ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮೂಹಿಕ ಕನ್ನಡ ಗೀತ ಗಾಯನ

ಕನ್ನಡಕ್ಕಾಗಿ ನಾವು ವಿಶೇಷ ಅಭಿಯಾನ
Last Updated 28 ಅಕ್ಟೋಬರ್ 2021, 14:41 IST
ಅಕ್ಷರ ಗಾತ್ರ

ಬೀದರ್: ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಹಮ್ಮಿಕೊಂಡಿರುವ ಕನ್ನಡಕ್ಕಾಗಿ ನಾವು ವಿಶೇಷ ಅಭಿಯಾನದ ಪ್ರಯುಕ್ತ ಮಾತಾಡ್ ಮಾತಾಡ್ ಕನ್ನಡ ಘೋಷವಾಕ್ಯದಡಿ ಇಲ್ಲಿಯ ಪ್ರತಾಪನಗರದ ಸಮಾಜ ಕಲ್ಯಾಣ ಇಲಾಖೆಯ ತಾಲ್ಲೂಕು ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಸಾಮೂಹಿಕ ಕನ್ನಡ ಗೀತ ಗಾಯನ ನಡೆಯಿತು.

ನಾಡಗೀತೆ ‘ಜಯ ಭಾರತ ಜನನಿಯ ತನುಜಾತೆ’, ಕನ್ನಡದ ಶ್ರೇಷ್ಠತೆ ಸಾರುವ ಕುವೆಂಪು ಅವರ ‘ಬಾರಿಸು ಕನ್ನಡ ಡಿಂಡಿಮವ', ನಿಸಾರ್ ಅಹಮ್ಮದ್ ಅವರ ‘ಜೋಗದ ಸಿರಿ ಬೆಳಕಿನಲ್ಲಿ' ಹಾಗೂ ಹಂಸಲೇಖ ಅವರ ‘ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು' ಗೀತೆಗಳನ್ನು ಹಾಡಲಾಯಿತು.

ಇದೇ ವೇಳೆ ‘ಕನ್ನಡ ನಾಡಿನ ಜವಾಬ್ದಾರಿಯುತ ಪ್ರಜೆಯಾಗಿ ನಾನು ಕನ್ನಡದಲ್ಲೇ ಮಾತನಾಡುತ್ತೇನೆ, ಕನ್ನಡದಲ್ಲೇ ಬರೆಯುತ್ತೇನೆ, ಕನ್ನಡದಲ್ಲೇ ನಿತ್ಯ ವ್ಯವಹಾರ ಮಾಡುತ್ತೇನೆ’ ಎಂದು ಸಂಕಲ್ಪ ತೊಡಲಾಯಿತು.

ಇದಕ್ಕೂ ಮುನ್ನ ಸಮಾಜ ಕಲ್ಯಾಣ ಇಲಾಖೆಯ ಬೀದರ್ ತಾಲ್ಲೂಕು ಸಹಾಯಕ ನಿರ್ದೇಶಕ ಅನಿಲಕುಮಾರ ಮೇಲ್ದೊಡ್ಡಿ ಅವರು ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಕಚೇರಿ ಅಧೀಕ್ಷಕ ರಮೇಶ ಗೋಖಲೆ, ಪ್ರಥಮ ದರ್ಜೆ ಸಹಾಯಕಿ ಮಹಾದೇವಿ, ಬೆರಳಚ್ಚುಗಾರ್ತಿ ಅನಿತಾ, ದ್ವಿತೀಯ ದರ್ಜೆ ಸಹಾಯಕ ರತನ್‍ಸಿಂಗ್, ಮೇಲ್ವಿಚಾರಕರಾದ ಗೀತಾ, ಶೀಲಾ, ಸಂಗಮ್ಮ, ಸುಜಾತಾ, ಸೋನಿಕಾ, ವಿಜಯಕುಮಾರಿ, ಆಸಿಯಾ ಬೇಗಂ, ಶಿವಮ್ಮ, ಈಶ್ವರ ಬಬಲಾ, ನಾಗನಾಥ, ಶರಣಬಸಪ್ಪ, ಫೈಜೊದ್ದಿನ್, ಗೌತಮ ಹಾಗೂ ರಾಜಶೇಖರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT