ಬುಧವಾರ, ಮೇ 18, 2022
25 °C
ವಿವಿಧೆಡೆ ಸುಭಾಷ್ ಚಂದ್ರ ಬೋಸ್ ಜಯಂತಿ ಆಚರಣೆ

ರಾಷ್ಟ್ರೀಯತವಾದಿ ನೇತಾಜಿ ಗುಣಗಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಬಿಜೆಪಿ ಯುವ ಮೋರ್ಚಾ ನಗರ ಘಟಕದ ವತಿಯಿಂದ ನಗರದ ಬಿಜೆಪಿ ಜಿಲ್ಲಾ ಘಟಕದ ಕಚೇರಿಯಲ್ಲಿ ಸುಭಾಷ್ ಚಂದ್ರ ಬೋಸ್ ಜಯಂತಿ ಆಚರಿಸಲಾಯಿತು.

ಹಿರಿಯ ಮುಖಂಡ ಶಿವರಾಜ ಕುದುರೆ ಹಾಗೂ ರಾಜ್ಯ ಮಹಿಳಾ ಸಹಕಾರ ಮಹಾ ಮಂಡಳ ಅಧ್ಯಕ್ಷೆ ಶಕುಂತಲಾ ಬೆಲ್ದಾಳೆ ಅವರು ಸುಭಾಷಚಂದ್ರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪ ಅರ್ಪಿಸಿದರು.

ನೇತಾಜಿ ಎಂದೇ ಪ್ರಸಿದ್ಧರಾಗಿದ್ದ ಸುಭಾಷ್ ಚಂದ್ರ ಅವರು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಹಾನ್ ನಾಯಕರಲ್ಲಿ ಒಬ್ಬರಾಗಿದ್ದರು ಎಂದು ಅವರು ಬಣ್ಣಿಸಿದರು.

ಮುಖಂಡರಾದ ಪಸನ್ನಲಕ್ಷ್ಮಿ ದೇಪಾಂಡೆ, ಮಹೇಶ್ವರ ಸ್ವಾಮಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ಹಣಮಂತ ಬುಳ್ಳಾ, ಯುವ ಮೋರ್ಚಾ ನಗರ ಘಟಕದ ಅಧ್ಯಕ್ಷ ಅಂಬರೀಷ್ ಬಟನಾಪುರೆ, ನಿತಿನ್ ಕರ್ಪೂರ್, ದೇವೇಂದ್ರ ಎಮ್ಮೆಕರ್, ಮಹೇಶ ವಿಶ್ವಕರ್ಮ, ಪವನ್ ಉಂಡೆ, ಸಂಜಯ ಜೀರ್ಗೆ, ಶರಣು ಬಿರಾದಾರ, ಮಹಾನಂದ ಪಾಟೀಲ, ಶೋಭಾ ಅಣ್ಣೆಪ್ಪನೋರ, ಹೇಮಲತಾ ಜೋಶಿ, ಸತಿಶ್ ಸೆಟಗೊಂಡ, ವಿನೋದ್ ಬಾಮಂದಿ ಇದ್ದರು.
ಅನಿಲ್ ರಾಜಗೀರಾ ನಿರೂಪಿಸಿದರು. ಸುನೀಲ್ ಗೌಳಿ ವಂದಿಸಿದರು.

ಜೈಹಿಂದ ಸಂಘಟನೆ:

ನಗರದ ಜೈಹಿಂದ ಸಂಘಟನೆ ವತಿಯಿಂದ ಮಂಗಲಪೇಟ್ ವೃತ್ತದಲ್ಲಿ ಸುಭಾಷ್ ಚಂದ್ರ ಬೋಸ್ ಜಯಂತಿ ಆಚರಿಸಲಾಯಿತು.

ಸಂಘಟನೆಯ ಅಧ್ಯಕ್ಷ ವೀರೂ ದಿಗ್ವಾಲ್ ಮಾತನಾಡಿದರು. ಶಿವಯ್ಯ ಸ್ವಾಮಿ,  ಓಂಪ್ರಕಾಶ ರೊಟ್ಟೆ, ದೇವೇಂದ್ರ ದಿಗ್ವಾಲ್, ಶ್ರೀಕಾಂತ ಹೊಕ್ರಣಾ, ಪ್ರಶಾಂತ, ಅವಿನಾಶ  ನೀಲಗಿರಿ, ಸೈಯದ್ ಏಜಾಜ್, ಅಭಿಷೇಕ ಓತಗಿ ಇದ್ದರು.

ಜೈ ಭಾರತ ಮಾತಾ ಸೇವಾ ಸಮಿತಿ:

ಬೀದರ್‌ ನಗರದಲ್ಲಿ ಜೈ ಭಾರತ ಮಾತಾ ಸೇವಾ ಸಮಿತಿ ಜಿಲ್ಲಾ ಘಟಕದ ವತಿಯಿಂದ ಸುಭಾಷ್ ಚಂದ್ರ ಬೋಸ್ ಜಯಂತಿ ಪ್ರಯುಕ್ತ ಅವರ ಭಾವಚಿತ್ರದ ಮೆರವಣಿಗೆ ನಡೆಯಿತು.

ಸಮಿತಿಯ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷ  ಹವಾಮಲ್ಲಿನಾಥ ಮಹಾರಾಜ ನೇತೃತ್ವದಲ್ಲಿ ಮಲ್ಕಾಪುರದ ಭಾವಲಿಂಗ ಆಶ್ರಮದಿಂದ ನೌಬಾದ್  ಔದಂಬರಲಿಂಗ ಆಶ್ರಮದವರೆಗೆ ಮೆರವಣಿಗೆ ನಡೆಯಿತು.

ಸಮಿತಿಯ ರಾಷ್ಟ್ರೀಯ ವಕ್ತಾರರಾದ ವೈಜನಾಥ ಝಳಕಿ, ಬೀದರ್ ಜಿಲ್ಲಾ ಸಮಿತಿಯ ಮುಖಂಡರಾದ ಆಕಾಶ ಜನವಾಡ,  ಗುರುಸಿದ್ದಪ್ಪ, ಜಸ್ ಪ್ರೀತಸಿಂಗ್ ಮೊಂಟಿ,  ಶಿವು ಬೀದರ್, ವಿಷ್ಣು, ಋಷಿ, ಮಲ್ಲು, ವಿಶ್ವ ಕೋಳಾರ, ಬಸಯ್ಯ ಜಿ, ಮಹೇಶ, ಅಶ್ವಿನಿ, ಸಂಗು ಚಂದಾಪುರ, ರಾಘವ  ಇದ್ದರು.

ಯರನಳ್ಳಿಯಲ್ಲಿ ನೇತಾಜಿ ಸ್ಮರಣೆ:

ಬೀದರ್ ತಾಲ್ಲೂಕಿನ ಯರನಳ್ಳಿ ಗ್ರಾಮದಲ್ಲಿ ಪತಂಜಲಿ ಯೋಗ ಸಮಿತಿ, ಸೂರ್ಯ ಫೌಂಡೇಶನ್ ಹಾಗೂ ಇಂಟರ್‌ ನ್ಯಾಷನಲ್ ನ್ಯಾಚುರೊಪತಿ ಆರ್ಗನೈಸೇಶನ್ ಹಾಗೂ ಪ್ರೊಫೆಸನಲ್ ಸೋಶಿಯಲ್ ವರ್ಕರ್ ಅಸೋಸಿಯೇಶನ್ ವತಿಯಿಂದ ನೇತಾಜಿ ಜಯಂತಿ ಆಚರಿಸಲಾಯಿತು.

ಸಾಮಾಜಿಕ ಕಾರ್ಯಕರ್ತರಾದ ಗುರುನಾಥ ರಾಜಗೀರಾ ಮಾತನಾಡಿದರು. ಯೋಗೆಂದ್ರ, ವಿನೋದ ಪಾಟೀಲ, ಅಮರ, ಕಾರ್ಯದರ್ಶಿ ಮಹೇಶ ಅಂಕಲೆ,.ಕಮಲಾಕರ ಸ್ವಾಮಿ, ದತ್ತು ಬಾವಗೆ, ಪ್ರಭು ಎಕಶೆಟ್ಟೆ, ಗುರುನಾಥ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು