಸೆಗೆ ಕಾಳಜಿ ವಹಿಸಿರುವುದರಿಂದ ಮಹಿಳೆ ಜೀವ ಅಪಾಯದಿಂದ ಪಾರಾಗಿದ್ದಾರೆ ಎಂದು ಸ್ತ್ರೀರೋಗ ತಜ್ಞೆ ಡಾ.ಶೈಲಜಾ ತಳವಾಡೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು