ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನುವಾರು ಅಕ್ರಮ ಸಾಗಣೆ: ಇಬ್ಬರ ಬಂಧನ

ಆರೋಪಿಗಳಿಂದ 18 ಜಾನುವಾರು ಸಹಿತ ಐಷರ್ ಸರಕು ಸಾಗಣೆ ವಾಹನ ವಶ
Last Updated 30 ಜೂನ್ 2022, 2:57 IST
ಅಕ್ಷರ ಗಾತ್ರ

ಹುಲಸೂರ: ಇಲ್ಲಿನ ಬಸವೇಶ್ವರ ವೃತ್ತದಲ್ಲಿ ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಮಹಾರಾಷ್ಟ್ರ ಮೂಲದ ವಾಹನ ಚಾಲಕ ಅಖಿಲ್ ಸಲೀಂ ಕೊತ್ವಾಲ್‌ (37) ಹಾಗೂ ವ್ಯಾಪಾರಿ ಮೈಬೂಬ್ ಮಸ್ತಾನ್‌ಸಾಬ್ ಬಾಗವಾನ (50) ಬಂಧಿತರು. ಜಾನುವಾರು ಸಹಿತ ಐಷರ್ ಸರಕು ಸಾಗಣೆ ವಾಹನ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದೆ. ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ನಳೆಗಾಂವದಿಂದ ಜಾನುವಾರು ಅಕ್ರಮವಾಗಿ ಸಾಗಿಸುತ್ತಿರುವ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿದಾಗ ವಾಹನದಲ್ಲಿ 18 ಜಾನುವಾರುಗಳು ಪತ್ತೆಯಾಗಿವೆ. ಜಾನುವಾರುಗಳನ್ನು ಕಸಾಯಿಖಾನೆಗೆ ತೆಗೆದುಕೊಂಡು ಹೋಗುತ್ತಿದ್ದರು ಎನ್ನಲಾಗಿದೆ.

ಹುಣಸೂರ ಪಿಎಸ್‌ಐ ನಿಂಗಣ್ಣ ಮಣ್ಣೂರ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಕಾನ್‌ಸ್ಟೆಬಲ್‌ಗಳಾದ ಶಿವರಾಜ, ಪ್ರಕಾಶ, ಸಂಗಮೇಶ, ಅಂಬರೀಶ, ಎಎಸಿ ಧನರಾಜ ಭಾಗವಹಿಸಿದ್ದರು. ಸಮಾಜ ಸೇವಕರಾದ ಸಂಗಮೇಶ ಭೊಪಳೆ, ದತ್ತು ರಾಜಕುಮಾರ ಗೌಡಗಾಂವೆ ನೆರವು ನೀಡಿದ್ದಾರೆ. ಈ ಸಂಬಂಧ ಹುಲಸೂರ ಪಟ್ಟಣ ‍ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT