ಮಕ್ಕಳ ಪ್ರತಿಭೆ ಪ್ರೋತ್ಸಾಹಿಸಲು ಸಲಹೆ

7

ಮಕ್ಕಳ ಪ್ರತಿಭೆ ಪ್ರೋತ್ಸಾಹಿಸಲು ಸಲಹೆ

Published:
Updated:
ಭಾಲ್ಕಿ ತಾಲ್ಲೂಕಿನ ಹಜನಾಳ ಗ್ರಾಮದಲ್ಲಿ ಸ್ಫೂರ್ತಿ ಫೌಂಡೇಶನ್‌ ವತಿಯಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಹಾವಗಿಲಿಂಗೇಶ್ವರ ಶಿವಾಚಾರ್ಯರು ಇದ್ದರು

ಭಾಲ್ಕಿ: ವಿದ್ಯಾರ್ಥಿಗಳು ಜೀವನದಲ್ಲಿ ಉನ್ನತವಾದದ್ದನ್ನು ಸಾಧಿಸಲು ಶಿಕ್ಷಕರು, ಸಮಾಜ ಅವರ ಪ್ರತಿಭೆಯನ್ನು ಗುರುತಿಸಬೇಕು ಎಂದು ಹಲಬರ್ಗಾ ರಾಚೋಟೇಶ್ವರ ಮಠದ ಪೀಠಾಧಿಪತಿ ಹಾವಗಿಲಿಂಗ ಶಿವಾಚಾರ್ಯರು ನುಡಿದರು.

ತಾಲ್ಲೂಕಿನ ಹಜನಾಳ ಗ್ರಾಮದಲ್ಲಿ ಸ್ಫೂರ್ತಿ ಫೌಂಡೇಶನ್‌ ವತಿಯಿಂದ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಶೇ 80ಕ್ಕಿಂತ ಹೆಚ್ಚು ಅಂಕ ಪಡೆದಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿದರು. ಪ್ರತಿಭೆ ಎಲ್ಲರಲ್ಲಿಯೂ ಇರುತ್ತದೆ. ಯಾರೂ ದಡ್ಡರಲ್ಲ. ಮಕ್ಕಳಿಗೆ ಅವಶ್ಯವಾಗಿ ಬೇಕಾಗಿರುವುದು ಸೂಕ್ತ ಮಾರ್ಗದರ್ಶನ. ಧನಾತ್ಮಕ ಪ್ರೇರಣೆ. ಈ ಕಾರ್ಯವನ್ನು ಸುಮಾರು ಮಾಡುತ್ತ ಬರುತ್ತಿರುವ ಸ್ಫೂರ್ತಿ ಫೌಂಡೇಶನ್‌ ಕಾರ್ಯ ಶ್ಲಾಘನೀಯ ಎಂದರು.

ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಪ್ರೇಮಸಾಗರ ದಾಂಡೇಕರ್‌ ಮಾತನಾಡಿ, ಉತ್ತಮ ಶಿಕ್ಷಣದಿಂದ ಮಾತ್ರ ಸುಶಿಕ್ಷಿತ, ಸುಂದರ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಲಬುರ್ಗಿ ವಿಭಾಗದ ಕಾರ್ಯವಾಹಕರಾದ ಶಿವಲಿಂಗ ಕುಂಬಾರ ಮಾತನಾಡಿ, ಸಾಧನೆ ಪ್ರಯತ್ನವಾದಿಗಳ ಸ್ವತ್ತು ಎಂದರು.

ಸಾಮಾಜಿಕ ಹೋರಾಟಗಾರ ಗುರುನಾಥ ವಡ್ಡೆ, ರಾಜೇಂದ್ರ ಜೊನ್ನೆಕೇರೆ ಮಾತನಾಡಿದರು. ವಿದ್ಯಾರ್ಥಿಗಳಾದ ಪ್ರಜ್ವಲ್‌ ಕೋಟೆ, ಪೂಜಾ ಕಲ್ಲಪ್ಪಾ, ವಿಜಯಲಕ್ಷ್ಮೀ ಶಿವರಾಜ ಅವರನ್ನು ಗೌರವಿಸಲಾಯಿತು.

ಪ್ರಮುಖರಾದ ಬಸವರಾಜ ಬೆಲ್ಲಾಳೆ, ಗಣಪತಿ ಸಕ್ರೇಪ್ಪ, ದಯಾನಂದ ಪವಾರ, ನಂದುಕುಮಾರ, ಬಾಲಾಜಿ ಪವಾರ್‌, ವಿನೋದ ಬೂದೆ, ಸೂರ್ಯಕಾಂತ ತಳವಾಡೆ, ರಾಜೇಂದ್ರ ಢೋಗಾಳೆ, ಬಾಲಾಜಿ ಜಾಧವ ಇದ್ದರು. ಬಾಲಾಜಿ ಪವಾರ್‌ ಸ್ವಾಗತಿಸಿದರು. ಶಿವರಾಜ ಕೋಟೆ ನಿರೂಪಿಸಿದರು. ವಿಷ್ಣುಕಾಂತ ಸಕ್ರೇಪ್ಪ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !