ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔರಾದ್ | ಹೊಲದಲ್ಲೇ ಕೊಳೆಯುತ್ತಿದೆ ಎಲೆಕೋಸು

ಆರ್ಥಿಕ ಸಂಕಷ್ಟದಲ್ಲಿ ತರಕಾರಿ ಬೆಳೆಗಾರ l ಕಡಿಮೆ ಬೆಲೆಗೂ ಕೊಳ್ಳುವವರಿಲ್ಲ
Last Updated 24 ಮೇ 2020, 18:53 IST
ಅಕ್ಷರ ಗಾತ್ರ

ಔರಾದ್ (ಬೀದರ್ ಜಿಲ್ಲೆ): ಎಲೆಕೋಸು ಬೆಳೆದು ಉತ್ತಮ ಆದಾಯ ಗಳಿಸುವ ನಿರೀಕ್ಷೆಯಲ್ಲಿದ್ದ ತಾಲ್ಲೂಕಿನ ಬೋರಾಳ ಗ್ರಾಮದ ರೈತ ಸಂಜಯ ಪಾಟೀಲ ಅವರು ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ
ಸಿಲುಕಿದ್ದಾರೆ. ಎರಡು ಎಕರೆ ಜಮೀನಿನಲ್ಲಿ ಅವರು ಬೆಳೆದಿದ್ದ ಎಲೆಕೋಸು ಮಾರಾಟವಾಗದೆ ಹೊಲದಲ್ಲೇ ಕೊಳೆಯುತ್ತಿದೆ.

‘ಮಹಾರಾಷ್ಟ್ರದಿಂದ ಸಸಿ ತಂದಿದ್ದು, ₹1 ಲಕ್ಷ ಹಣ ಖರ್ಚು ಮಾಡಿದ್ದೆ. ಉತ್ತಮ ಇಳುವರಿ ಬಂದಿದೆ. ₹4 ರಿಂದ ₹ 5 ಲಕ್ಷ ಆದಾಯ ನಿರೀಕ್ಷೆ ಇತ್ತು. ಈಗ ಬೇಡಿಕೆ ಕುಸಿದಿದೆ.’ ಎಂದು ಸಂಜಯ ಪಾಟೀಲ ತಿಳಿಸಿದರು.

‘ಒಂದು ಎಕರೆಯಲ್ಲಿ ಬೆಳೆದ ಬೆಂಡೆಕಾಯಿ, ಬದನೆಕಾಯಿಯ ಉತ್ತಮ ಇಳುವರಿ ಬಂದಿದೆ. ಆದರೆ, ಲಾಕ್‌ಡೌನ್ ಕಾರಣ ಮದುವೆಗಳು ನಡೆಯುತ್ತಿಲ್ಲ. ಹೋಟೆಲ್‌ಗಳು ಮುಚ್ಚಿವೆ. ₹10ಕ್ಕೆ ಕೆ.ಜಿಯಂತೆ ಎಲೆಕೋಸು ಕೊಟ್ಟರೂ ಜನರು ಖರೀದಿಸುತ್ತಿಲ್ಲ. ಈಗ ಜಾನುವಾರುಗಳಿಗೆ ತಿನ್ನಲು ಹಾಕುತ್ತಿದ್ದೇವೆ’ ಎಂದರು.

‘ಸಂಜಯ ಪಾಟೀಲ ಅವರು ಸಮಸ್ಯೆಗೆ ಸಿಲುಕಿರುವುದನ್ನು ಇಲಾಖೆಯ ಮೇಲಧಿಕಾರಿಗಳ ಗಮನಕ್ಕೆ ತರಲು ಪ್ರಯತ್ನಿಸುತ್ತೇನೆ’ ಎಂದು ಸಹಾಯಕ ತೋಟಗಾರಿಕೆ ಅಧಿಕಾರಿ ಎಂ.ಡಿ.ಹರ್ಷದ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT