ಶನಿವಾರ, ಅಕ್ಟೋಬರ್ 1, 2022
23 °C

ಭಾಲ್ಕಿ | ಕಳಚಿದ ಬಸ್‌ ಚಕ್ರ, ತಪ್ಪಿದ ಅನಾಹುತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭಾಲ್ಕಿ: ತಾಲ್ಲೂಕಿನ ಲಂಜವಾಡ ಸಮೀಪ ಮಂಗಳವಾರ ಭಾಲ್ಕಿಯಿಂದ ಲಖನಗಾಂವ ಕಡೆಗೆ ಹೊರಟಿದ್ದ ಸಾರಿಗೆ ಸಂಸ್ಥೆಯ ಬಸ್‌ನ ಚಕ್ರ ಕಳಚಿ ಬಿದ್ದಿದ್ದು, ಅನಾಹುತ ತಪ್ಪಿದೆ. 50 ಮೀಟರ್‌ ದೂರದವರೆಗೆ ಚಕ್ರವಿಲ್ಲದೆ ಬಸ್‌ ಮುಂದೆ ಸಾಗಿದೆ. ನಂತರ ಬಸ್‌ ಚಾಲಕ ಎಚ್ಚೆತ್ತು ನಿಲ್ಲಿಸಿದ್ದಾರೆ. ಈ ಘಟನೆಯಿಂದ ಬಸ್‌ನಲ್ಲಿದ್ದ ಪ್ರಯಾಣಿಕರು ಕೆಲಕ್ಷಣ ವಿಚಲಿತರಾಗಿದ್ದರು ಎಂದು ಲಂಜವಾಡ ಗ್ರಾಮದ ಪ್ರತ್ಯಕ್ಷದರ್ಶಿಗಳು ತಿಳಿಸಿದರು.

ರಸ್ತೆ ಮಧ್ಯೆ ಬಸ್‌ ನಿಂತಿದ್ದರಿಂದ ಸುಮಾರು ಅರ್ಧಗಂಟೆಗೂ ಹೆಚ್ಚುಕಾಲ ವಾಹನ ದಟ್ಟಣೆ ಉಂಟಾಗಿತ್ತು.

‘ಚಕ್ರದ ಟ್ಯೂಬ್‌ ಕಟ್‌ ಆಗಿದ್ದರಿಂದ ಘಟನೆ ಸಂಭವಿಸಿದೆ’ ಎಂದು ಬಸ್‌ ಡಿಪೋ ವ್ಯವಸ್ಥಾಪಕ ಭದ್ರಪ್ಪ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು