ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳಕಾಪುರ: 150 ಮಕ್ಕಳ ಉಚಿತ ತಪಾಸಣೆ

Last Updated 28 ನವೆಂಬರ್ 2022, 13:17 IST
ಅಕ್ಷರ ಗಾತ್ರ

ಖಟಕಚಿಂಚೋಳಿ: ಭಾಲ್ಕಿ ತಾಲ್ಲೂಕಿನ ಚಳಕಾಪುರ ಗ್ರಾಮದಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಶಿಬಿರದಲ್ಲಿ 150 ಮಕ್ಕಳ ಉಚಿತ ಆರೋಗ್ಯ ತಪಾಸಣೆ ಮಾಡಲಾಯಿತು.

ಹಿರಿಯ ಮಕ್ಕಳ ತಜ್ಞ ಡಾ. ದಿನಕರ ಮೋರೆ ಹಾಗೂ ಡಾ. ರವಿರಾಜ ಮೋರೆ ಅವರು ತಪಾಸಣೆ ನಡೆಸಿದರು.
ಹೃದಯ ಸಂಬಂಧಿ ರೋಗ, ಅಪೌಷ್ಟಿಕತೆ ಹಾಗೂ ರಕ್ತಹೀನತೆ ಕಂಡು ಬಂದ ಮಕ್ಕಳಿಗೆ ಉಚಿತ ಔಷಧಿ ವಿತರಿಸಲಾಯಿತು. ಮಕ್ಕಳ ರೋಗಗಳ ಕುರಿತು ಪಾಲಕರಲ್ಲಿ ತಿಳಿವಳಿಕೆ ಸಹ ನೀಡಲಾಯಿತು.

ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅನಿಲಕುಮಾರ ಕೋರಿ, ಬಸವ ಮಂಟಪದ ಅಧ್ಯಕ್ಷ ಕಾಂತಪ್ಪ ಮೆರಗಾಳೆ, ಗ್ರಾಮ ಪಂಚಾಯಿತಿ ಸದಸ್ಯ ಕಲ್ಲಪ್ಪ ರುದ್ರಪ್ಪನೋರ್, ಬಲಭೀಮ ಬಸಲಾಪುರೆ, ಹಣಮಂತರಾವ್ ಹುಲೆಪ್ಪನೋರ್, ಸಂಗಪ್ಪ ಸಿತಾಳಗೇರಾ, ಅನಿಲ್ ಜಾಧವ್, ಶರದ್ ದಾಪಕೆ, ರಾಜಕುಮಾರ ತೊಗರೆ, ಗುಂಡಪ್ಪ ಕೋಟೆ, ಚಂದ್ರಕಾಂತ ಜಾಧವ್, ಉಲ್ಲಾಸ ಸೋನಕೆರೆ, ಶರಣಪ್ಪ ಕಡಗಂಚಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT