ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನದ ಸದ್ಬಳಕೆ ಆಗಲಿ: ಜೆಡಿಎಸ್ ನಗರ ಘಟಕದ ಅಧ್ಯಕ್ಷ ಸುಶೀಲ್ ಆವಸ್ಥಿ

Last Updated 26 ನವೆಂಬರ್ 2021, 12:39 IST
ಅಕ್ಷರ ಗಾತ್ರ

ಬಸವಕಲ್ಯಾಣ: ‘ಸಂವಿಧಾನದ ಸದ್ಬಳಕೆ ಆಗಬೇಕು. ಅದರ ಸಂರಕ್ಷಣೆ ಎಲ್ಲರ ಕರ್ತವ್ಯವಾಗಲಿ’ ಎಂದು ಜೆಡಿಎಸ್ ನಗರ ಘಟಕದ ಅಧ್ಯಕ್ಷ ಸುಶೀಲ್ ಆವಸ್ಥಿ ಹೇಳಿದರು.

ನಗರದ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಶುಕ್ರವಾರ ನಡೆದ ಸಂವಿಧಾನ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಪ್ರತಿಯೊಬ್ಬ ಭಾರತೀಯನಿಗೆ ಸಂವಿಧಾನವು ಶ್ರೇಷ್ಠವಾದುದು. ಅದರಲ್ಲಿನ ತತ್ವ ಸಂದೇಶಗಳ ಪಾಲನೆ ಆಗಬೇಕು. ಅದರ ಸಾಮಾನ್ಯ ಮಾಹಿತಿ ಇರಬೇಕು’ ಎಂದರು.

ಪಕ್ಷದ ಕಾರ್ಯಾಧ್ಯಕ್ಷ ಆಕಾಶ ಖಂಡಾಳೆ ಮಾತನಾಡಿ,‘ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಅತ್ಯುತ್ತಮ ಸಂವಿಧಾನವನ್ನು ದೇಶಕ್ಕೆ ನೀಡಿದ್ದಾರೆ. ಶೋಷಿತರಿಗೆ ಹಾಗೂ ಹಿಂದುಳಿದವರಿಗೆ ಸಂವಿಧಾನಬದ್ಧ ಹಕ್ಕುಗಳು ಇನ್ನೂ ಮರಿಚೀಕೆಯಾಗಿವೆ’ ಎಂದರು.

ಮುಖಂಡ ಬಸವಣ್ಣಪ್ಪ ನೆಲ್ಲಗಿ ಸಂವಿಧಾನದ ಪೀಠಿಕೆ ಓದಿ ಪ್ರಮಾಣವಚನ ಬೋಧಿಸಿದರು.

ಪಕ್ಷದ ಉಪಾಧ್ಯಕ್ಷ ಶರಣಪ್ಪ ಪರೆಪ್ಪ, ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಪ್ರೀತಂ ಮದಲವಾಡಾ, ಶಿವಕುಮಾರ ಬೆಳಂಬಗೆ, ಸುನಿಲ ರಾಠೋಡ, ಧನಾಜಿ ರಾಠೋಡ, ಗೌತಮ ಕಾಂಬಳೆ, ತೌಫೀಕ್ ಲಾತೂರೆ ಮೊದಲಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT