ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮಲನಗರದಲ್ಲಿ ‘ಯೇಸು’ ಸ್ಮರಣೆ

Last Updated 26 ಡಿಸೆಂಬರ್ 2019, 13:36 IST
ಅಕ್ಷರ ಗಾತ್ರ

ಕಮಲನಗರ :ಯೇಸು ಕ್ರಿಸ್ತನ ಜನ್ಮ ದಿನದ ಅಂಗವಾಗಿ ಬುಧವಾರ ಪಟ್ಟಣದ ಮೆಥೋಡಿಸ್ಟ್ ಚರ್ಚ್ ಸೇರಿದಂತೆ ತಾಲ್ಲೂಕಿನಾದ್ಯಂತ ಕ್ರಿಸ್‍ಮಸ್ ಹಬ್ಬ ಸಡಗರದಿಂದ ಆಚರಿಸಲಾಯಿತು.

ಮಂಗಳವಾರ ರಾತ್ರಿ 12 ಗಂಟೆಯಿಂದಲೇ ಚರ್ಚ್‍ಗಳಲ್ಲಿ ಯೇಸುವಿನ ಆಗಮನ ಕುರಿತು ಪಟಾಕಿ ಸಿಡಿಸಿ ಸಂಭ್ರಮದಿಂದ ಆಚರಿಸಿದರೆ, ಬುಧವಾರ ಬೆಳಿಗ್ಗೆಯಿಂದ ಎಲ್ಲಾ ಚರ್ಚ್‍ಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಡಿಎಸ್.ಗಿರೀಶ ಗಾಯಕವಾಡ್ ನೇತ್ರತ್ವದಲ್ಲಿ ಕೇಕ್ ಕತ್ತರಿಸುವ ಮೂಲಕ ಕ್ರಿಸ್‍ಮಸ್ ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದರು.

ಯೇಸು ಕ್ರಿಸ್ತನ ಮಹಿಮೆ ಅಪಾರ. ಯೇಸುವಿನ ಸನ್ಮಾರ್ಗದಲ್ಲಿ ಪ್ರತಿಯೊಬ್ಬರೂ ನಡೆಯಬೇಕು. ಯಾರಿಗೂ ಮೋಸ ಮಾಡದೇ ಸತ್ಯದ ಮಾರ್ಗ ನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಾಂತಾಕ್ಲಾಸ್ ಆಕೃತಿ ಮತ್ತು ವಿವಿಧ ಶಾಂತಿ ಸಂದೇಶಗಳ ಮಾದರಿಗಳನ್ನು ನಿರ್ಮಿಸಿ ನೋಡುಗರ ಕಣ್ಮನ ಸೆಳೆಯಿತು.

ತಾಲ್ಲೂಕಿನ ಡಿಗ್ಗಿ, ಮದನೂರು, ಖತಗಾಂವ್, ಸೋನಾಳ, ಡೋಣಗಾಂವ್, ಮುಧೋಳ, ಹೊಳಸಮುದ್ರ, ಠಾಣಾಕುಶನೂರು, ಹಂದಿಕೇರಾ, ದಾಬಕಾ ವಿವಿಧ ಗ್ರಾಮಗಳಲ್ಲಿ ಕ್ರಿಶಿಯನ್ ಅನುಯಾಯಿಗಳು ಹೊಸ ಬಟ್ಟೆ ತೊಟ್ಟು ಹಬ್ಬದ ಸಂಭ್ರಮ ಮೆರೆದರು.

ಸುಶೀಲ ಘಾಗರೆ, ನಿಲೇಶ ಘಾಗರೆ, ಲಕ್ಷ್ಮಣ ಗಾಗರೆ, ಶ್ರಾವಣ ಘಾಗರೆ, ಶಿವಾ ಚವಾಣ್, ಆರ್.ಟಿ.ಕಾಂಬಳೆ, ಜೀವನ ಸೂರ್ಯವಂಶಿ, ದಯಾನಂದ, ಸ್ಯಾಮುಯೆಲ್, ಅವಿನಾಶ ಚವಾಣ್ ಸೇರಿದಂತೆ ಮಹಿಳೆಯರು, ಮಕ್ಕಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT