ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಹಕಾರ ಸಂಘಗಳು ದೇಶದಲ್ಲಿ ಮಾದರಿ’

Last Updated 8 ಅಕ್ಟೋಬರ್ 2022, 5:37 IST
ಅಕ್ಷರ ಗಾತ್ರ

ಭಾಲ್ಕಿ: ‘ಜಿಲ್ಲೆಯ ಪಿಕೆಪಿಎಸ್ ಸಹಕಾರ ಸಂಘಗಳು ರಾಜ್ಯದಲ್ಲಿ ಅಷ್ಟೇ ಅಲ್ಲ ದೇಶದಲ್ಲಿ ಮಾದರಿ ಆಗಿವೆ. ಇನ್ನಷ್ಟು ಬಲಿಷ್ಠ ಆಗಬೇಕು’ ಎಂದು ಸಹಕಾರ ಮಾರಾಟ ಮಹಾಮಂಡಳದ ಆಡಳಿತ ಮಂಡಳಿಯ ನೂತನ ನಿರ್ದೇಶಕ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಹೇಳಿದರು.

ತಾಲ್ಲೂಕಿನ ಸಾಯಿಗಾಂವ ಗ್ರಾಮದಲ್ಲಿ ವಿವಿಧ ಪಿಕೆಪಿಎಸ್ ಸಹಕಾರ ಸಂಘದ ವತಿಯಿಂದ ಶುಕ್ರವಾರ ನಡೆದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಗ್ರಾಮೀಣ ಭಾಗದಲ್ಲಿ ಪಿಕೆಪಿಎಸ್ ಸಹಕಾರ ಸಂಘಗಳು ಉತ್ತಮ ಕಾರ್ಯ ನಿರ್ವಹಿಸುತ್ತಿವೆ. ಇವುಗಳ ಸಹಕಾರದಿಂದ ರೈತರಿಗೆ ಹಾಗೂ ಎಸ್ ಎಚ್‌ಜಿಗಳಿಗೆ ಸಕಾಲಕ್ಕೆ ಸಾಲ ಲಭ್ಯವಾಗುತ್ತಿದೆ. ಪಿಕೆಪಿಎಸ್‌ಗಳು ಇನ್ನಷ್ಟು ಬೆಳೆಯಲು ನಮ್ಮ ಸಹಾಯ ಸಹಕಾರ ಇರುತ್ತದೆ. ಡಿ ಫಾರ್ಮಸಿ ಕಲಿತ ವಿದ್ಯಾರ್ಥಿಗಳು ನಿರುದ್ಯೋಗಿಗಳಾಗದೆ ಗ್ರಾಮೀಣ ಭಾಗದಲ್ಲಿ ಪಿಕೆಪಿಎಸ್ ಸಹಕಾರ ಸಂಘದ ಮಳಿಗೆಯನ್ನು ಪಡೆದು ಜನರಿಕ್ ಮೆಡಿಕಲ್ ಪ್ರಾರಂಭ ಮಾಡಬೇಕು ಎಂದು ಹೇಳಿದರು.

ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಡಿ.ಕೆ.ಸಿದ್ರಾಮ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ನಾಗನಾಥ ಬಗದೂರೆ ಮಾತನಾಡಿದರು. ವೇದಿಕೆ ಮೇಲೆ ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಚಪ್ಪ ಪಾಟೀಲ, ಪರಮೇಶ್ವರ ಮುಗುಟೆ , ಗ್ರಾ.ಪಂ ಅಧ್ಯಕ್ಷೆ ರೇಖಾ ಮಾಧವರಾವ್ ಪ್ರಮುಖರಾದ ಸಂಗಣ್ಣ ಹಣಮಶೆಟ್ಟೆ, ವಿಶ್ವನಾಥ ಮೋರೆ, ಜನಾರ್ಧನ ಜಾಧವ, ಬಸವರಾಜ ಪಾಟೀಲ, ಓಂಕಾರ ಪಟ್ನೆ, ಚಂದ್ರಶೇಖರ ಪಾಟೀಲ,ಅಶೋಕ ಪಾಟೀಲ, ಪ್ರತಾಪ ನೇಳಗೆ ಹಾಜರಿದ್ದರು. ವಿದ್ಯಾಸಾಗರ ಬೇಂದ್ರೆ ಸ್ವಾಗತಿಸಿ, ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT