‘ಲಕ್ಷ್ಮಣ್ ಜಾಧವ ಅವರು ಸಿಬ್ಬಂದಿ ಸಂಬಳ ತಡೆ ಹಿಡಿದು ಅವರಿಗೆ ಹೆದರಿಸಿ ಕಡತಗಳಿಗೆ ಸಹಿ ಪಡೆದಿದ್ದಾರೆ. ಅಗೌರವದಿಂದ ನಡೆಸಿಕೊಂಡಿದ್ದಾರೆ. ರೋಗಿಗಳಿಗೆ ಸೂಕ್ತ ಸೇವೆ ನೀಡುವಲ್ಲಿ ವಿಫಲರಾಗಿದ್ದಾರೆ. ಆಡಳಿತ ನಿರ್ವಹಣೆಯಲ್ಲಿ ಬೇಜವಾಬ್ದಾರಿ ತೋರಿದ್ದಾರೆ. ದರಪಟ್ಟಿ ಆಹ್ವಾನಿಸದೆ ಹೆಚ್ಚಿನ ಬೆಲೆಗೆ ಔಷಧಿಗಳನ್ನು ನೇರವಾಗಿ ಖರೀದಿಸಿ ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಿದ್ದಾರೆ. ಕರ್ತವ್ಯಲೋಪ ಎಸಗಿ ಅಧಿಕಾರ ದುರುಪಯೋಗ ಪಡಿಸಿಕೊಂಡಿರುವುದು ತನಿಖೆಯಿಂದ ಸಾಬೀತಾಗಿರುವುದರಿಂದ ಅಮಾನತು ಮಾಡಲಾಗಿದೆ’ ಎಂದು ತಿಳಿಸಿದ್ದಾರೆ.