ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೌಬಾದ್ ಶಾಲೆಯಲ್ಲಿ ಕಲಿಕಾ ಹಬ್ಬದ ಸಂಭ್ರಮ

Last Updated 12 ಫೆಬ್ರುವರಿ 2023, 6:20 IST
ಅಕ್ಷರ ಗಾತ್ರ

ಬೀದರ್: ಇಲ್ಲಿಯ ನೌಬಾದ್‍ನ ಸರ್ಕಾರಿ ಪ್ರೌಢಶಾಲೆಯಲ್ಲಿ ವಲಯ ಮಟ್ಟದ ಕಲಿಕಾ ಹಬ್ಬ ಸಂಭ್ರಮ, ಸಡಗರದಿಂದ ನಡೆಯಿತು.
ಶಾಲೆಯನ್ನು ಮದುವಣಗಿತ್ತಿಯಂತೆ ಶೃಂಗರಿಸಲಾಗಿತ್ತು. ಹಬ್ಬಕ್ಕೆ ಬಂದ ಅತಿಥಿಗಳನ್ನು ಮೆರವಣಿಗೆಯಲ್ಲಿ ಕರೆ ತರಲಾಯಿತು.

ಮೆರವಣಿಗೆಯಲ್ಲಿ ಮಹಾ ಪುರುಷರ ವೇಷ ಧಾರಿಗಳು, ವಾದ್ಯ ಮೇಳ, ಮಕ್ಕಳ ಕೋಲಾಟ, ಲೇಜಿಮ್ ನೃತ್ಯ ಗಮನ ಸೆಳೆದವು.
ಕ್ಷೇತ್ರ ಶಿಕ್ಷಣಾಧಿಕಾರಿ ವಿಜಯಕುಮಾರ ಬೆಳಮಗಿ ಉದ್ಘಾಟಿಸಿದರು. ಮಕ್ಕಳಿಂದ ವಿವಿಧ ಚಟುವಟಿಕೆ ನಡೆದವು. ಮುಖ್ಯಶಿಕ್ಷಕ ವಿಶ್ವನಾಥ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು.

ಕಲಿಕಾ ಹಬ್ಬದ ಜಿಲ್ಲಾ ನೋಡಲ್ ಅಧಿಕಾರಿ ಗೋಪಾಲರಾವ್ ಪಡವಲಕರ್, ಡಯಟ್ ಹಿರಿಯ ಉಪನ್ಯಾಸಕರಾದ ಎಚ್.ಎಸ್. ದೇಶಮುಖ, ಗೋವಿಂದ ರೆಡ್ಡಿ, ಗುಂಡಪ್ಪ ಹುಡಗೆ, ಫುರಖಾನ್, ಮಂಜುನಾಥ, ಶ್ರೀದೇವಿ ಹೂಗಾರ್ ಉಪಸ್ಥಿತರಿದ್ದರು.
ಮಾಧುರಿ ಎಸ್.ಕೆ. ನಿರೂಪಿಸಿದರು. ರವಿ ಕೆ. ಸ್ವಾಗತಿಸಿದರು. ಅಂಕುಶ ಬಿರಾದಾರ ವಂದಿಸಿದರು. ನೌಬಾದ್ ವಲಯ ವ್ಯಾಪ್ತಿಯ ಶಾಲೆಗಳ 120 ಮಕ್ಕಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT