ಬೀದರ್: ‘‘ತುರ್ತು ಪರಿಸ್ಥಿತಿಯಲ್ಲಿ ಈ ದೇಶದ ಸಂವಿಧಾನಕ್ಕೆ ಆಪತ್ತು ಬಂದಿತ್ತು. ಈ ದೇಶಕ್ಕೆ ದೊಡ್ಡ ಅನ್ಯಾಯವಾಗಿತ್ತು. ಈಗ ಕಾಂಗ್ರೆಸ್ ಪಕ್ಷಕ್ಕೆ ಆಪತ್ತು ಬಂದಿದೆ’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಟೀಕಿಸಿದರು.

ಜಿಲ್ಲಾ ಬಿಜೆಪಿಯಿಂದ ನಗರದ ಮೈಲೂರ ಕ್ರಾಸ್ನಲ್ಲಿ ಬುಧವಾರ ಏರ್ಪಡಿಸಿದ್ದ ‘ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್ ಕರಾಳ ಇತಿಹಾಸಕ್ಕೆ 50 ವರ್ಷ’ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಈಗ ಕಾಂಗ್ರೆಸ್ನವರು ಸಂವಿಧಾನ ರಕ್ಷಣೆಯ ಮಾತುಗಳನ್ನು ಆಡುತ್ತಾರೆ. ಆದರೆ, ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ತನ್ನ ಅಧಿಕಾರದ ಆಸೆಗೆ ದೇಶದ ಸಂವಿಧಾನಕ್ಕೆ ಅಪಚಾರ ಬಗೆದಿದ್ದರು. ಪ್ರಜಾಪ್ರಭುತ್ವ ವ್ಯವಸ್ಥೆ ಹಾಳು ಮಾಡಿದ್ದರು. ಇಂದಿರಾ ಗಾಂಧಿಯವರು ಮಾಡಿದ್ದು ತಪ್ಪು, ಅದು ಖಂಡನೀಯ ಎಂದು ಇವರೇಕೆ ಹೇಳುವುದಿಲ್ಲ. ಇವರಿಗೆ ಎರಡು ನಾಲಿಗೆಗಳು ಇವೆಯಾ ಎಂದು ಪ್ರಶ್ನಿಸಿದರು.

ಯಾವುದಾದರೂ ದೇಶಕ್ಕೆ ಗಂಡಾಂತರ ಬಂದಾಗ, ಯುದ್ಧದ ಪರಿಸ್ಥಿತಿ ನಿರ್ಮಾಣವಾದಾಗ ತುರ್ತು ಪರಿಸ್ಥಿತಿ ಹೇರಲಾಗುತ್ತದೆ. ಆದರೆ, ಇಂದಿರಾ ಗಾಂಧಿ ಅವರು ಅವರ ಕುರ್ಚಿ ಉಳಿಸಿಕೊಳ್ಳಲು ವಾಮಮಾರ್ಗದಿಂದ ತುರ್ತು ಪರಿಸ್ಥಿತಿ ಹೇರಿದ್ದರು. ಅದು ಬ್ರಿಟಿಷರ ಆಡಳಿತಕ್ಕಿಂತ ಅಮಾನುಷವಾಗಿತ್ತು. ರಾಜಕೀಯ ಪಕ್ಷದ ಮುಖಂಡರು, ಚಿಂತಕರು, ಪತ್ರಕರ್ತರು ಜೈಲುವಾಸ ಅನುಭವಿಸಿದ್ದರು. ವಾಕ್ ಸ್ವಾತಂತ್ರ್ಯ ಕಸಿದುಕೊಳ್ಳಲಾಗಿತ್ತು ಎಂದರು.

ಆಗ ಸಂವಿಧಾನಕ್ಕೆ ಆಪತ್ತು ಬಂದಿತ್ತು. ಈಗ ಕಾಂಗ್ರೆಸ್ ಪಕ್ಷಕ್ಕೆ ಆಪತ್ತು ಬಂದಿದೆ. ಅದರ ಮತ ಬ್ಯಾಂಕ್ ಕಡಿಮೆ ಆಗುತ್ತಿದೆ. ಒಂದೊಂದೇ ರಾಜ್ಯಗಳು ಅದರ ಕೈತಪ್ಪುತ್ತಿವೆ. ಅಧಿಕಾರ ಹೋಗುತ್ತಿದೆ ಎಂಬ ಭಯ ಕಾಡುತ್ತಿದೆ. ಈಗ ಕೈಯಲ್ಲಿ ಸಂವಿಧಾನದ ಪುಸ್ತಕ ಹಿಡಿದುಕೊಂಡು ಅದರ ರಕ್ಷಣೆಯ ಮಾತುಗಳನ್ನು ಆಡುತ್ತಾರೆ. ಆದರೆ, ಈ ದೇಶದ ಪ್ರತಿಯೊಬ್ಬ ಪ್ರಜೆ ಸಂವಿಧಾನವನ್ನು ಗೌರವಿಸುತ್ತಾನೆ, ರಕ್ಷಿಸುತ್ತಾನೆ ಎಂದರು.

ಶಾಸಕ ಡಾ.ಶೈಲೇಂದ್ರ ಕೆ. ಬೆಲ್ದಾಳೆ ಮಾತನಾಡಿ, ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿ ಹೇರಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದರು. ರಾಹುಲ್ ಗಾಂಧಿ ಅವರು ಸದಾ ಸಂವಿಧಾನದ ಪುಸ್ತಕ ಹಿಡಿದುಕೊಂಡು ಅದರ ರಕ್ಷಣೆಯ ಮಾತು ಅಡುತ್ತಾರೆ. ಆದರೆ, ಅವರ ಅಜ್ಜಿಯೇ ಸಂವಿಧಾನಕ್ಕೆ ಅಪಾಚಾರವಾಗುವ ರೀತಿಯಲ್ಲಿ ತುರ್ತು ಪರಿಸ್ಥಿತಿ ಹೇರಿದ್ದರು ಎಂದು ಟೀಕಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಪಾಟೀಲ ಮಾತನಾಡಿ, ಯಾವುದೇ ಕಾರ್ಯಕ್ರಮವಿದ್ದರೂ ಉದ್ಘಾಟನೆ ಮಾಡಲಾಗುತ್ತದೆ. ಆದರೆ, ಇದು ಕರಾಳ ದಿನಾಚರಣೆಯ ನೆನಪಿನ ಕಾರ್ಯಕ್ರಮ ಇರುವುದರಿಂದ ಉದ್ಘಾಟನಾ ಸಮಾರಂಭ ಆಯೋಜಿಸಿಲ್ಲ. ತುರ್ತು ಪರಿಸ್ಥಿತಿಯಲ್ಲಿ ನಮ್ಮವರು ಅನುಭವಿಸಿದ ಸಂಕಷ್ಟ ಮೆಲುಕು ಹಾಕುವ ದಿನ ಎಂದರು.

ತುರ್ತು ಪರಿಸ್ಥಿತಿಯಲ್ಲಿ ಜೈಲುವಾಸ ಅನುಭವಿಸಿದ ಮಾರುತಿ ಪಂಚಭಾಯ್, ಶಿವಶಂಕರ ತರನಳ್ಳಿ ಹಾಗೂ ಸಂಗಪ್ಪ ಹಳ್ಳದಕೇರಿ ಅವರನ್ನು ಸನ್ಮಾನಿಸಲಾಯಿತು. ಶಾಸಕ ಎಂ.ಜಿ.ಮುಳೆ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಮಾಧವ ಹಸೂರೆ, ಪೀರಪ್ಪ ಔರಾದೆ, ಕಿರಣ್ ಪಾಟೀಲ, ಎಸ್ಸಿ ಮೋರ್ಚಾ ರಾಷ್ಟ್ರೀಯ ಕಾರ್ಯದರ್ಶಿ ಜೈಕುಮಾರ ಕಾಂಗೆ, ಮುಖಂಡರಾದ ರಾಜಶೇಖರ ನಾಗಮೂರ್ತಿ, ಬಾಬುವಾಲಿ, ಶಕುಂತಲಾ ಬೆಲ್ದಾಳೆ, ರಘುನಾಥರಾವ್ ಮಲ್ಕಾಪೂರೆ, ಮಾಣಿಕರಾವ್, ಹೇಮಾ ತುಕ್ಕಾರೆಡ್ಡಿ ಮತ್ತಿತರರು ಇದ್ದರು.

‘ಇದು ಹಗರಣಗಳ ಸರ್ಕಾರ’

‘ಇದು ಹಗರಣಗಳ ಸರ್ಕಾರ. ಒಂದಾದ ನಂತರ ಒಂದು ಹಗರಣಗಳು ಬೆಳಕಿಗೆ ಬರುತ್ತಿವೆ. ಒಂದು ಹಗರಣದ ಕುರಿತು ಹೋರಾಟ ಮಾಡಬೇಕು ಎನ್ನುವಷ್ಟರಲ್ಲಿ ಇನ್ನೊಂದು ಹಗರಣ ಆಗುತ್ತದೆ. ಸಿದ್ದರಾಮಯ್ಯನವರು ಸುಳ್ಳುಗಳ ಸರ್ದಾರ ಎನ್ನುವುದು ಎಲ್ಲರಿಗೂ ಗೊತ್ತಾಗಿದೆ’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.

ದಮ್ಮಯ್ಯ ನಿನ್ನ ಕಾಲು ಹಿಡಿಯುತ್ತೇನೆ ಎಂದು ಸಿದ್ದರಾಮಯ್ಯನವರು ಸಿಎಲ್ಪಿ ಸಭೆ ಕರೆಯುತ್ತಿದ್ದಾರೆ. ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಸಿಲುಕಿದೆ. ಅದರಿಂದ ಹೊರಬರಲು ಆಗುತ್ತಿಲ್ಲ. ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಹೋರಾಟ ಮುಂದುವರೆಸಲಿದೆ. ತಾರ್ಕಿಕ ಅಂತ್ಯ ಕಾಣುವವರೆಗೆ ವಿರಮಿಸುವುದಿಲ್ಲ ಎಂದರು.

‘ಅಂಬೇಡ್ಕರ್ ಬರೆದ ಪೀಠಿಕೆ ಓದಿಸಲಿ’

‘ಕಾಂಗ್ರೆಸ್ನವರು ಸದನದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಬರೆದ ಸಂವಿಧಾನದ ಪೀಠಿಕೆಯನ್ನು ಓದಿಸಬೇಕು. ಆದರೆ, ಇದನ್ನು ಅವರು ಮಾಡುವುದಿಲ್ಲ. ಅದರ ಬದಲು ತಮಗೆ ಬೇಕಾಗಿದ್ದನ್ನು ಸೇರಿಸಿ, ತುಂಬಿಸಿದ ಪೀಠಿಕೆ ಓದಿಸುತ್ತಾರೆ’ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.

ಸದನದಲ್ಲಿ ಮೊದಲು ಕಾಂಗ್ರೆಸ್ನವರು ಸಂವಿಧಾನದ ಪೀಠಿಕೆ ಓದುತ್ತಿರಲಿಲ್ಲ. ಏಕೆಂದರೆ ಆ ಪೀಠಿಕೆ ಅಂಬೇಡ್ಕರ್ ಅವರು ಬರೆದಿದ್ದರು. ಈಗ ತಮಗೆ ಬೇಕಾಗಿರುವುದನ್ನು ಸೇರಿಸಿ ಓದಿಸುತ್ತಾರೆ. ಜಾತ್ಯತೀತ ಪದ ಎಲ್ಲಿಂದ ಬಂತು? ಅಂಬೇಡ್ಕರ್ ಅವರು ಈ ಪದ ಸೇರಿಸಿರಲಿಲ್ಲ. ಜಾತ್ಯತೀತ ಎಂಬ ಪದ ಸಂವಿಧಾನದಲ್ಲಿ ಸೇರಿಸಲು ಕಾಂಗ್ರೆಸ್ನವರ ಕಡೆಯಿಂದ ಒತ್ತಡ ಬಂದಿತ್ತು. ಆದರೆ, ಅಂಬೇಡ್ಕರ್ ಅವರು ಅದಕ್ಕೆ ಒಪ್ಪಿರಲಿಲ್ಲ. ಅದನ್ನು ಸೇರಿಸಲು ಬಿಟ್ಟಿರಲಿಲ್ಲ ಎಂದರು.

ಜಾತ್ಯತೀತ ಎನ್ನುವುದು ಎಲ್ಲಿದೆ? ಇಡೀ ಸಮಾಜ ಜಾತಿಗಳ ಸಮಾಜ. ಇಡೀ ದೇಶದಲ್ಲಿ ಜಾತಿಗಳ ಮೇಲೆ ಆಡಳಿತ ನಡೆಯುತ್ತಿದೆ. ಜಾತಿಗಳನ್ನು ಗುರುತಿಸಿ, ನಾನು ಆ ಜಾತಿ, ಈ ಜಾತಿ ಎಂದು ಗುರುತಿಸಲಾಗುತ್ತಿದೆ. ಇದರಲ್ಲಿ ‘ತೀತ’ ಎಲ್ಲಿಂದ ಬರುತ್ತದೆ ಎಂದು ಪ್ರಶ್ನಿಸಿದರು.

ತುರ್ತು ಪರಿಸ್ಥಿತಿ ಪೋಸ್ಟರ್ ಪ್ರದರ್ಶನ

‘ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್ ಕರಾಳ ಇತಿಹಾಸಕ್ಕೆ 50 ವರ್ಷ’ ಶೀರ್ಷಿಕೆಯ ಅಡಿಯಲ್ಲಿ ಜಿಲ್ಲಾ ಬಿಜೆಪಿಯಿಂದ ಬೀದರ್ನ ಶಿವನಗರ ಸಮೀಪದ ವಾಕಿಂಗ್ ಟ್ರ್ಯಾಕ್ನಲ್ಲಿ ತುರ್ತು ಪರಿಸ್ಥಿತಿಗೆ ಸಂಬಂಧಿಸಿದ ಪೋಸ್ಟರ್, ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು.

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಪಕ್ಷದ ಶಾಸಕರು, ಮುಖಂಡರು ಅಲ್ಲಿಗೆ ಭೇಟಿ ಕೊಟ್ಟು ವೀಕ್ಷಿಸಿದರು. ಸಾರ್ವಜನಿಕರ ವೀಕ್ಷಣೆಗೂ ಅವಕಾಶ ಕಲ್ಪಿಸಲಾಗಿತ್ತು.

ಮಳೆಯಲ್ಲೇ ರ್ಯಾಲಿ ನಡೆಸಿದ ಮುಖಂಡರು

ವಸತಿ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ವಿರುದ್ಧ ಜಿಲ್ಲಾ ಬಿಜೆಪಿಯು ಬೀದರ್ನಲ್ಲಿ ಬುಧವಾರ ‘ಮನೆಗಳೆಲ್ಲಾ ಭ್ರಷ್ಟರ ಪಾಲು, ಬಡವರೆಲ್ಲ ಬೀದಿ ಪಾಲು’ ಘೋಷವಾಕ್ಯದೊಂದಿಗೆ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನಾ ರ್ಯಾಲಿ ನಡೆಸಿತು.

ಬೀದರ್ನ ಮೈಲೂರ ಕ್ರಾಸ್ನಿಂದ ರ್ಯಾಲಿ ಆರಂಭಿಸುತ್ತಿದ್ದಂತೆ ಜಿಟಿಜಿಟಿ ಮಳೆ ಆರಂಭಗೊಂಡಿತು. ಮಹಾವೀರ ವೃತ್ತ ತಲುಪುತ್ತಿದ್ದಂತೆ ಮಳೆ ಹೆಚ್ಚಾಯಿತು. ಆದರೆ, ಬಿಜೆಪಿ ಮುಖಂಡರು ಮಳೆ ಲೆಕ್ಕಿಸದೆ ಘೋಷಣೆ ಕೂಗುತ್ತ ರ್ಯಾಲಿ ನಡೆಸಿದರು. ನಗರದ ತಾಲ್ಲೂಕು ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಲು ವಿಫಲ ಯತ್ನ ನಡೆಸಿದರು. ಪೊಲೀಸರು ಕಚೇರಿಗೆ ಹೋಗುವ ಮುಖ್ಯ ಪ್ರವೇಶ ದ್ವಾರದ ಎದುರು ಬ್ಯಾರಿಕೇಡ್ಗಳನ್ನು ಅಳವಡಿಸಿ ಬಿಗಿ ಬಂದೋಬಸ್ತ್ ಮಾಡಿದರು. ಬಿಜೆಪಿ ಮುಖಂಡರು, ಕಾರ್ಯಕರ್ತರಿಗೆ ಒಳಗೆ ತೆರಳಲು ಅವಕಾಶ ಕಲ್ಪಿಸಲಿಲ್ಲ. ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಎಲ್ಲ ಹಗರಣಗಳಿಗೆ ಸಂಬಂಧಿಸಿ ಸಿಎಂ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕೆಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.