ಚಿಟಗುಪ್ಪ (ಹುಮನಾಬಾದ್): ಬಲವಂತವಾಗಿ ಮತಾಂತರಗೊಳ್ಳುವಂತೆ ಕಿರುಕುಳ ನೀಡಿದ್ದಾರೆ ಎನ್ನುವ ಆರೋಪದಡಿ ನಾಲ್ವರ ವಿರುದ್ದ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಲ್ಲೂಕಿನ ಮುತ್ತಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋವಿಂದ ತಾಂಡಾದ ಭಾರತಿಬಾಯಿ ಎಂಬುವವರು ನೀಡಿದ ದೂರಿನ ಮೇರೆಗೆ ಬಲರಾಮ (ಸಮೀರ್), ತೋಳುರಾಮ ರಾಠೋಡ, ಲಾಲಿಬಾಯಿ, ಗಾಯತ್ರಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.

ಘಟನೆ ವಿವರ: ‘ಕಳೆದ ಎರಡು ವರ್ಷಗಳ ಹಿಂದೆ ತೆಲಂಗಾಣ ರಾಜ್ಯದ ಜಹೀರಾಬಾದ್ ಹತ್ತಿರದ ವಿಟ್ಟುನಾಯಕ ತಾಂಡಾದ ಬಲರಾಮ ಜೊತೆಗೆ ಮದುವೆ ಮಾಡಲಾಗಿತ್ತು. ಬಲರಾಮ ಅವರು ಇಸ್ಲಾಂ ಧರ್ಮ ಸ್ವೀಕರಿಸಿದ್ದನ್ನು ಮುಚ್ಚಿಟ್ಟು ನನ್ನ ಜೊತೆಗೆ ಲಂಬಾಣಿ ಸಂಪ್ರದಾಯದಂತೆ ಮದುವೆಯಾಗಿ ಮೋಸ ಮಾಡಿದ್ದಾನೆ’ ಎಂದು ಭಾರತಿಬಾಯಿ ದೂರು ತಿಳಿಸಿದ್ದಾರೆ.

ಮದುವೆಯಾದ ಕೆಲ ದಿನಗಳಲ್ಲಿ ನನ್ನನ್ನೂ ಇಸ್ಲಾಂ ಧರ್ಮ ಸ್ವೀಕರಿಸುವಂತೆ ಒತ್ತಾಯಿಸಿದ್ದಾರೆ. ಇದಕ್ಕೆ ನನ್ನ ಅತ್ತೆ, ಮಾವ, ನಾದಿನಿ ಅವರ ಧ್ವನಿಗೊಡಿಸಿದ್ದಾರೆ. ನನಗೆ ಮಗು ಜನನವಾದ ಬಳಿಕ ಮತಾಂತರ ಕಿರುಕುಳ ಜಾಸ್ತಿ ಮಾಡಿದ್ದರು. ಮಗುವಿಗೂ ಖತನಾ ಮಾಡಿಸುವುದಾಗಿ ತಿಳಿಸಿದರು. ಇದನ್ನು ವಿರೋಧಿಸಿದ್ದಕ್ಕೆ ನನಗೆ ಜೀವ ಬೆದರಿಕೆ ಹಾಕಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ್ದಾರೆ. ನನಗೆ ಸೂಕ್ತ ನ್ಯಾಯ ಒದಗಿಸಬೇಕು’ ಎಂದು ಸಂತ್ರಸ್ಥೆ ಯುವತಿ ದೂರಿನಲ್ಲಿ ತಿಳಿಸಿದ್ದಾರೆ.

ಶಾಸಕರ ಭೇಟಿ: ಮತಾಂತರ ಕಿರುಕುಳದಿಂದ ತವರು ಮನೆ (ಗೋವಿಂದ್ ತಾಂಡಾಕ್ಕೆ) ಬಂದಿದ್ದ ಸಂತ್ರಸ್ಥೆಯನ್ನು ಶಾಸಕ ಪ್ರಭು ಚೌಹಾಣ್ ಮತ್ತು ಡಾ.ಶೈಲೇಂದ್ರ ಬೆಲ್ದಾಳೆ ಭೇಟಿ ನೀಡಿ ಧೈರ್ಯ ತುಂಬಿದರು.

ನಂತರ ಅವರು ಮಾತನಾಡಿ, ‘ಗೋವಿಂದ್ ತಾಂಡಾದ ಭಾರತಿಬಾಯಿ ಎಂಬುವವರನ್ನು ಮದುವೆಯಾಗಿದ್ದ ಬಲರಾಮ ಮತ್ತು ಅವರ ಕುಟುಂಬದವರು ಬಲವಂತವಾಗಿ ಮುಸ್ಲಿಂ ಸಮುದಾಯಕ್ಕೆ ಮತಾಂತರ ಆಗುವಂತೆ ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ನೀಡಿದ್ದಾರೆ. ಸಂತ್ರಸ್ತೆ ತಾನು ಅನುಭವಸಿದ್ದ ನೋವುಗಳನ್ನು ನಮ್ಮ ಜೊತೆಗೆ ಹೆಚ್ಚಿಕೊಂಡಿದ್ದಾರೆ. ನಾವು ಈ ಕುಟುಂಬದ ಜೊತೆಗೆ ಇದ್ದೇವೆ’ ಎಂದರು.

‘ಕಿರುಕುಳ ನೀಡುತ್ತಿದ್ದವರ ಮೇಲೆ ಈಗಾಗಲೇ ಪ್ರಕರಣ ದಾಖಲಾಗಿದೆ. ಇದನ್ನು ಗಂಭೀರವಾಗಿ ತೆಗೆದುಕೊಂಡು ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸುವ ಭರವಸೆ ನೀಡಿದ್ದೇವೆ’ ಎಂದು ಮಾಹಿತಿ ನೀಡಿದರು.

ಸಿಪಿಐ ಶ್ರೀನಿವಾಸ ಅಲ್ಲಾಪೂರೆ, ಪಿಎಸ್ಐ ಬಸವಲಿಂಗ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-33-880528884

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.