ಗುರುವಾರ , ಅಕ್ಟೋಬರ್ 17, 2019
22 °C

ನೆರೆ ಪರಿಹಾರ ವಿಳಂಬ: ಬಿಎಸ್‌ಪಿ ಪ್ರತಿಭಟನೆ

Published:
Updated:
Prajavani

ಬೀದರ್: ರಾಜ್ಯದ ಅನೇಕ ಜಿಲ್ಲೆಗಳಲ್ಲಿ ನೆರೆ ಹಾವಳಿ ಬಂದು ಅನೇಕ ಜನ ಸಂತ್ರಸ್ತರಾದರೂ ಕೇಂದ್ರ ಸರ್ಕಾರ ಪರಿಹಾರ ಬಿಡುಗಡೆ ಮಾಡುವಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಬಹುಜನ ಸಮಾಜ ಪಾರ್ಟಿಯ ಕಾರ್ಯಕರ್ತರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ರಾಜ್ಯದ ಜನತೆ ಲೋಕಸಭೆಗೆ 25 ಸಂಸದರನ್ನು ಆಯ್ಕೆ ಮಾಡಿ ಕಳಿಸಿದೆ. ಆದರೆ, ಸಂಸದರು ಕೇಂದ್ರಕ್ಕೆ ಮನವರಿಕೆ ಮಾಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಸಂಸದರು ತಕ್ಷಣ ರಾಜೀನಾಮೆ ಸಲ್ಲಿಸಬೇಕು ಎಂದು ಒತ್ತಾಯಿಸಿದರು. ರಾಜ್ಯದಲ್ಲಿ ನೆರೆ ಹಾಗೂ ಅತಿವೃಷ್ಟಿಯಿಂದಾಗಿ 87 ಜನ ಸಾವಿಗೀಡಾಗಿದ್ದಾರೆ. 2.30 ಲಕ್ಷ ಮನೆಗಳು ಕುಸಿದಿವೆ. ‌

7.80 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿನ ಬೆಳೆ ನಾಶವಾಗಿದೆ. ಅನೇಕ ರಸ್ತೆಗಳು ಹಾಳಾಗಿವೆ. ಆದರೆ ಸಂಸದರು ಸಂತ್ರಸ್ತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಬಹುಜನ ಸಮಾಜ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಣ ಭೋದಿ, ಕಲಬುರ್ಗಿ ವಿಭಾಗೀಯ ಉಸ್ತುವಾರಿಗಳಾದ ದತ್ತು ಸೂರ್ಯವಂಶಿ, ವಿಠ್ಠಲ ನಾಯಕ, ಅಂಕುಶ ಗೋಖಲೆ, ಜಿಲ್ಲಾ ಉಪಾಧ್ಯಕ್ಷರಾದ ಅಶೋಕ ಮಂಠಾಳಕರ್, ಜಮೀಲ್ ಖಾನ್, ಜಿಲ್ಲಾ ಸಂಯೋಜಕರಾದ ಪ್ರಕಾಶ ಕೋಟೆ, ಸುಭಾಷ ಸಿಕೆನಪುರ, ವಹೀದ್ ಲಖನ್‌, ಮುಖಂಡರಾದ ತಿಪ್ಪಣ್ಣ ವಾಲಿ, ಕಪಿಲ್‌ ಗೋಡಬೋಲೆ, ರಾಜಕುಮಾರ ಮೂಲಭಾರತಿ, ಕಾರ್ಯದರ್ಶಿಗಳಾದ ಅಶೋಕ ಮಾಳಗೆ, ಸಂಜುಕುಮಾರ ಭೋಸ್ಲೆ, ಪ್ರಧಾನ ಕಾರ್ಯದರ್ಶಿ ಯೋಹಾನ್ ಡಿಸೋಜಾ, ಖಜಾಂಚಿ ಹುಲೆಪ್ಪಾ ದೊರೆ, ಮಹಮ್ಮದ್‌ ಜಾಫರ್‌ ಇದ್ದರು.

Post Comments (+)