ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರಿದ ಮೆಣಸಿನಕಾಯಿ, ಇಳಿದ ಬದನೆಕಾಯಿ

ಹಿರೇಕಾಯಿ, ಬೀನ್ಸ್‌ ಬೆಲೆ ಪ್ರತಿ ಕೆ.ಜಿಗೆ ₹ 80
Last Updated 24 ಫೆಬ್ರುವರಿ 2023, 13:58 IST
ಅಕ್ಷರ ಗಾತ್ರ

ಬೀದರ್: ಹಗಲಲ್ಲಿ ಬಿಸಿಲು ಆವರಿಸಿಕೊಳ್ಳುತ್ತಿದ್ದರೂ ರಾತ್ರಿ ವೇಳೆಯಲ್ಲಿ ತಂಪಾದ ವಾತಾವರಣ ಇರುತ್ತಿದೆ. ಕೆರೆ, ಬಾವಿಗಳ ನೀರು ಬಳಸಿ ತರಕಾರಿ ಬೆಳೆಯುತ್ತಿರುವ ಕಾರಣ ಮಾರುಕಟ್ಟೆಯಲ್ಲಿ ತರಕಾರಿ ಕೊರತೆಯಾಗಿಲ್ಲ. ಹೀಗಾಗಿ ಬಹುತೇಕ ತರಕಾರಿ ಬೆಲೆ ಹೆಚ್ಚಾಗಿಲ್ಲ.

ಅಡುಗೆ ಸ್ವಾದ ಹೆಚ್ಚಿಸುವ ಮೆಣಸಿನಕಾಯಿ, ಟೊಮೆಟೊ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 1 ಸಾವಿರ ಹೆಚ್ಚಾಗಿದೆ. ಹಸಿ ಮೆಣಸಿನಕಾಯಿ ಬೆಲೆ ಕಡಿಮೆಯಾಗದಿದ್ದರೆ ಒಣ ಮೆಣಸಿನಕಾಯಿ ಬೆಲೆಯೂ ಹೆಚ್ಚಾಗಲಿದೆ. ಈಗಾಗಲೆ ಬ್ಯಾಡಗಿ ದ್ವಿತೀಯ ದರ್ಜೆ ಮೆಣಸಿನಕಾಯಿ ಪ್ರತಿ ಕೆಜಿಗೆ ₹ 320 ರಿಂದ ₹ 420, ಗುಂಟೂರ ಮೆಣಸಿನಕಾಯಿ ₹ 200ರಿಂದ ₹ 240 ಹಾಗೂ ಸ್ಥಳೀಯ ಮೆಣಸಿನಕಾಯಿ ₹ 150ರಿಂದ ₹ 200 ಮಾರಾಟವಾಗುತ್ತಿದೆ.


ಬೆಳ್ಳುಳ್ಳಿ, ಆಲೂಗಡ್ಡೆ, ಎಲೆಕೋಸು, ಹೂಕೋಸು, ಗಜ್ಜರಿ, ಬೀನ್ಸ್, ಚವಳೆಕಾಯಿ, ಸೌತೆಕಾಯಿ, ಬೆಂಡೆಕಾಯಿ, ಹಿರೇಕಾಯಿ, ನುಗ್ಗೆಕಾಯಿ, ಮೆಂತೆ, ಸಬ್ಬಸಗಿ, ಕರಿಬೇವು ಬೆಲೆ ಸ್ಥಿರವಾಗಿದೆ.

ಪ್ರತಿ ಕ್ವಿಂಟಲ್‌ಗೆ ಡೊಣಮೆಣಸಿನ ಕಾಯಿ, ತುಪ್ಪದ ಹಿರೇಕಾಯಿ ಬೆಲೆ ₹ 2 ಸಾವಿರ, ಬದನೆಕಾಯಿ, ಕೊತಂಬರಿ, ಪಾಲಕ್ ₹ 1 ಸಾವಿರ ಹಾಗೂ ಈರುಳ್ಳಿ ಬೆಲೆ ₹ 500 ಕಡಿಮೆಯಾಗಿದೆ.

ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯಿಂದ ಈರುಳ್ಳಿ, ಬೆಳ್ಳುಳ್ಳಿ ಆವಕವಾಗಿದೆ. ಹೈದರಾಬಾದ್‌ನಿಂದ ಬೀನ್ಸ್, ಬೀಟ್‌ರೂಟ್‌, ಗಜ್ಜರಿ, ನುಗ್ಗೆಕಾಯಿ, ಡೊಣ ಮೆಣಸಿನಕಾಯಿ, ತೊಂಡೆಕಾಯಿ, ಚವಳೆಕಾಯಿ, ಪಡವಲಕಾಯಿ, ಹಾಗಲಕಾಯಿ, ಬೆಳಗಾವಿಯಿಂದ ಹಸಿ ಮೆಣಸಿನಕಾಯಿ ಹಾಗೂ ಕೊತಂಬರಿ ನಗರದ ಮಾರುಕಟ್ಟೆಗೆ ಬಂದಿದೆ.

‘ಭಾಲ್ಕಿ, ಚಿಟಗುಪ್ಪ ಹಾಗೂ ಬೀದರ್‌ ತಾಲ್ಲೂಕಿನಿಂದ ಬದನೆಕಾಯಿ, ಹೂಕೋಸು, ಈರುಳ್ಳಿ, ಮೆಂತೆ ಹಾಗೂ ಸಬ್ಬಸಗಿ ಸೊಪ್ಪು ನಗರದ ತರಕಾರಿ ಸಗಟು ಮಾರುಕಟ್ಟೆಗೆ ಬಂದಿದೆ’ ಎಂದು ತರಕಾರಿ ವ್ಯಾಪಾರಿ ಶಿವಕುಮಾರ ಮಾಡಗೂಳ ಹೇಳುತ್ತಾರೆ.

.....................................................................

ಬೀದರ್‌ ತರಕಾರಿ ಚಿಲ್ಲರೆ ಮಾರುಕಟ್ಟೆ
........................................................................
ತರಕಾರಿ (ಪ್ರತಿ ಕೆ.ಜಿ.) ಕಳೆದ ವಾರ, ಈ ವಾರ

.......................................................................
ಈರುಳ್ಳಿ 20-25,10-20
ಬೆಳ್ಳುಳ್ಳಿ 20-30,25-30
ಆಲೂಗಡ್ಡೆ 20-30,20-30
ಮೆಣಸಿನಕಾಯಿ 40-50,50-60
ಎಲೆಕೋಸು 20-30,20-30
ಹೂಕೋಸು 50-60,50-60
ಗಜ್ಜರಿ 30-40,30-40
ಬೀನ್ಸ್ 60-80,60-80
ಟೊಮೆಟೊ 20-30,30-40

ಬದನೆಕಾಯಿ 40-50,30-40
ಬೆಂಡೆಕಾಯಿ 100–120, 100-120
ಹಿರೇಕಾಯಿ 60-80,60-80
ನುಗ್ಗೆಕಾಯಿ 100-120,100-120

ಡೊಣಮೆಣಸಿನ ಕಾಯಿ 50-60,60-80
ಚವಳೆಕಾಯಿ 60-80,60-80
ಸೌತೆಕಾಯಿ 20-30,20-30
ತುಪ್ಪದ ಹಿರೇಕಾಯಿ 60-80,50-60

ಮೆಂತೆ 20-30,20-30
ಸಬ್ಬಸಗಿ 60-80,60-80
ಕರಿಬೇವು 100-120,100-120
ಕೊತಂಬರಿ 20-30,10-20
ಪಾಲಕ್ 30-40,20-30

* * * *

ಪೇಟೆ ಧಾರಣಿ
(ಪ್ರತಿ ಕ್ವಿಂಟಲ್‌– ಕನಿಷ್ಠ– ಗರಿಷ್ಠ)
.....................................................
ಕಡಲೆ ಕಾಳು – ₹ 4,200-₹ 4,650
ಅವರೆಕಾಯಿ - ₹ 7,200-₹ 7,600
ಜೋಳ ₹ 3,000-₹ 4,500
ನುಚ್ಚು ಅಕ್ಕಿ ₹ 2,400-₹ 2,800

ಅಕ್ಕಿ ₹ 4,400-₹ 6,000
ಸೋಯಾಬಿನ್ ₹ 5,000-₹ 5,400
ಗೋಧಿ ₹ 2,200-₹ 3,300
ಕುಸುಬೆ ₹ 4,400-₹ 4,700

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT