ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನವಾಡ: ಕಾಂಗ್ರೆಸ್ ಕಾರ್ಯಕರ್ತರಿಂದ ಪಾದಯಾತ್ರೆ

Last Updated 14 ಆಗಸ್ಟ್ 2022, 3:10 IST
ಅಕ್ಷರ ಗಾತ್ರ

ಜನವಾಡ: ಕಾಂಗ್ರೆಸ್ ಕಾರ್ಯಕರ್ತರು ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಬಲಿಷ್ಠ ಭಾರತಕ್ಕಾಗಿ 18 ಕಿ.ಮೀ. ಪಾದಯಾತ್ರೆ ನಡೆಸಿದರು.

ಮನ್ನಳ್ಳಿಯಿಂದ ಪಾದಯಾತ್ರೆ ಆರಂಭಿಸಿ, ಯಾಕತಪುರ, ಸಾತೋಳಿ, ಬುಧೇರಾ, ಕಾಶೆಂಪುರ(ಪಿ) ಮಾರ್ಗವಾಗಿ ಕಮಠಾಣ ತಲುಪಿ ಮುಕ್ತಾಯಗೊಳಿಸಿದರು.

ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ಕಾಂಗ್ರೆಸ್ ನಾಯಕರ ಅಪಾರ ಶ್ರಮ ಇದೆ ಎಂದು ಪಾದಯಾತ್ರೆಗೆ ಚಾಲನೆ ನೀಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು. ಯುವ ಜನತೆ ಸ್ವಾತಂತ್ರ್ಯ ಹೋರಾಟಗಾರರ ಚರಿತ್ರೆ ಅರಿಯಬೇಕು ಎಂದು ಸಲಹೆ ನೀಡಿದರು. ನೇತೃತ್ವ ವಹಿಸಿದ್ದ ಮಾಜಿ ಶಾಸಕ ಅಶೋಕ ಖೇಣಿ ಮಾತನಾಡಿ,‘ದೇಶದ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದಲ್ಲಿ ಅನೇಕರು ತ್ಯಾಗ, ಬಲಿದಾನ ಮಾಡಿದ್ದಾರೆ’ ಎಂದು ಹೇಳಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸಂಗ್ರಾಮ, ಬೀದರ್ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಚಂದ್ರಶೇಖರ ಚನಶಟ್ಟಿ, ಕರೀಮ್ ಸಾಬ್ ಕಮಠಾಣ, ಮುಖಂಡರಾದ ಅಮೃತರಾವ್ ಚಿಮಕೋಡೆ, ಗೋವರ್ಧನ್ ರಾಠೋಡ್, ಸತ್ತಾರ್‍ಮಿಯ್ಯ, ಶಾಮರಾವ್ ಬಂಬುಳಗಿ, ಚಂದ್ರಶೇಖರ ಮಡಕಿ, ರಮೇಶ ಕಮಠಾಣ, ಅಲಿಮೋದ್ದಿನ್, ಅಬ್ದುಲ್ ಸಮದ್, ಗುರಪ್ಪ, ಮಲ್ಲಪ್ಪ, ನೂರೊದ್ದಿನ್, ಸಿರಾಜ್, ಬಂಡೆಮ್ಮ, ರಾಜಕುಮಾರ, ಶಂಕರ, ದೇವೇಂದ್ರಪ್ಪ, ಶ್ರೀದೇವಿ, ಅನುರಾಧಾ, ಚನ್ನಬಸವ, ಅಜ್ಮತ್, ಝಾಕೀರ್, ಯುನೂಸ್, ಸ್ಯಾಮಸನ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT