ಸೋಮವಾರ, ಜನವರಿ 27, 2020
26 °C

ಬಿಜೆಪಿಯಿಂದ ಪೌರತ್ವ ಕಾಯ್ದೆ ಜಾಗೃತಿ ಅಭಿಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಬಿಜೆಪಿಯ ನಗರ ಘಟಕದ ಸ್ವಾಮಿ ವಿವೇಕಾನಂದ, ಸಿದ್ಧಾರೂಢ, ಹನುಮಾನ, ಬಸವೇಶ್ವರ, ಭಗತ್ ಸಿಂಗ್‌ ಹಾಗೂ ಮಡಿವಾಳೇಶ್ವರ ಶಕ್ತಿ ಕೇಂದ್ರಗಳ ವತಿಯಿಂದ ನಗರದಲ್ಲಿ ಶನಿವಾರ ಪೌರತ್ವ (ತಿದ್ದುಪಡಿ) ಕಾಯ್ದೆ(ಸಿಎಎ) ಕುರಿತು ಜಾಗೃತಿ ಅಭಿಯಾನ ನಡೆಸಲಾಯಿತು.

ಒಂದು ತಂಡ ಆಕ್ಸಿಸ್ ಬ್ಯಾಂಕ್‍ನಿಂದ ಆರಂಭವಾದ ಅಭಿಯಾನ ಕಿತ್ತೂರು ರಾಣಿ ಚನ್ನಮ್ಮ ವೃತ್ತ, ಮುಕ್ತಿ ಮಂದಿರ ವರೆಗೆ, ಇನ್ನೊಂದು ತಂಡ ಪ್ರತಾಪನಗರದ ಭವಾನಿ ಮಂದಿರದಿಂದ ಶೆಟಕಾರ ಹೋಟೆಲ್‌ವರೆಗೆ, ಮತ್ತೊಂದು ತಂಡ ಮಂಗಲಪೇಟ ಭವಾನಿ ಮಂದಿರದಿಂದ ಸುಭಾಷ ಚೌಕ್, ದಿಗ್ವಾಲ್ ಗಲ್ಲಿ, ಅಬ್ದುಲ್ ಫೈಜ್ ದರ್ಗಾ ಹಾಗೂ ಮಂಗಲಪೇಟ್‌ನ ವಾಟರ್ ಟ್ಯಾಂಕ್‌ವರೆಗೆ ಅಭಿಯಾನ ನಡೆಸಿತು.

ಸಂಸದ ಭಗವಂತ ಖೂಬಾ, ಸೂರ್ಯಕಾಂತ ಶೆಟಕಾರ, ಸುಭಾಷ ಮಡಿವಾಳ, ಕಿರಣ ಪಾಲಂ, ಮಹೇಶ್ವರ ಸ್ವಾಮಿ, ಕಾಶೀನಾಥ ಶೆಟಕಾರ, ವೀರೂ ದಿಗ್ವಾಲ್, ಭೂಷಣ ಪಾಠಕ, ರಾಜು ಕೊಡ್ಡಿಕರ್, ನರೇಶ ಗೌಳಿ, ಗೋಪಾಲ, ವಿಕಾಸ ಖಸ್ಬೆ, ಸತೀಶ ಮೊಟ್ಟೆ, ಹಿರಲಾಲ್ ಕಾಂಬ್ಳೆ, ವಿಧಾನ ಪರಿಷತ್ ಸದಸ್ಯ ರಘುನಾಥರಾವ್ ಮಲ್ಕಾಪೂರೆ, ರಾಜ್ಯ ಕಾರ್ಯಕಾರಣಿ ಸದಸ್ಯ ಬಾಬು ವಾಲಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ, ಬಾಬುರಾವ್ ಮದಕಟ್ಟಿ, ಬಾಬುರಾವ್ ಕಾರಬಾರಿ, ಹಣಮಂತ ಬುಳ್ಳಾ, ಶಶಿ ಹೊಸಳ್ಳಿ, ಅರುಣ ಹೊತ್‌ಪೇಟ್, ಕಲ್ಯಾಣರಾವ್ ಬಿರಾದಾರ, ನಾಗಶೆಟ್ಟಿ ವಗದಾಳೆ, ಕೈಲಾಸ ಕಾಜಿ, ದೀಪಕ ಚಿದ್ರಿ, ಅಂಬರೀಶ ಬಟನಾಪುರೆ, ಹಣಮಂತ ಕೊಂಡಿ, ಸುನೀಲ ಗೌಳಿ, ಯೋಗೇಶ, ಗೋವಿಂದ ಶ್ರೀನಿವಾಸ ಪಾಟೀಲ, ವಿಭಾಗ ಸಹ ಪ್ರಭಾರಿ ಈಶ್ವರಸಿಂಗ್ ಠಾಕೂರ, ಗುರುನಾಥ ಜಾಂತಿಕರ್, ರಾಜಕುಮಾರ ಚಿದ್ರಿ, ದೀಪಕ ಠಾಕೂರ, ಸೂರ್ಯದೇವ, ಸಂತೋಷ ಲಕ್ಕಾ, ಭೀಮಣ್ಣ, ರಾಹುಲ್, ಧನರಾಜ, ಪ್ರಸನ್ನ ಸ್ವಾಮಿ ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)