ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಂಪುರೆ ಶಾಲೆಯಲ್ಲಿ ಸಂವಿಧಾನ ದಿನಾಚರಣೆ

Last Updated 26 ನವೆಂಬರ್ 2022, 14:14 IST
ಅಕ್ಷರ ಗಾತ್ರ

ಜನವಾಡ: ಬೀದರ್ ತಾಲ್ಲೂಕಿನ ಹಮಿಲಾಪುರದ ವಿ.ಎಂ.ರಾಂಪುರೆ ಪಬ್ಲಿಕ್ ಶಾಲೆಯಲ್ಲಿ ಸಂವಿಧಾನ ಅಂಗಿಕಾರ ದಿನ ಆಚರಿಸಲಾಯಿತು.

ಶಾಲೆಯ ಅಧ್ಯಕ್ಷ ಮಹೇಶ ರಾಂಪುರೆ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಾಲಾರ್ಪಣೆ ಮಾಡಿ ಗೌರವಿಸಿದರು.

ಡಾ. ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನ ವಿಶ್ವದಲ್ಲೇ ಶ್ರೇಷ್ಠವಾಗಿದೆ. ದೇಶದ ಎಲ್ಲ ಪ್ರಜೆಗಳಿಗೆ ಸಮಾನ ಹಕ್ಕು ಹಾಗೂ ಕರ್ತವ್ಯಗಳನ್ನು ನೀಡಿದೆ ಎಂದು ಅವರು ಹೇಳಿದರು.

ಮಕ್ಕಳಿಗೆ ಪ್ರಮಾಣ ವಚನ ಬೋಧಿಸಲಾಯಿತು.

ಪ್ರಾಚಾರ್ಯೆ ಶೈಲಜಾ ಡಿ.ಗುಪ್ತಾ, ಮುಖ್ಯಶಿಕ್ಷಕಿ ಅಂಬಿಕಾ ವಿ. ರಾಂಪುರೆ, ಶಿಕ್ಷಕಿಯರಾದ ಮೀನಾಕ್ಷಿ ಪಾಟೀಲ, ನಿಕಿತಾ ಕುಂದೆ, ತ್ರಿವೇಣಿ ಜಮಗೆ, ಪ್ರಿಯಾ ದೇವದುರ್ಗ, ನಂದಿನಿ, ಶ್ರುತಿ, ಸುನಿತಾ, ಸಿಬ್ಬಂದಿ ಸಂಗೀತಾ, ಆಕಾಶ ಹಾಗೂ ದಿನೇಶ್ ಸೋನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT